ಕೊರೋನ ವೈರಸ್, ಈ ಹೆಸರನ್ನು ಕೇಳಿದರೆ ಸಾಕು ಜಗತ್ತು ಬೆಚ್ಚಿ ಬೀಳುತ್ತಿದ್ದೆ. ಚೀನಾದ ತಪ್ಪಿನಿಂದ ಹುಟ್ಟಿಕೊಂಡ ಈ ವೈರಸ್ ಜಗತ್ತಿನ್ನೆಲ್ಲೆಡೆ ನಿಧಾನವಾಗಿ ಹಬ್ಬುತ್ತಿದೆ.
ಈ ಹಿಂದೆ ಇಂತಹ ಅನೇಕ ಭಯಾನಕ ರೋಗಗಳನ್ನು ಜಗತ್ತು ಕಂಡಿದೆ., ರೋಗಕ್ಕೆ ತುತ್ತಾಗಿ ಲಕ್ಷಾಂತರ ಜನರ ಪ್ರಾಣ ಕಳೆದುಕೊಂಡಿರುವುದು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಬೆಚ್ಚಿ ಬೀಳುಸುತ್ತಿದೆ.
ಕೊರೋನ ವೈರಸ್, ವಿಚಿತ್ರ ರೋಗ ಜಗತ್ತನ್ನು ಎಷ್ಟು ಬದಲಾಯಿಸಿದೆ ನೋಡಿ..
1) ಎಲ್ಲಾ ಜಾತಿ ಧಮ೯ವನ್ನು ಮರೆಸಿ ಇಡೀ ಪ್ರಪಂಚವೇ ಒಟ್ಟುಗೂಡುವಂತೆ ಮಾಡಿತು…
2) ಸ್ವಚತೆ ಬಗ್ಗೆ ತಮಾಷೆ ಮಾಡಿ ನಗಾಡುತ್ತ ಇದ್ದವರು ಇವತ್ತು ಅವರ ಮನೆಗಳನ್ನೇ ಸ್ವಚ ಮಾಡುತ ಇದ್ದಾರೆ. ಇತರರಿಗೂ ಸ್ವಚತೆ ಬಗ್ಗೆ ಅರಿವು ಮೂಡಿಸುತ್ತಾ ಇದ್ದಾರೆ.
3) ನನ್ನ ಗಂಡ ವಿದೇಶದಲ್ಲಿದ್ರು ಅಲ್ಲಿದ್ರು ಕೈ ತುಂಬಾ ಸಂಬಳ ಎಂದು ಹೇಳಿದವರು ಎಲ್ಲಾ ಭಯಾನಕ ರೋಗಕ್ಕೆ ನಲುಗಿ ಈಗ ಎಲ್ಲಾ ಒಟ್ಟಿಗೆ ಸೇರಿ ಒಂದು ತುತ್ತಿಗೂ ಕಷ್ಟಪಟ್ಟು ಜೀವನ ಮಾಡೋ ತರ ಮಾಡಿತು ಈ ವಿಚಿತ್ರ ರೋಗ.
4) ನಾಯಿ, ಹೆಬ್ಬಾವು , ಇಲಿ, ಹಾವುಗಳನ್ನು ‘ ಅಟ್ಟಹಾಸದಿಂದ ಮೆರೆಯುತ್ತ ತಿಂದವರು ..ಕೊರೋನಾ ಎಂಬ ವಿಚಿತ್ರ ರೋಗದ ನರಕಯಾತನೆಯನ್ನು ನೋಡಿ ನಾಯಿ, ಹಾವು,ಇಲಿ ತಿಂದವರು ಈಗ ಸಸ್ಯಹಾರಿ ಆಗಿ ಜೀವನ ನಡೆಸುತ್ತಾ ಇದ್ದಾರೆ.
5) ಸಂಬಂಧಿಕರು ಹೇಗಿದ್ದಾರೆ ಎಂದು ಕೇಳದವರು ಈಗ ಸಂಬಂಧಿಕರ ಮನೆ ಮನೆಗೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಾ ಇದ್ದಾರೆ.
6) ಸದಾ ಗಿಜುಗೂಡುತ್ತಿದ್ದ ಶಾಲೆಗಳು, ಶಾಲೆಯ ಒಳಗಿನ ಬೆಂಚುಗಳು, ಪುಸ್ತಕಗಳು, ಗೋಡೆಗಳು ಮಕ್ಕಳನ್ನು ನೋಡದೆ ನೀರವ ಮೌನ ತಾಳಿದೆ.
7) ಗಿಡಗಳನ್ನು ಬೆಳಸದಿದ್ದವರು ಇಂದೂ ಮನೆ ಮನೆಯಲ್ಲಿ ಗಿಡ ನೆಟ್ಟು ಪರಿಸರ ಕಾಳಜಿ ಮೂಡಿಸುತ್ತಿದ್ದಾರೆ.
8) ಎಲ್ಲೆಲ್ಲೂ ಮಾನವೀಯತೆಯಾ ಮೌಲ್ಯಗಳು ಎದ್ದು ಕಾಣುತ್ತಾ ಇದೆ.
ಕೊರೋನಾ ರೋಗಕ್ಕೆ ನಲುಗಿದವರಿಗೆ ತಮ್ಮ ಸಾವುವನ್ನು ಲೆಕ್ಕಿಸದೆ ತಮ್ಮವರು ಅಂತ ವೈದ್ಯರು ,ನಸ್ ೯ಗಳು ಹೋರಾಟ ಮಾಡುತ್ತಾ ಇದ್ದಾರೆ.
ಏನೇ ಆಗ್ಲೀ ಕೊರೋನಾ ಅದಷ್ಟು ಬೇಗ ಜನರಿಂದ ದೂರ ಹೋಗು, ದೂರ ಆಗಿದ್ದ ಸಂಬಧಿಕರು ಎಲ್ಲಾ ಈಗ ಒಂದೇ ಕಡೆ ಸೇರಿ ಜೀವನ ನಡೆಸುತ್ತ ಇದ್ದಾರೆ, ಮಾನವೀಯತೆಯಾ ಮೌಲ್ಯದ ಅರಿವು ಆಗಿದೆ, ಜೀವದ ಬೆಲೆ ಗೊತ್ತಾಗಿದೆ.
ಪ್ರಕೃತಿಯನ್ನು ಪ್ರಾಣಿ, ಪಕ್ಷಿಗಳನ್ನು ಕಡಿದು ತಿಂದ ಮಾನವನಿಗೆ ಆದರ ಬೆಲೆ ಗೊತ್ತಾಗಿದೆ…ಹೀಗ ಜನರಿಗೆ ನೆಮ್ಮದಿ, ಸುಖಬೇಕು ದಯಾಮಾಡಿ ಕೊರೋನಾ ನೀನು ದೂರ ಹೋಗು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ…
ಚೇತನ ಯುವಾ✍