ನೊಂದ ಹೃದಯಕ್ಕೆ ಸಂಜೀವಿನಿಯಾದ “ಸಹಾಯಹಸ್ತ “ಟಿಂ

ತಾನೊಂದು ಬಗೆದರೆ ದೈವಂದು ಬಗೆದOತೆ. ಇದೆ ಪರಿಸ್ಥಿತಿಯಲ್ಲಿ ಹಕ್ಲಾಡಿಯ ಗೋಪಾಲ ಮಡಿವಾಳರ ಸ್ಥಿತಿ.

ಹಕ್ಲಾಡಿ ಗ್ರಾಮದ ಕೊಳೂರು ನಿವಾಸಿ ಗೋಪಾಲ ಮಡಿವಾಳರು ತನ್ನ ಮನೆ ಕೆಲಸಕ್ಕೆ ಸಿಮೆಂಟ್ ಚೀಲ ಎತ್ತಿಕೊಂಡು ಬರುವಾಗ ಕಾಲು ಜಾರಿ ಬಿದ್ದ ಪರಿಣಾಮ ಬಲವಾದ ಹೊಡೆತಕ್ಕೆ ಮೆದುಳಿನ ನರ ಅಪ್ಪಚ್ಚಿಯಾಗಿ ದೇಹದ ಎಲ್ಲಾ ಅಂಗಾಂಶಗಳ ಸ್ವಾಧೀನ ಕಳಕೊಂಡು ಸತತ ಹದಿನೈದು ವರ್ಷಗಳಿಂದ ದುಡಿಯುವ ಯಜಮಾನನೇ ಹಾಸಿಗೆಯಲ್ಲಿ ಮಲಗಿ ಸಂಕಷ್ಟದ ಜೀವನ ನಡೆಸುತ್ತಾ ಇದ್ದಾರೆ….

ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ತಾಯಿ ಇದ್ದಾರೆ ತಾನು ದುಡಿದು ತಾಯಿ ಮತ್ತು ಮಕ್ಕಳಿಗೆ ಆಸರೆಯಾಗಬೇಕಾದ ಸಮಯದಲ್ಲಿ ತಾಯಿ ಹಾಗೂ ಪತ್ನಿ ಸಣ್ಣ ಪುಟ್ಟ ಕೆಲಸ ಮಾಡಿ ಮನೆಯ ಮತ್ತು ಮಕ್ಕಳ ವಿಧ್ಯಾಭ್ಯಾಸ ಕ್ಕಾಗಿ ದುಡಿಯಾಬೇಕಾಗಿದೆ. ಇಬ್ಬರು ಮಕ್ಕಳ ಶಿಕ್ಷಣ ಮತ್ತೊಂದು ಕಡೆ, ಮನೆ ಸಂಸಾರ ಸಾಗಿಸಲು ಕಷ್ಟದ ಪರಿಸ್ಥಿತಿಯಲ್ಲಿ ಕಣ್ಣೀರಲ್ಲೇ ಜೀವನ ದೂಡುತ್ತಿದ್ದಾರೆ. ಇದ್ದನ್ನರಿತಾ ನಮ್ಮ ಊರಿನ ಯುವಕರ ತಂಡ ಮೊನ್ನೆ ಕಿಟ್ ಕೊಡಬೇಕು ಅಂತ ಹೋಗಿ ಅವರ ಕಷ್ಟ ನೋಡಿ ಎರಡು ಕಿಟ್ ಕೊಟ್ಟು ಮತ್ತು ಸ್ವಲ್ಪ ಧನಸಹಾಯ ಮಾಡಿ ಅವರಿಗೆ ಧೈರ್ಯ ಹೇಳಿ ಮತ್ತೆ ಬರತ್ತೀವಿ ಎಂದು ಹೇಳಿ ಬಂದರು.

ಸ್ವಲ್ಪ ದಿನದ ನಂತರ ಅವರಿದ್ದ ಪರಿಸ್ಥಿತಿಯನ್ನು ನೋಡಿ ಮನಸ್ಸು ಕೇಳದೆ ಮತ್ತೆ ಪುನಃ ರವಿ ಶೆಟ್ಟಿಗಾರ್ ನೇತೃತ್ವದಲ್ಲಿಹರೀಶ್ ಖಾರ್ವಿ,ಸಂತೋಷ್ ಖಾರ್ವಿ, ಸುದೀರ್ ಖಾರ್ವಿ,ಹೆಬ್ಬುಲಿ ರಮೇಶ್, ಉಮೇಶ್ ದೇವಾಡಿಗ. ಮತ್ತು ಅವರ ಟಿಂ. ಸಹಾಯಹಸ್ತ ವಾಟ್ಸಪ್ ಗ್ರೂಪ್ ರಚಿಸಿ ದಾನಿಗಳಿಂದ ಸಂಗ್ರಹಿಸಿದ ರೂ.25,000 ಹಣದ ಚೆಕ್ ನ್ನು ಗೋಪಾಲ ಮಡಿವಾಳರಿಗೆ ತಲುಪಿಸಿದ್ದಾರೆ.

ಇವರ ಕೆಲಸಕ್ಕೆ ಒಂದು ಸಲಾಂ. ರವಿ ಶೆಟ್ಟಿಗಾರ್ ಮತ್ತು ಬಳಗದ ಸಹಾಯಹಸ್ತ ಟಿಂ ಹೊಸಾಡು, ಗುಜ್ಜಾಡಿ, ನಾಯ್ಕಡಿ, ಗಂಗೋಳ್ಳಿ, ತ್ರಾಸಿ.ಹೊಸಪೇಟೆ, ಕಂಚುಗೋಡು, ಗ್ರಾಮದಲ್ಲಿ ಕಡುಬಡವರಿಗೆ ತಾವೆಲ್ಲರೂ ಹುಡುಕಿಕೊಂಡು ಹೋಗಿ ನೂರರು ಮಂದಿಗೆ ಪುಡ್ ಕಿಟ್ಟ್ ಹಸ್ತಾಂತ್ತರಿಸಿ ನೊಂದ ಜೀವಕ್ಕೆ ಸಂಜೀವಿನಿಯಾಗಿದ್ದಾರೆ.

ನಿಮ್ಮ ಈ ಸಮಾಜಸೇವೆಯೂ ನಿರಂತರವಾಗಿರಲಿ ಮತ್ತು ಶ್ರೀರಾಮ ದೇವರು ತಮಗೆ ಮತ್ತಷ್ಟು ಶಕ್ತಿಯನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡುವಂತಾಗಲಿ ಎಂದು ಆಶಿಸೋಣ.

ಕೆ.ನಾಗೇಶ್ ಖಾರ್ವಿ ಕಂಚುಗೋಡು,
Kharvionline ನ್ಯೂಸ್ ಮೀಡಿಯಾ

2 thoughts on “ನೊಂದ ಹೃದಯಕ್ಕೆ ಸಂಜೀವಿನಿಯಾದ “ಸಹಾಯಹಸ್ತ “ಟಿಂ

  1. ನಲುಗಿದ ಕುಟುಂಬಕ್ಕೆ ಸಹಾಯ ಹಸ್ತದ ಮಾನವೀಯ ಕೈಂಕರ್ಯ ಹೃದಯವಂತರಿಗೊಂದು ಗೌರವಪೂರ್ವಕ ನಮನಗಳು ನಿಮ್ಮ ಬದುಕು ಧನ್ಯತೆ ಪಡೆದಿದೆ🙏🙏🙏🙏👏👏👏

Leave a Reply

Your email address will not be published. Required fields are marked *