ಕಾಸರಕೋಡ ಖಾಸಗಿ ಬಂದರು ನಿರ್ಮಾಣ ಯೋಜನೆಯ ಪೃಭತಿಗಳ ರಕ್ತ ದಾಹಕ್ಕೆ ಬಡ ಮೀನುಗಾರ ತರುಣನ ಜೀವ ಬಲಿಯಾಗಿದೆ.
ಆತನ ಮನೆಯ ಎದುರಿನ ಕಡಲ ತೀರ ಸೇರಿದಂತೆ ಉದ್ದಕ್ಕೂ ಕಡಲ ತೀರ ಮುಕ್ತವಾಗಿದ್ದವು ಇಲ್ಲಿ ಮೀನುಗಾರಿಕೆಯ ದೋಣಿಗಳನ್ನು ಇಡಲು ಮೀನುಗಾರರು ಸೆಡ್ ಗಳನ್ನು ನಿರ್ಮಿಸಿದ್ದರು ಕಡಲ ಮರಳಿನ ಮೇಲೆ ಮೀನುಗಾರರು ದೋಣಿಗಳನ್ನು ದೂಡಿಕೊಂಡು ಮೀನುಗಾರಿಕೆಗೆ ತೆರಳುವ ಪರಿಪಾಠವಿತ್ತು ಆದರೆ ಯಾವಾಗ ಈ ಬಂದರು ನಿರ್ಮಾಣ ಯೋಜನೆಗೆ ಚಾಲನೆ ಸಿಕ್ಕಿತೋ ಅಂದಿನಿಂದ ಮೀನುಗಾರರ ಮೇಲೆ ದೌರ್ಜನ್ಯ ಆರಂಭವಾಗತೊಡಗಿತು ಕಡಲ ದಂಡೆಗಳ ಮೇಲೆ ಭಾರಿ ಗಾತ್ರದ ಕಲ್ಲುಗಳನ್ನು ಹೇರಿ ಸಂಪೂರ್ಣ ಬಂದ್ ಮಾಡಿದ ಪರಿಣಾಮವಾಗಿ ದೋಣಿಗಳನ್ನು ಕಡಲ ದಂಡೆಗೆ ತರುವುದು ಬಿಡಿ ಮೀನುಗಾರರಿಗೆ ನಡೆದಾಡುವುದು ಕಷ್ಟವಾಯಿತು.
ಇಡೀ ಕಡಲನ್ನೇ ಗುತ್ತಿಗೆ ತೆಗೆದುಕೊಂಡವರಂತೆ ಬಂದರು ನಿರ್ಮಾಣ ಯೋಜನೆಯ ಪೃಭತಿಗಳು ಮೀನುಗಾರರ ಮೇಲೆ ದಬ್ಬಾಳಿಕೆ ಮಾಡಿ ಇಲ್ಲಿ ಮೀನುಗಾರಿಕೆ ಮಾಡದಂತೆ ನಿರ್ಬಂಧ ಹೇರತೊಡಗಿದರು ಅನಿವಾರ್ಯವಾಗಿ ಇಕೋ ಬೀಚ್ ಕಡೆಗೆ ತಮ್ಮ ದೋಣಿಗಳೊಂದಿಗೆ ಮೀನುಗಾರರು ವಲಸೆ ಹೋಗಬೇಕಾಯಿತು ಈ ಪ್ರದೇಶ ತೀರಾ ಅಪಾಯಕಾರಿ ಕಡಲಲೆಗಳಿಂದ ಕೂಡಿರುವ ಪ್ರಕುಬ್ದ ಪ್ರದೇಶವಾಗಿದ್ದು, ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಪೈಕಿ ಉದಯ ತಾಂಡೇಲ ಜೀವ ಕಳೆದುಕೊಂಡಿದ್ದು ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಡವಾಳ ಶಾಹಿ ಬಂದರು ನಿರ್ಮಾಣ ಯೋಜನೆಯ ಪೃಭತಿಗಳ ಕ್ರೌರ್ಯಕ್ಕೆ ಬಡ ಮೀನುಗಾರರ ಜೀವ ಬಲಿಯಾಗಿದೆ ಈ ಕ್ರೂರಿಗಳ ಅಟ್ಟಹಾಸಕ್ಕೆ ಮತ್ತೆಷ್ಟು ಜೀವಗಳು ಬಲಿಯಾಗಬೇಕೇನು ಈ ದುರಂತಕ್ಕೆ ಖಾಸಗಿ ಬಂದರು ಯೋಜನೆಯ ಪೃಭತಿಗಳೇ ಮುಖ್ಯ ಕಾರಣರಾಗಿದ್ದು ಅವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವಾದರೂ ಮನುಷ್ಯತ್ವವೇ ಇಲ್ಲದ ಕ್ರೂರಿಗಳಿಗೆ ಹೊಣೆಗಾರಿಕೆ ಎಲ್ಲಿಂದ ಬರಬೇಕು ಹೆಣದ ಮೇಲೆ ರಾಜಕೀಯ ನಡೆಸಿ ಅಧಿಕಾರದ ಗದ್ದುಗೆ ಹಿಡಿದವರು ಈಗ ನಾಪತ್ತೆಯಾಗಿದ್ದು ಮತ್ತಷ್ಟು ಮೀನುಗಾರರ ಹೆಣ ಬೀಳಲಿ ಎಂದು ಕಾಯುತ್ತಿದ್ದಾರೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದ ಜನ ವಿರೋಧಿ ಯೋಜನೆಗಳನ್ನು ಜಾರಿಗೆ ತಂದು ನೈಸರ್ಗಿಕ ಪರಿಸರವನ್ನು ಹಾಳು ಮಾಡಿ ಬಡ ಜನರನ್ನು ನಿರ್ವಸಿತರನ್ನಾಗಿ ಮಾಡುವ ಧೂರ್ತ ಬಂಡವಾಳ ಶಾಹಿಗಳೊಂದಿಗೆ ಕೈ ಮಿಲಾಯಿಸುವ ಜನಪ್ರತಿನಿಧಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಸರ್ವಸ್ವವನ್ನೂ ಕಳೆದುಕೊಳ್ಳುವ ಆತಂಕದಲ್ಲಿ ಮೀನುಗಾರರು ಆಕಾಶದ ಕಡೆ ನೋಡಿ ಬಾಯಿ ಬಾಯಿ ಬಡಿದುಕೊಳ್ಳುವುದನ್ನು ಬಿಟ್ಟು ಬೇರೇನೂ ಉಳಿಯಲಾರದ ಪರಿಸ್ಥಿತಿ ಸೃಷ್ಟಿಯಾಗಿರುವುದಂತೂ ಸುಳ್ಳಲ್ಲ.
ಬೆಳಿಗ್ಗೆ ಮೃತಪಟ್ಟ ಬಡ ಮೀನುಗಾರರ ಮನೆ ಬಳಿ ಹೋದಾಗ ನನಗೆ ಕಣ್ಣೀರು ತುಂಬಿ ಬಂದು ಹೃದಯ ನೋವಿನಿಂದ ಚಡಪಡಿಸಿತು ಸಾಂತ್ವನ ಹೇಳಲು ಬಂದ ಅಕ್ಕ ಪಕ್ಕದ ಮಹಿಳೆಯರ ಕಣ್ಣಂಚಿನಲ್ಲಿ ನೀರು ಜಿನುಗುತಿತ್ತು ಆ ಪುಟ್ಟ ಮನೆಯ ಪರಿಸ್ಥಿತಿ ಕೂಡಾ ಚೆನ್ನಾಗಿಲ್ಲ ಗಂಡನನ್ನು ಕಳೆದುಕೊಂಡು ಐದು ವರ್ಷದ ಕಂದಮ್ಮನನ್ನು ಎದೆಗವಚಿಕೊಂಡು ರೋಧಿಸುವ ಮೃತ ಮೀನುಗಾರನ ಪತ್ನಿ, ಮಗನನ್ನು ಕಳೆದುಕೊಂಡ ವೃದ್ಧ ತಂದೆ ತಾಯಿಗಳ ಆಕ್ರಂದನ ನೋಡಿದರೆ ಕಲ್ಲು ಹೃದಯ ಕೂಡಾ ಕರಗುತ್ತದೆ ಆದರೆ ಖಾಸಗಿ ಬಂದರು ನಿರ್ಮಾಣ ಯೋಜನೆಯ ಹೃದಯವೇ ಇಲ್ಲದ ಕ್ರೂರಿಗಳಿಗೆ ಈ ಬಡ ಮೀನುಗಾರರ ನೋವು ಸಂಕಟಗಳು ಹೇಗೆ ಅರ್ಥ ವಾಗುತ್ತದೆ?
ಉಮಾಕಾಂತ ಖಾರ್ವಿ ಕುಂದಾಪುರ
ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನಿಜವಾದ ನೋವನ್ನು ಹೊರತಂದಿದ್ದಕ್ಕಾಗಿ KharviOnline ತಂಡದ ಹೊನ್ನಾವರ ಪ್ರತಿನಿಧಿಯನ್ನು ನಾನು ಪ್ರಶಂಸಿಸುತ್ತೇನೆ. ಬಡ ಮೀನುಗಾರರ ಜೀವನ ಮತ್ತು ಜೀವನೋಪಾಯದ ನಷ್ಟದ್ದಲ್ಲಿ ಬಂಡವಾಳಶಾಹಿಗಳ ಅಭಿವೃದ್ಧಿ