ಇ-ರೂಪಿ … ಒಂದು ಪರಿಚಯ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು August 2nd, 2021 ಸೋಮವಾರ ಇ-ರೂಪಿ, ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇ-ರೂಪಿ ಎಂದು ಪರಿಚಯಿಸಿದರು.

ಒಂದು ಬಾರಿ ಪಾವತಿ ಮಾಡುವ ಈ ಡಿಜಿಟಲ್ ಪಾವತಿ ವ್ಯವಸ್ಥೆಯು ಸರ್ಕಾರದ ಕಾರ್ಯಕ್ರಮಗಳಲ್ಲಿನ ಜನಸಾಮಾನ್ಯರಿಗೆ ತಲುಪುವ ಮೊದಲು ಆಗುತಿರುವ ಸೋರಿಕೆಯನ್ನು ನಿವಾರಿಸಲು ಮಾಡಿರುವ ಪ್ರಯತ್ನ. ಹಾಗೆ ಹಣವು ಉದ್ದೇಶಿತ ಸ್ವೀಕೃತದಾರರಿಗೆ ತಲುಪಿದೆಯೆ ಎಂದು ಸರ್ಕಾರಕ್ಕೆ ಖಚಿತಪಡಿಸುತ್ತದೆ. ಈ ಡಿಜಿಟಲ್ ಪಾವತಿ ವ್ಯವಸ್ಥೆ ವ್ಯಕ್ತಿ-ನಿರ್ದಿಷ್ಟ ಮತ್ತು ಉದ್ದೇಶ-ನಿರ್ದಿಷ್ಟ ಪಾವತಿ ವ್ಯವಸ್ಥೆಯಾಗಿರುತ್ತದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಣಕಾಸು ಸೇವೆಗಳ ಇಲಾಖೆ (DFS), ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ಪಾಲುದಾರ ಬ್ಯಾಂಕುಗಳ ಸಹಯೋಗದೊಂದಿಗೆ, ಪ್ರಾರಂಭಿಸಿದ ಒಂದು ವಿನೂತನ ಡಿಜಿಟಲ್ ಪರಿಹಾರವೆ – ‘e -ರೂಪಿ.

ಈ ಮಾಹಿತಿಯು ಇ-ರೂಪಿ ಬಗ್ಗೆ ಅಧಿಕೃತ ದಾಖಲೆಯಲ್ಲ ಆದರೆ ಈ ಪಾವತಿ ವಿಧಾನದ ಪರಿಚಯದ ಅವಲೋಕನವಾಗಿದೆ.

ರಾಮ್ ಪ್ರಸನ್ನ ಖಾರ್ವಿ

Leave a Reply

Your email address will not be published. Required fields are marked *