ಮಹಾರಾಷ್ಟ್ರ ಅಲ್ಲ ಗುಜರಾತಿನವರಾದ್ರೂ ಇವನಿಗೇನಾಯ್ತು?

ಮಹಾರಾಷ್ಟ್ರ ಅಲ್ಲ ಗುಜರಾತಿನವರಾದ್ರೂ ಇವನಿಗೇನಾಯ್ತು ಸಂವಿಧಾನದ ಪ್ರಕಾರ ಇಡೀ ದೇಶದಲ್ಲಿ ಬದುಕುವ ಹಕ್ಕಿದೆ ಕಡಲತೀರದಲ್ಲಿ ಬದುಕೋದು ಸಮಾಜಘಾತಕ ಚಟುವಟಿಕೆ ಮಾಡಲಿಕ್ಕಲ್ಲ ಜೀವನ ನಿರ್ವಹಣೆಗಾಗಿ ಮೀನುಗಾರಿಕೆ ಮಾಡಲು ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಭೂಮಿಯ ಹಕ್ಕು ಪತ್ರ ಇಲ್ಲದಿರಬಹುದು ಮೀನುಗಾರರನ್ನು ರಾಜ್ಯದವರಲ್ಲ ಅನ್ನಲು ಇವರ್ಯಾರು ಮೂರು ಕಾಸಿನವರು ಹಾಗಾದರೆ ಈ ರಾಜ್ಯದಲ್ಲಿರುವ ಎಲ್ಲಾ ಜಾತಿ, ಧರ್ಮ, ಜನಾಂಗದವರು ಇದೇ ರಾಜ್ಯದವರಾ?

ಒಬ್ಬೊಬ್ಬರು ಒಂದೊಂದು ದಿಕ್ಕಿನಿಂದ ಬಂದವರೇ ಕೆಲವು ಜನಾಂಗ ಸಾವಿರ ವರ್ಷಗಳ ಹಿಂದೆ ಬಂದಿರಬಹುದು ಕೆಲವರು 100 ವರ್ಷಗಳ ಹಿಂದೆ ಬಂದಿರಬಹುದು ಕೊಂಕಣಿ ಖಾರ್ವಿ ಜನಾಂಗದವರು ಪೋರ್ಚುಗೀಸರ ದಬ್ಬಾಳಿಕೆಯಿಂದಾಗಿ 400 ವರ್ಷಗಳ ಹಿಂದೆ ಕೊಂಕಣ ಕರಾವಳಿಯ ದಕ್ಷಿಣ ಭಾಗಕ್ಕೆ ವಲಸೆ ಬಂದವರು ಆಗ ಕರ್ನಾಟಕ ರಾಜ್ಯ ಇರಲಿಲ್ಲ ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯ ಉದಯವಾಗಿ, ನಂತರ ಕರ್ನಾಟಕ ಆಗಿದ್ದು ಸ್ವಾತಂತ್ರ್ಯಪೂರ್ವದಲ್ಲಿಯೇ ಯಾವ ಯಾವುದೋ ದೇಶಗಳಿಂದ ಬಂದವರಿಗಿಲ್ಲಿ ಮಣೆ ಹಾಕಿ ಸ್ವಾಗತ ಮಾಡಿದ್ದಾರೆ ತಲತಲಾಂತರಗಳಿಂದ ಈ ನೆಲದಲ್ಲಿ ಬದುಕುತ್ತಿರುವವರಿಗೆ ಹಕ್ಕಿಲ್ಲ ಎಂದರೆ ಹೇಗೆ RTC ಇದ್ದವರು ಮಾತ್ರ ಈ ರಾಜ್ಯದ ಪ್ರಜೆಗಳ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ನಿಯಮ ನಿಬಂಧನೆಗಳನ್ನು ಎಲ್ಲೂ ಪ್ರತಿಭಟಿಸದೇ, ದೇಶ ನಿಷ್ಠರಾಗಿ, ರಾಜ್ಯನಿಷ್ಠರಾಗಿ ಬದುಕುತ್ತಿರುವ ಕೊಂಕಣಿ ಖಾರ್ವಿ ಸಮಾಜದ ಬಗ್ಗೆ ಈ ರೀತಿ ಹೊಲಸು ಮಾತನಾಡಬೇಕಾದರೆ, ಅವರು ಹೊಲಸು ತಿನ್ನುವವರೇ ಆಗಿರಬೇಕು.

