85 ರ ದಶಕದಲ್ಲಿ ಬ್ಯಾಡ್ಮಿಂಟನ್ ಅಂದರೆ ಜಿ.ಕೆ.ಶೀನ ಎಂದೇ ಆಗಿತ್ತು

ಭರವಸೆಯ ಆಟಗಾರರಾಗಿ ಬ್ಯಾಡ್ಮಿಂಟನ್ ಅಂಗಣದಲ್ಲಿ ಅವರು ಮೂಡಿಸಿದ ಆ ಕ್ಷಣಗಳು ನಿಜಕ್ಕೂ Superb Yes ನೋ ಡೌಟ್ ಬ್ಯಾಡ್ಮಿಂಟನ್ ಬ್ಯಾಟ್ ಕೈ ಯಲ್ಲಿ ಹಿಡಿದರೆ ಸಾಕು ಅಲ್ಲೊಂದು ಮ್ಯಾಜಿಕ್ ನಡೆಯುತ್ತಿತ್ತು ಎದುರಾಳಿ ಎಷ್ಟೇ ಪ್ರಬಲ ಆಟಗಾರನಾಗಿದ್ದರೂ ಇವರ ಚಾಣಾಕ್ಷತೆಯ ಆಟಗಾರಿಕೆ ಎದುರು ಎದುರಾಳಿ ಸೋಲು ಒಪ್ಪಿಕೊಳ್ಳುತ್ತಿದ್ದ ಕ್ಷಣ ಮಾತ್ರದಲ್ಲಿ ಕಣ್ಣು ರೆಪ್ಪೆ ಮುಚ್ಚಿ ತೆರೆಯುದರಲ್ಲಿ Points ಗೆಲ್ಲುತ್ತಿದ್ದ ಆ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರನೇ ಗಂಗೊಳ್ಳಿಯ ಜಿ.ಕೆ.ಶೀನ ಖಾರ್ವಿ ಸಮುದಾಯದ ಅಪ್ರತಿಮ ಬ್ಯಾಡ್ಮಿಂಟನ್ ಆಟಗಾರ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಯ ಸದಸ್ಯರಾಗಿ ಕ್ಲಬ್ ಗೆ ಹಲವಾರು ಪ್ರಶಸ್ತಿ ಪುರಸ್ಕಾರ ತಂದುಕೊಟ್ಟ ಆಟಗಾರ ಕಾಲೇಜ್ ಡೇಸ್ ನಲ್ಲೂ GKS ತನ್ನ ಆಟಗಾರಿಕೆಯಿಂದ ಗಮನ ಸೆಳೆದವರು.

ಅವರ ಒಂದೊಂದು ಫಿನಿಶಿಂಗ್ so beautiful ಆಗಿರುತ್ತಿತ್ತು ಕ್ರೀಡಾಂಗಣದಲ್ಲಿ ಸವ್ಯಸಾಚಿ ಆಗಿ ಆಡುತ್ತಿದ್ದ ಇವರು ಮೈಯೆಲ್ಲಾ ಕಣ್ಣಾಗಿ ಇದ್ದು ಎಲ್ಲ ಆಟಗಾರರ ಮೇಲೆ ಒಂದು ನಿಗಾ ಇಟ್ಟು ಎಚ್ಚರದಿಂದ ಇರುತ್ತಿದ್ದರು ಇವರ ಆಟವೇ ಕಣ್ಣಿಗೆ ಹಬ್ಬ ವಾಗಿರುತಿತ್ತು ವೇದಿಕೆಯಲ್ಲಿ Prize Distribution ಆಗುವಾಗ ಬ್ಯಾಡ್ಮಿಂಟನ್ First Place Goes to ಎಂದು ನಿರೂಪಕ ಇವರ ಹೆಸರು ಹೇಳುವ ಮೊದಲೇ ಅಲ್ಲಿ ನೆರೆದಿದ್ದ ಜನಸ್ತೋಮ ಒಮ್ಮೆಲೇ ಗಟ್ಟಿಯಾಗಿ ಜಿ.ಕೆ. ಶೀನ ಎಂದು ಗಟ್ಟಿಯಾಗಿ ಕೂಗುತಿತ್ತು ಅಂದರೆ ಬ್ಯಾಡ್ಮಿಂಟನ್ ಯಾವತ್ತಿದ್ರೂ ಅದು GK Sheena ಆಗಿತ್ತು ಸರಣಿಯಂತೆ ಇವರ ಹೆಸರಲ್ಲಿ ಎಲ್ಲ prizes ಇವರ ಪಾಲಾಗುತ್ತಿತ್ತು Really he was a wonderful extraordinary Player.

ಬ್ಯಾಡ್ಮಿಂಟನ್ ಅಲ್ಲದೆ ಕ್ರಿಕೆಟ್, ವಾಲಿಬಾಲ್ ನಲ್ಲೂ GKS ತನ್ನನ್ನು ಗುರುತಿಸಿ ಕೊಂಡಿದ್ದಾರೆ ಸರಿಯಾದ ಅವಕಾಶ ಒಂದು ಸಿಕ್ಕಿದ್ದಲ್ಲಿ ಇವರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರು. ಪ್ರಕಾಶ್ ಪಡುಕೋಣೆ ಯಂತೆ ನಮ್ಮ GKS ಗೂ ಕೂಡ ಮಿಂಚುವ ಅವಕಾಶ ದೊರೆಯುತ್ತಿತ್ತು.

ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಆಟಗಾರರಿಗೂ ಕಡಿಮೆ ಇರಲಿಲ್ಲ ಇವರು ಆಟ ಮಾತ್ರ ಅಲ್ಲದೆ ಕೊಂಕಣ ಖಾರ್ವಿ ಸಮಾಜದ ಏಳಿಗೆಗಾಗಿ ಸದಾ ದುಡಿಯುತ್ತಿರುವ ಸಮಾಜ ಸೇವಕ ರಾಗಿರುವ ಇವರು ಪ್ರಸ್ತುತ ಉಡುಪಿಯಲ್ಲಿ Mahalaxmi Co-operative Bank ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತನ್ನ ಪ್ರಾಮಾಣಿಕತೆ ಯಿಂದ ಹಾಗೂ ಅಹರ್ನಿಶಿ ದುಡಿಮೆಯಿಂದ ಹೆಸರು ಮಾಡಿರುವ ಇವರು ತನ್ನ ಶಾಖೆಯ ATM ಲಾಂಚ್ ಪ್ರಕ್ರಿಯೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬ್ಯಾಡ್ಮಿಂಟನ್ ನಲ್ಲಿ GK Sheena ಎಂದೂ ಮರೆಯದ ಹೆಸರು ಯುವ ಕ್ರೀಡಾಪಟುಗಳಿಗ GK Sheena ಯಾವತ್ತಿಗೂ ಸ್ಫೂರ್ತಿ ಆಗಬಲ್ಲರು.

All the Best Sir

ರವಿ ಕುಮಾರ್ ಗಂಗೊಳ್ಳಿ

Leave a Reply

Your email address will not be published. Required fields are marked *