ಖಾರ್ವಿ ಸಮಾಜದಲ್ಲಿ ಪ್ರಪ್ರಥಮ ಬಾರಿಗೆ Online ಮೂಲಕ ಕಾರ್ಯಕ್ರಮ

ವಿಷಯ: ಉದ್ಯೋಗ ಮತ್ತು ಉದ್ಯಮ ಶೀಲತೆಗಾಗಿ ಕೌಶಲ್ಯ ಅಭಿವೃದ್ಧಿಯ ಮಹತ್ವ” (Importance of Skill Development for employment and Enterpreneur.)

ತಾರೀಕು: 01/08/2021,ಭಾನುವಾರ ಸಮಯ: ಬೆಳಿಗ್ಗೆ 10.30 ರಿಂದ 11.30.

ಕಾರ್ಯಕ್ರಮ ನಡೆಸಿ ಕೊಡುವವರು :

ಶ್ರೀಯುತ ಮಲ್ಲೇಶ್ ಕುಮಾರ್ ಕೆ. ಎಸ್. (M.Tech CS), Project Manager, Centre for innovation and Entrepreneurship, J.N.N.College of Engineering, Shivamogga.

ಮಾನ್ಯ ಖಾರ್ವಿ ಸಮಾಜ ಭಂದುಗಳೇ,

* ಈಗಾಗಲೇ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದ ವಿದ್ಯಾರ್ಥಿಗಳಿಗೆ ಮತ್ತು ಸ್ವ ಉದ್ಯೋಗ ಮಾಡುವವರ ಉನ್ನತ ಭವಿಷ್ಯಕ್ಕಾಗಿ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ –

ಶ್ರೀಯುತ ರಾಮ್ ಪ್ರಸನ್ನ ಖಾರ್ವಿ, ಶ್ರೀಯುತ ರವಿ ಟಿ ನಾಯ್ಕ್ , ಶ್ರೀಯುತ ಸುಧಾಕರ್ ಕೋಟಾನ್ ಮತ್ತು kharvionline ತಂಡ.

* ಈ ಕಾರ್ಯಕ್ರಮ ಪ್ರತೀ ತಿಂಗಳಿಗೊಮ್ಮೆ ಯಂತೆ ಒಂದು ವರ್ಷದ ತನಕ ನೆರವೇರಿಸಲು ಪ್ರಯತ್ನಗಳು ನಡೆಯುತ್ತಾ ಇದೆ. *ನನಗೆ ತಿಳಿದ ಪ್ರಕಾರ ಈ ಕಾರ್ಯಕ್ರಮ ಆಯೋಜಿಸಲು ಈ ತಂಡ ಹಲವಾರು ತಿಂಗಳಿಂದ ಶ್ರಮವಹಿಸಿದೆ ಹಾಗೂ ಇದಕ್ಕೆ ತಗಲುವ ಎಲ್ಲಾ ಖರ್ಚನ್ನು ಬರಿಸುತ್ತಿದ್ದಾರೆ.

*ನಮ್ಮ ಸಮಾಜ ಭಾಂದವರಿಗಾಗಿ ಕಾರ್ಯಕ್ರಮ ಉಚಿತವಾಗಿದ್ದು ಆಸಕ್ತಿ ಇರುವ ವಿದ್ಯಾರ್ಥಿಗಳು ಮತ್ತು ಸ್ವ ಉದ್ಯೋಗಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

* ನಮ್ಮ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸ್ವ ಉದ್ಯೋಗ ನಡೆಸಲು ಆಸಕ್ತಿ ಇರುವ ಯುವ ಜನತೆಗೆ ಭವಿಷ್ಯದ ಬಗ್ಗೆ ಹಲವು ಪ್ರಶ್ನೆ /ಗೊಂದಲ ಇದೆ. ಸ್ಪರ್ಧಾತ್ಮಕ ಸನ್ನಿವೇಶಕ್ಕೆ ಸರಿಯಾಗಿ ನಾವು ಬದಲಾಗಬೇಕು. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕಂಡು ಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

* ಖಾರ್ವಿ ಸಮಾಜದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ತಂತ್ರಜ್ಞಾನವನ್ನು ಬಳಸಿಕೊಂಡು (online/virtual/webinar) ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

* ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸಲಹೆ ಸೂಚನೆಗಳಿದ್ದರೆ ದಯವಿಟ್ಟು ಶ್ರೀಯುತ ಸುಧಾಕರ್ ಕೋಟಾನ್ ರವರಿಗೆ ತಿಳಿಸಬೇಕಾಗಿ ವಿನಂತಿ.

* ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಈ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಖಾರ್ವಿ ಸಮಾಜದ ಪರವಾಗಿ ಹೃತ್ಪೂರ್ವಕ ವಂದನೆಗಳು.

*ಈ ನೂತನ ಪ್ರಯತ್ನಕ್ಕೆ ಖಾರ್ವಿ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕಾಗಿ ವಿನಂತಿ.

*ಕಾರ್ಯಕ್ರಮಕ್ಕೆ ಭಾಗವಹಿಸಲು link ನ್ನು ನೋಂದಣಿ ಮಾಡಿಕೊಂಡ ಸದಸ್ಯರಿಗೆ ತಾ.1/8/2021 ಭಾನುವಾರ ಬೆಳಿಗ್ಗೆ 9.30 ಘಂಟೆಗೆ ಕಳುಹಿಸಿಕೊಡಲಾಗುತ್ತದೆ.

Kharvionline Webinar Registration


ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಕೆ.

ವಂದನೆಗಳೊಂದಿಗೆ

S.K.Naik
Bangalore

One thought on “ಖಾರ್ವಿ ಸಮಾಜದಲ್ಲಿ ಪ್ರಪ್ರಥಮ ಬಾರಿಗೆ Online ಮೂಲಕ ಕಾರ್ಯಕ್ರಮ

  1. Good wishes for the webinar.it is a good opportunity .Hope the everyone makes use of it.The great initiative from the kharvi online team.

    Good luck.

    Raghavendra kharvi
    Senior manager @
    Hindustan
    Aeronatics Limited
    Bangalore

Leave a Reply

Your email address will not be published. Required fields are marked *