
ಪ್ರಯಾಗ್‌ರಾಜ್‌ಗೆ ನನ್ನ ಭೇಟಿ
ನಾನು ಪ್ರಯಾಗರಾಜ್ ನಗರದ ಬಗ್ಗೆ ಯಾವಾಗಲೂ ಕೇಳಿದ್ದೆ ಆದರೆ ಅದನ್ನು ನೋಡಿರಲಿಲ್ಲ. ಅಂತಿಮವಾಗಿ ನಗರಕ್ಕೆ 2024 ರಲ್ಲಿ ಭೇಟಿ ನೀಡಲು ಸಾಧ್ಯವಾಯಿತು ಮತ್ತು ಅದು ನಿರಾಶೆಗೊಳ್ಳಲಿಲ್ಲ. ನಗರವು ಚಟುವಟಿಕೆಯಿಂದ ತುಂಬಿತ್ತು ಮತ್ತು ನೋಡಲು ತುಂಬಾ ಇತ್ತು. ವಿಶೇಷವಾಗಿ ನಗರದ ಇತಿಹಾಸ ಮತ್ತು ಸಂಸ್ಕೃತಿಯಿಂದ ಪ್ರಭಾವಿತನಾಗಿದ್ದೆ. ಪ್ರಯಾಗರಾಜ್ ನಿಜವಾಗಿಯೂ ವಿಶಿಷ್ಟವಾದ ಸ್ಥಳವಾಗಿದೆ ಮತ್ತು ನಾನು ಅದನ್ನು ಭೇಟಿ ಮಾಡಲು ಸಾಧ್ಯವಾಯಿತು ಎಂದು ನನಗೆ ತುಂಬಾ ಸಂತೋಷವಾಗಿದೆ.
ಇಷ್ಟು ಸುಂದರವಾಗಿರುತ್ತದೆ ಎಂದು ನಾನು ಊಹಿಸಿರಲಿಲ್ಲ. ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡುವ ಅದೃಷ್ಟ ನನಗೆ ಸಿಕ್ಕಿತು ಮತ್ತು ಅದರ ಸೌಂದರ್ಯದಿಂದ ಸಂಪೂರ್ಣವಾಗಿ ಮಂತ್ರಮುಗ್ಧನಾಗಿದ್ದೆ. ನಗರವು ಮೂರು ನದಿಗಳ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ದಡದಲ್ಲಿ ನೆಲೆಗೊಂಡಿದೆ ಮತ್ತು ಇಲ್ಲಿ ಹಲವಾರು ದೇವಾಲಯಗಳು ಮತ್ತು ಇತರ ಐತಿಹಾಸಿಕ ಸ್ಥಳಗಳನ್ನು ಭೇಟಿ ಮಾಡಬಹುದು.
ಮಹಾ ಕುಂಭ
12 ಪೂರ್ಣ ಕುಂಭ ಮೇಳಗಳ ನಂತರ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ಅಪರೂಪದ ಘಟನೆಗೆ ಹೆಚ್ಚು ಮಹತ್ವವಿದ್ದು ಜನರು ಮಹಾ ಕುಂಭದ ಸಮಯದಲ್ಲಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳ ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ರಂದು ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.
ಪ್ರಯಾಗ್ ರಾಜ್ ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮವಿದೆ.ಸರಸ್ವತಿ ನದಿ ಮಾತ್ರ ನೋಡಲು ಸಿಗದೇ ಗುಪ್ತಗಾಮಿನಿಯಾಗಿ ಹರಿಯುತ್ತದೆ ಈ ನದಿಗಳ ಸಂಗಮ ಸ್ಥಳದಲ್ಲಿ ನಡೆಯುವ ಮಹಾಕುಂಭ ಮೇಳದ ಸಂದರ್ಭದಲ್ಲಿ ನದಿಯಲ್ಲಿ ಮಿಂದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪರಮ ನಂಬಿಕೆಯಿದೆ
ಈ ಕುಂಭಮೇಳಕ್ಕೆ 2500 ಕೋಟಿ ವೆಚ್ಚವಾಗಲಿದ್ದು,ಅಂದಾಜು 30 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಈ ಮಹಾ ಕುಂಭಮೇಳ ಆಚರಣೆಯ ಹಿಂದೆ ಪೌರಾಣಿಕ ಕಥೆಯೊಂದು ಅಡಕವಾಗಿದೆ. ಪುರಾಣ ಕಾಲದಲ್ಲಿ ಸಮುದ್ರ ಮಥನ ಕಾಲದಲ್ಲಿ ಅಮೃತದ ಮಡಕೆಕ್ಕಾಗಿ ದೇವತೆಗಳು ಮತ್ತು ದಾನವರ ಮಧ್ಯೆ ತೀವ್ರ ಹೋರಾಟ ನಡೆಯುತ್ತದೆ. ಆ ಸಂದರ್ಭದಲ್ಲಿ ಅಮೃತದ ಮಡಕೆಯಿಂದ ಅಮೃತದ ಹನಿಗಳು ಜಾರಿ ನಾಲ್ಕು ಸ್ಥಳದಲ್ಲಿ ಬೀಳುತ್ತದೆ. ಆ ಪುಣ್ಯ ಸ್ಥಳ ಯಾವುದೆಂದರೆ ಪ್ರಯಾಗ್ ರಾಜ್, ಹರಿದ್ವಾರ, ನಾಸಿಕ್ ಮತ್ತುಉಜ್ಜಯಿನಿ ಹಾಗಾಗಿ ಮಹಾಕುಂಭ ಮೇಳ ಆಚರಣೆಯ ಸಂಪ್ರದಾಯ ರೂಢಿಗೆ ಬಂತು.
ಪ್ರಾಚೀನಕಾಲದಿಂದಲೂ ಅವಿಚ್ಚಿನ್ನ ಧಾರ್ಮಿಕ ಪರಂಪರೆಯ ಅಭೂತಪೂರ್ವ ಮತ್ತು ಪರಮ ನಂಬಿಕೆಯ ದ್ಯೋತಕವಾಗಿ ನಡೆದುಕೊಂಡು ಬಂದಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರೆ ಮನುಷ್ಯನ ಆತ್ಮ ಮತ್ತು ದೇಹದ ಶುದ್ಧೀಕರಣಗೊಳ್ಳುತ್ತದೆ ಎಂದು ಪರಮೇಶ್ವರನ ಅಮೃತ ವಾಕ್ಯವಿದೆ.
ಪ್ರಯಾಗ್ ರಾಜ್ ನಗರವು ಅದರ ಐತಿಹಾಸಿಕ ಪ್ರಾಮುಖ್ಯತೆ, ಗಂಗಾ ನದಿಯ ಸಂಪರ್ಕ ಮತ್ತು ತೀರ್ಥಯಾತ್ರಾ ಕೇಂದ್ರದ ಪಾತ್ರದಿಂದಾಗಿ ವಿಶೇಷವಾಗಿದೆ. ನಗರವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅನೇಕ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ನೆಲೆಯಾಗಿದೆ. ಪ್ರಯಾಗ್ ರಾಜ್ ಅತ್ಯಂತ ಸೌಂದರ್ಯ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಸ್ಥಳವಾಗಿದೆ.
ಸುಧಾಕರ ಖಾರ್ವಿ
ಸಂಪಾದಕರು
www.kharvionline.com





