ಸಮುದ್ರ ರಾಜ ಯಾವಾಗ ಶಾಂತ ಆಗುವನೋ ಎಂಬ ಚಿಂತೆಯಲ್ಲಿ ನಮ್ಮ ಯುವ ಮೀನುಗಾರರು..
ಹಾಂ..ನಮ್ಮ ಮೀನುಗಾರರ ಬದುಕೇ ಹಾಗೆ ಸಮುದ್ರ ರಾಜ ಕೃಪೆ ತೋರಿದರೆ ಮಾತ್ರ ನಮ್ಮ ಜೀವನ ಇಲ್ಲದಿದ್ದರೆ ನಮ್ಮ ಬದುಕು ಬಿರುಗಾಳಿಗೆ ಸಿಕ್ಕ ಹಡಗಿನಂತೆ..ಜೂನ್ 1 ರಿಂದ 2 ತಿಂಗಳ ಕಾಲ ಯಾಂತ್ರೀಕೃತ ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರ ಅಧಿಕೃತ ನಿಷೇಧ ಹೇರುವುದರಿಂದ, ಮೀನುಗಾರರಿಗೆ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ಜೀವನ ನಡೆಸುವುದು ಅನಿವಾರ್ಯ ಆದರೆ ಕಳೆದ 10 ದಿನಗಳಿಂದ ಪ್ರಕೃತಿ(ಸಮುದ್ರ) ಮುನಿದಿರುವುದರಿಂದ ಮೀನುಗಾರಿಕೆಯನ್ನು ಮಾಡಲಾಗದೆ ಅತ್ತ ಜೀವನವನ್ನು ಸರಿಯಾಗಿ ನಡೆಸಲಾಗದೆ ಕೈ ಕಟ್ಟಿ ಕುಳಿತ್ತಿದ್ದಾರೆ.
ಮೀನುಗಾರರ ಬದುಕು ದಿನಗೂಲಿ ಕೆಲಸ ಮಾಡುವವರ ಹಾಗೆ ಅಂದಿನ ದಿನ ಮೀನು ಹಿಡಿದು ತಂದರೆ ಮಾತ್ರ ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ.1/2ದಿನ ಹೇಗೋ ಮೀನುಗಾರಿಕೆಯನ್ನು ಮಾಡದೇ ಜೀವನ ಮಾಡಬಹುದು ಆದರೇ 10/15ದಿನಗಳ ಕಾಲ ಮೀನುಗಾರಿಕೆಯನ್ನು ಮಾಡದೇ ಜೀವನ ಮಾಡೋದು ಕಷ್ಟ.ಯಾಕಂದರೆ ಕೆಲವೊಮ್ಮೆ ತಿಂಗಳುಗಳ ಕಾಲ ಸಮುದ್ರ ರಾಜ ಮುನಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ ಮೀನುಗಾರರ ಕುಟುಂಬದ ಜೀವನ ದುಸ್ತರ ಆಗಿ ಹೋಗುತ್ತದೆ.
ಇಂತಹ ಕಷ್ಟದ ಜೀವನ ನಡೆಸುತ್ತಿರುವ ಮೀನುಗಾರರ ಬಗ್ಗೆ ಯಾವುದೇ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಯೋಜನೆ ತರದಿರುವುದು ಆಶ್ಚರ್ಯವೇ ಸರಿ.
ಹೇಗೆ ರೈತರ ಜೀವನದ ಉನ್ನತಿಗಾಗಿ ಸರ್ಕಾರಗಳು ಹಲವಾರು ಯೋಜನೆ,ಸೌಲಭ್ಯಗಳನ್ನು ಕೊಡುತ್ತವೆಯೋ ಹಾಗೆ ಮೀನುಗಾರರ ಬದುಕನ್ನು ಉನ್ನತಿ ಮಾಡುವ ಯೋಜನೆಗಳನ್ನು ಸರ್ಕಾರ ತರಲಿ ಅನ್ನೋದೇ ನನ್ನ ಹಾಗೂ ಸಮಸ್ತ ಮೀನುಗಾರರ ಆಶಯ
ರಘು ಖಾರ್ವಿ(ಸನಾತನಿ)
ಮಂಕಿ, ಹೊನ್ನಾವರ
ನಿಜವಾಗಿಯೂ ನಮ್ಮ ಮೀನುಗಾರರ ಪರಿಸ್ಥಿತಿ ಮಳೆಗಾಲದಲ್ಲಿ ಬಹಳ ಚಿಂತೆಯ ವಿಷಯವಾಗಿದೆ. ಈಗಿನ ಬದಲಾವಣೆಗೊಂಡ ಹವಾಮಾನದ ಕಾರಣ ಯಾವಾಗ ಮಳೆ ಯಾವಾಗ ಬಿರುಗಾಳಿ ಬರಬಹುದು ಎಂದು ಹೇಳುವುದು ಕಷ್ಟ. ಇಂತಹ ಅನಿಶ್ಚಿತ ಸಂದರ್ಭದಲ್ಲಿ ನಮ್ಮ ಮೀನುಗಾರರು ತಮ್ಮ ಅಸ್ತಿತ್ವವನ್ನು ಉಳಿಸಲು ಮಳೆಗಾಲದಲ್ಲಿ ಬೇರೆ ಯಾವುದಾದರೂ ಉದ್ಯೋಗದ ಬಗ್ಗೆ ವಿಚಾರ ಮಾಡುವುದು ಯೋಗ್ಯ ಎಂದು ನನ್ನ ಅಭಿಪ್ರಾಯ. ಇದರ ಬಗ್ಗೆ ನಮ್ಮ ಖಾರ್ವಿ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಿಗೆ ಕೂಡಿ ಬಹಳ ಮುತುವರ್ಜಿಯಿಂದ ಈ ವಿಶಯದ ಬಗ್ಗೆ ಆಲೋಚನೆ ಮಾಡುವ ಅವಶ್ಯಕತೆ ಇದೆ.
ಧನ್ಯವಾದಗಳು.
ಹಾಂ..ನಿಜವಾದ ಮಾತು…ಮೀನುಗಾರಿಕೆ ಜೊತೆಗೆ ಬೇರೆ ಉದ್ಯೋಗದ ಬಗ್ಗೆ ಕೂಡ ನಾವೆಲ್ಲ ಚಿಂತನೆ ಮಾಡಬೇಕಾಗಿದೆ
ತುಂಬಾ ಧ್ಯವಾದಗಳು ರಘು ಖಾರ್ವಿಯವರೆ ನಮ್ಮ ಮೀನುಗಾರರ ಕಷ್ಟಗಳನ್ನು ಎಲ್ಲರಿಗೂ ಅರ್ಥ ಮಾಡಿಕೊಡುವ ಒಂದು ಒಳ್ಳೆಯ ಪ್ರಯತ್ನಕ್ಕೆ. ಹೀಗೆ ಒಳ್ಳೆಯ ಕೆಲಸ ಮಾಡುವ ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.
ವಿಘ್ನೇಶ್ವರ ರೇ..ನಿಮ್ಮ ಪ್ರೇರಣೆಯ ನುಡಿಗೆ ನನ್ನ ವಂದನೆಗಳು…