ಮುಖವಿಲ್ಲದ ರಣಹೇಡಿಯೊಬ್ಬ ಅಭಿಮಾನಿ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ಮೀನುಗಾರ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾನೆ ಇದರ ಜೊತೆಗೆ ಹೊನ್ನಾವರ ಕಾಸರಕೋಡ ಮೀನುಗಾರರನ್ನು ಗೋಲಿಬಾರ್ ಮಾಡಿಯಾದರೂ ಒಕ್ಕಲೆಬ್ಬಿಸಬೇಕೆಂದು ಹೊಲಸುನಾಲಿಗೆಯ ಮಾತುಗಳನ್ನು ಅಕ್ಷರ ರೂಪದಲ್ಲಿ ಹರಿಯಬಿಟ್ಟಿರುತ್ತಾನೆ ಈ ಮತಿಗೇಡಿ ಯಾರೇ ಆಗಿರಲೀ ನಮ್ಮ ಸಮಾಜದ ಆಸ್ಮಿತೆಯನ್ನು ಪ್ರಶ್ನಿಸಿ ಅವಹೇಳನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ನಾವು ಈ ನೆಲದ ಮಣ್ಣಿನ ಮಕ್ಕಳು ನಾಡು ನುಡಿ ಸಂಸ್ಕೃತಿಯ ರಾಯಭಾರಿಗಳು ನಾವು ಯಾವ ನಾಲಾಯಕ್ ಗಳಿಂದ ಪಾಠ ಕಲಿಯಬೇಕಾದ ಅಗತ್ಯ ವಿಲ್ಲ.
ಮೀನುಗಾರರನ್ನು ಈ ಪರಿಯಲ್ಲಿ ಅವಹೇಳನ ಮಾಡಲು ದುರುಳರಿಗೆ ಧೈರ್ಯ ಬಂದದ್ದು ಪ್ರಚೋದನಕಾರಿ ಮಾತುಗಳೆಂಬುದು ಸಾರ್ವತಿಕ ಅಭಿಪ್ರಾಯವಾಗಿದೆ ಈ ಎಲ್ಲಾ ಬೆಳವಣಿಗೆಗಳು ಮೀನುಗಾರರ ಸಮಾಧಿ ಮೇಲೆ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ಧೂರ್ತರ ಮತ್ತು ಅವರ ಎಂಜಲು ಕಾಸಿಗೆ ಜೊಲ್ಲು ಸುರಿಸುವ ಸ್ವಾರ್ಥಿಗಳ ಕುಹಕ ತಂತ್ರಗಾರಿಕೆಯ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿರುತ್ತದೆ ಸಮಸ್ತ ಮೀನುಗಾರ ಸಮಾಜ ಒಂದಾಗಿ ನಮ್ಮನ್ನು ಸರ್ವನಾಶ ಮಾಡಲೊರಟಿರುವ ಮಹಾಪಾತಕಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
www.kharvionline.com
ನಾವು ಕರುನಾಡಿನ ಮಣ್ಣಿನ ಮಕ್ಕಳು. ನಮ್ಮ ಆಸ್ಮಿತೆಯನ್ನು ಪ್ರಶ್ನಿಸಿದ ವಿಕೃತ ಮನಸ್ಸಿನ ದುರುಳರು ಸಮಾಜದಲ್ಲಿ ಆಶಾಂತಿ ಸೃಷ್ಟಿ ಸಲು ಹೊರಟಿದ್ದಾರೆ. ಅವರ ಕೃತ್ಯ ಖಂಡನೀಯ.
ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಕುರುಡು ಅನುಯಾಯಿಗಳ ಈ ಕೇಸರ್ ಎರಚಾಟದಲ್ಲಿ … ಬಡವಾಗುತಿರುವುದು ಮೀನುಗಾರರು … ಯಾಕೆಂದರೆ ನಮ್ಮ ಮತ್ತು ಇಡೀ ಮೀನುಗಾರರ ಸಮುದಾಯ ಒಂದು ನಾಯಕರಿಲ್ಲದ ಸಮುದಾಯ ಎಂದು ನಾನು ಭಾವಿಸುತ್ತೇನೆ … ಕರಾವಳಿ ಪ್ರದೇಶದ ಸಂಪೂರ್ಣ ಮೀನುಗಾರ ಸಮುದಾಯವನ್ನು ಒಟ್ಟುಗೂಡಿಸುವ ಸಮಯ ಇದು … ಇದು ಮೀನುಗಾರರ ಶಕ್ತಿ ಪ್ರದರ್ಶನದ ಸಮಯ … ನಿಮ್ಮ ಸ್ಪೂರ್ತಿದಾಯಕ ಬರವಣಿಗೆಯ ಮೂಲಕ ಅವರೆಲ್ಲರನ್ನೂ ಜಾಗೃತಗೊಳಿಸಲು ಮತ್ತು ಒಂದುಗೂಡಿಸುಲು ಸರಿಯಾದ ಸಮಯ.