ನೂರಾರು ವರ್ಷಗಳಿಂದ ನೆಲೆನಿಂತ ನೆಲದಲ್ಲಿ ವಾಸ ಮಾಡಲು ಅವಕಾಶ ಕೊಡಿ ಅಂತ ಮಾತ್ರ ಕೇಳುತ್ತಿರುವುದು ಕೋಟಿ ಕೋಟಿ ಲೂಟಿ ಹೊಡೆಯುವರು ನಿಮ್ಮ ಕಣ್ಣಿಗೆ ಕಾಣುವುದಿಲ್ವ. ಮಾನವೀಯ ನೆಲೆಯಲ್ಲಿ ಮತ್ತು ಶಾಂತಿಯುತವಾಗಿ ಸರಕಾರಕ್ಕೆ ಖಾರ್ವಿ ಜನಾಂಗ ಮನವಿ ಮಾಡಿಕೊಳ್ಳುತ್ತಿದೆ. ಖಾರ್ವಿ ಸಮಾಜ ಎಲ್ಲೂ ಸಹ ಕಾನೂನು ಮೀರಿ ಪ್ರತಿಭಟನೆ ನಡೆಸಿಲ್ಲ ಅದರ ಎಡೆಯಲ್ಲಿ ಕೆಲವು ಅರ್ಧ ಬೆಂದ ಗೋಮುಖ ವ್ಯಾಘ್ರರು ಇಡೀ ಸಮಾಜವನ್ನು ಪರಕೀಯರು ಎಂದು ಸರ್ಕಾರಕ್ಕೆ ಬಿಂಬಿಸಿ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ ಭಾರತದಲ್ಲಿ ವಾಸಿಸುವ ಭಾರತದ ಯಾವ ಪ್ರಜೆಯೇ ಆಗಲಿ, ಅವರಿಗೆ ವಾಸಿಸಲು ಅನುವು ಮಾಡಿಕೊಡುವುದು ಸರಕಾರದ ಕರ್ತವ್ಯ ಕೂಡ ಸರಕಾರದ ಯೋಜನೆ ತಂದಾಗ ಇಂತಹ ಯೋಜನೆಗಳಿಂದ ಸಾಮಾನ್ಯ ಜನರಿಗೆ ಸಮಸ್ಯೆ ಆಗಿಯೇ ಆಗುತ್ತದೆ ಜನಸಾಮಾನ್ಯರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿ ಸರಕಾರಕ್ಕೂ ಬೇಕು ಜೊತೆಗೆ ಸ್ಥಳೀಯ ಎಲ್ಲಾ ಸಮಾಜಕ್ಕೂ ಬೇಕು ನೆಲೆ ಕಳೆದುಕೊಂಡು ಒಂದು ಜನಾಂಗದ ಬಗ್ಗೆ ಸಹಾನುಭೂತಿ ಹೊಂದಿರಬೇಕಾದ ಈ ಹೊತ್ತಿನಲ್ಲಿ ಬೆರಳೆಣಿಕೆಯಷ್ಟು ಕೆಲವರು, ಬೇರೆಯವರ ಮನೆಗೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವುದು ವಿಪರ್ಯಾಸ.

ನಾಖಾರ್ವಿ ಕಂಚುಗೋಡು

3 thoughts on “ಮಹಾರಾಷ್ಟ್ರ ಅಲ್ಲ ಗುಜರಾತಿನವರಾದ್ರೂ ಇವನಿಗೇನಾಯ್ತು?

  1. ನಾಖಾರ್ವಿ ಕಂಚಗೋಡುರವರ ಲೇಖನ ವಾಸ್ತವತೆಯನ್ನು ಅನಾವರಣಗೊಳಿಸಿದೆ.👏👏👏🙏🙏🙏

  2. ಆರ್ಥಿಕ ಸ್ಥಿರತೆ ಮತ್ತು ಆಧುನಿಕ ಜಗತ್ತಿನ ಜಂಜಾಟದಲ್ಲಿ … ನಮ್ಮ ಸಮುದಾಯದ ಯುವಕರು … ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳಿಂದ ಕ್ರಮೇಣವಾಗಿ ದೂರಾಗುತ್ತಿದರೆ. ಇದು ಭವಿಷ್ಯದಲ್ಲಿ ಅವರನ್ನು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅರಿವಿಲ್ಲದಿರುವಂತೆ ಮಾಡುತ್ತದೆ. ಇದರಿಂದ ಯಾರೋ ಹಾದಿಹೊಕ್ಕರು ಮತ್ತು ಮೂರುಕಾಸಿನ ವ್ಯಕ್ತಿಗಳು ನಮ್ಮ ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳ ಮೇಲೆ ಮಾತಿನ ಹೊಲಸು ಎಸೆದರು ಅದು ಅವರಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.ಹಾಗಾಗಿ ನಿಮ್ಮ ಮಾಹಿತಿಯುಳ್ಳ ಮತ್ತು ಸ್ಪೂರ್ತಿದಾಯಕ ಬರವಣಿಗೆಯ ಮೂಲಕ ಅವರೆಲ್ಲರನ್ನೂ ಜಾಗೃತಗೊಳಿಸಲು ಮತ್ತು ಒಂದುಗೂಡಿಸುಲು ಸರಿಯಾದ ಸಮಯ.
    ನೀವು ಮತ್ತು ಉಮಾಕಾಂತರಂತ ನಿಜವಾದ ಬುದ್ಧಿಜೀವಿಗಳಿಂದ, “ಲೇಖನಿ ಕತ್ತಿಗಿಂತ ಹರಿತವಾದ್ದು” ಎಂಬದನ್ನು ತೋರಿಸಲು ಸಾಧ್ಯ.

Leave a Reply

Your email address will not be published. Required fields are marked *