ಪ್ರತಿಬಿಂಬ

ಬದುಕೊಂದು ಖಾಲಿಪುಟದಂತೆ
ಬಣ್ಣ ಬಣ್ಣದ ಶಾಯಿಮೂಡಲು ರೋಚಕ.
ಒಳಿತನ್ನರಿತು ಬರೆದು ಕೂಡಲಿ ಪುಟಗಳು
ಜೀವನ ಗ್ರಂಥ ಸೇರಲಿ ಕೋಟಿ ಹಸ್ತವ
ಓದಿದಷ್ಟು ಇನ್ನೂ ಕೌತುಕ!

ತೋಚಿದಂತೆ ಅಕ್ಷರವ ತೂರದಿರು
ಲೇಖನಿಯ ನಿಬ್ಬಿಗೆ ಮಬ್ಬುಗಟ್ಟುತ್ತಾ
. ಹರಿದು ಹಂಚದಿರಲಿ ಬದುಕಿನ ಹಾಳೆಯೂ
ಮಡುಗಟ್ಟುತ ಸೂತಕ.

ಬದುಕೊಂದು ಕನ್ನಡಿಯಂತೆ
ನಿನ್ನ ಪ್ರತಿಬಿಂಬವೇ ಅದನ್ನಾವರಿಸುವಾಗ ರೋಚಕ.
ಶುಭ್ರ ಮನಸ್ಸಿನ ಮಂದಹಾಸವೂ
ಮೂಡಿದೆ ತುಂಬೆಲ್ಲಾ ಬದುಕಿನಲಿ
ಗಾಜಿನ ಪರದೆಯು ಹೊಳಪಲು ಇನ್ನೂ ಕೌತುಕ!

ಒಡೆಯಲು ಚೂರಾದ ಪ್ರತಿಬಿಂಬದಂತೆ
ನನ್ನ ಮುಖವು ತೊರೆದಾಗ ಮಂದಹಾಸ.
ಮುರಿದು ಚೂರಾಗದಿರಲಿ ಬದುಕಿನ ಕನ್ನಡಿ
ಶೋಖಗಟ್ಟುತಾ ಸೂತಕ.

ಶರತ್ ಖಾರ್ವಿ ಗಂಗೊಳ್ಳಿ

Leave a Reply

Your email address will not be published. Required fields are marked *