ಹೃದಯವಂತ ಶ್ರೀ ಮಂಕಾಳ ವೈದ್ಯ

ಜನಸೇವೆಯ ಇತಿಹಾಸ ಸೃಷ್ಟಿಸುವ ಮಹನೀಯರು ಇಟ್ಟ ಹೆಜ್ಜೆ, ತೊಟ್ಟ ದೀಕ್ಷೆಗಳು ಎಂದಿಗೂ ನವನವೋನ್ಮೇಷಶಾಲಿನಿಯಾದ ಕ್ರಿಯಾಶೀಲತೆಯಿಂದ ಪರಿಪೂರ್ಣವಾಗಿರುತ್ತದೆ ಎಂಬುದಕ್ಕೆ ಭಟ್ಕಳದ ಮಾಜಿ ಶಾಸಕ ಹೃದಯವಂತ ರಾಜಕಾರಣಿ ಶ್ರೀ ಮಂಕಾಳ ವೈದ್ಯರು ಹೃದಯಸ್ಪರ್ಶಿಯಾಗಿ ಪ್ರಸ್ತುತರಾಗುತ್ತಾರೆ ಅವರ ಅಧಿಕಾರಾವಧಿಯಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಕೈಗೊಂಡ ಅಪರಿಮಿತ ಅಭಿವೃದ್ಧಿ ಕಾರ್ಯಗಳು ಪ್ರತಿಯೊಂದು ಕಲ್ಲು ಕಲ್ಲಿನಲ್ಲಿ ಸಾಧನೆಯ ಸೊಲ್ಲಾಗಿ ಪ್ರತಿದ್ವನಿಸುತ್ತದೆ ಮಾನವೀಯ ಸೇವಾ ಕೈಂಕರ್ಯದ ಬಂಗಾರದ ಮನುಷ್ಯರಾಗಿ ಕಂಗೊಳಿಸುವ ಮಂಕಾಳ ವೈದ್ಯರು ಕಾಸರಕೋಡ ಟೊಂಕ ಪ್ರದೇಶದ ಬಡ ಮೀನುಗಾರರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದು, ಬೃಹತ್ ಹೋರಾಟಕ್ಕೆ ಸ್ಪೂರ್ತಿದಾಯಕ ಸೆಲೆಯಾಗಿದ್ದಾರೆ.

ವಾಣಿಜ್ಯ ಬಂದರು ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಯಿಂದ ಕಡಲಿನಲ್ಲಿ ಜೀವ ಕಳೆದುಕೊಂಡ ಬಡ ಮೀನುಗಾರ ಉದಯ ತಾಂಡೇಲ್ ಕುಟುಂಬಸ್ಥರಿಗೆ ಸಾಂತ್ವನ ನೀಡಿ ಅವನ ಮಗುವಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಭರವಸೆ ನೀಡಿದ್ದಾರೆ ಮೃತ ಮೀನುಗಾರನ ಕುಟುಂಬಸ್ಥರಿಗೆ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರು ಒಂದು ಲಕ್ಷ ಪರಿಹಾರ ನೀಡುವಲ್ಲಿ ಮಂಕಾಳ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ ಅಧಿಕಾರವಿಲ್ಲದಿದ್ದರೂ ಮಂಕಾಳ ವೈದ್ಯರ ಸೇವಾ ಕೈಂಕರ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದ್ದು ಹೃದಯವಂತನಿಗೆ ಸಾವಿರದ ನಮನಗಳು.

ವರದಿ: ರೇಣುಕಾ ತಾಂಡೇಲ್, ಟೊಂಕ ಕಾಸರಕೋಡ

Leave a Reply

Your email address will not be published. Required fields are marked *