ಕುಂದಾಪುರ ತಾಲೂಕಿನ ತ್ರಾಸಿ ಪಂಚಾಯಿತಿ ವ್ಯಾಪ್ತಿಯ ತ್ರಾಸಿ ಬೀಚ್ ಪರಿಸರದ ಆರಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹೊಂಡಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ಯಾಚ್ವರ್ಕ್ ಮಾಡುವುದರ ಮುಖಾಂತರ ಯುವಕರ ತಂಡದ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.
ತ್ರಾಸಿ ಬೀಚ್ ಪರಿಸರದ ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದಿದ್ದ ಹೊಂಡವನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಮಾಜಮುಖಿ ಕಾರ್ಯಕ್ಕೆ ಬೈಂದೂರು ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಂತೋನಿ ಡಿಸೋಜ ತ್ರಾಸಿ, ಬೈಂದೂರು ಕಾರ್ಮಿಕ ಪ್ರಕೋಷ್ಠದ ಸಂಚಾಲಕರಾದ ರವೀಂದ್ರ ಖಾರ್ವಿ ಹೊಸಪೇಟೆ – ತ್ರಾಸಿ, ಭಾಸ್ಕರ್ ಮೊಗವೀರ ಮತ್ತು ಸ್ಥಳೀಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶ್ರಮದಾನ ಮಾಡಿ ಸಹಕರಿಸಿದರು.
ಕಾಂಕ್ರೀಟ್ ರಸ್ತೆಯ ಮೇಲ್ಭಾಗದಲ್ಲಿಅಲ್ಲಲ್ಲಿ ಹೊಂಡ ಬಿದ್ದಿದ್ದು ಪ್ರಯಾಣಿಕರ ಸಂಚಾರಕ್ಕೆ ದುಸ್ತರವಾಗಿದೆ, ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು ಕಷ್ಟಕರವಾಗಿತ್ತು ಮಳೆಗಾಲ ಕೂಡ ಆಗಿದ್ದರಿಂದ ನೀರು ತಂಬಿಕೊಂಡ ಹೊಂಡ-ಗುಂಡಿ ಗಳನ್ನು ಗುರುತಿಸಿ ಸರಕಾರದ ನೆರವನ್ನು ಕಾಯದೆ ಜನತೆಯ ಹಿತದೃಷ್ಟಿಯಿಂದ ನಮ್ಮ ಸ್ವಂತ ಖರ್ಚಿನಲ್ಲಿ ಅಂತೋನಿ ಡಿಸೋಜ ನೇತೃತ್ವದಲ್ಲಿ ದುರಸ್ತಿ ಮಾಡಲಾಗಿದ್ದು ನಮಗೂ ಸಂತೋಷವಾಗಿದೆ.
ರವೀಂದ್ರ ಖಾರ್ವಿ
ಬಿಜೆಪಿ ಬೈಂದೂರು ಕೈಗಾರಿಕಾ ಪ್ರಕೋಷ್ಠದ ಸಂಚಾಲಕ
ತುಂಬಾ ಶ್ಲಾಘನೀಯ ಕೆಲಸ ಮಾಡಿದ್ದಾರೆ ಜನಸೇವೆ ಹಾಗೂ ಜವಾಬ್ದಾರಿ ಏನು ಎಂಬುದಕ್ಕೆ ಈ ಮೂಲಕ ರವೀಂದ್ರ ಖರ್ವಿಜಿ ಯವರು ಮಾದರಿಯಾಗಿದ್ದಾರೆ🙏