SSLC (10ನೇ ತರಗತಿ), 1st PUC (11ನೇ ತರಗತಿ), II PUC (12ನೇ ತರಗತಿ), ಪದವಿ ಮತ್ತು ವೃತಿಪರ ಶಿಕ್ಷಣ ಪಡೆಯುತ್ತಿರುವ
ಎಲ್ಲಾ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ಈ webinar ನಲ್ಲಿ ಭಾಗವಹಿಸಲು ಸ್ವಾಗತ ಕೋರುತ್ತೇವೆ.
ನಾವ್ಯಾಕೆ ಈ webinar ನಲ್ಲಿ ಭಾಗವಹಿಸಬೇಕು?
1) ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಒಳ್ಳೆಯ ಅವಕಾಶ.
2) ಕರ್ನಾಟಕ, ಗೋವಾ ಮತ್ತು ಮುಂಬೈಯಿಂದ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳ ಅಭಿಪ್ರಾಯ ನಿಮಗೆ ತಿಳಿಯುತ್ತದೆ.
3) ವಿಶೇಷವಾಗಿ 10 ನೇ ಮತ್ತು 12
ನೇ ತರಗತಿ ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ದೊರೆಯುತ್ತದೆ.
4) ಇದು ಖಾರ್ವಿ ಸಮಾಜದ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿರುವುದರಿಂದ ಯಾವುದೇ ರೀತಿಯ ಮುಜುಗರ, ಕೀಳರಿಮೆಗೆ ಅವಕಾಶ ಕೊಡದೆ ದೈರ್ಯದಿಂದ ಭಾಗವಹಿಸಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸದಾವಕಾಶ.
5) ಹಳ್ಳಿ, ಊರು, ಪಟ್ಟಣ ಮತ್ತು ನಗರಪ್ರದೇಶದಲ್ಲಿ ಕಲಿಯುತ್ತಿರುವ ಖಾರ್ವಿ
ವಿದ್ಯಾರ್ಥಿಗಳ ಸಮಾಗಮ.
6) ತಮ್ಮ ಭಾಷೆ
(ವಿಶೇಷವಾಗಿ ಇಂಗ್ಲಿಷ್) ಇನ್ನೂ ಉತ್ತಮ ರೀತಿಯಲ್ಲಿ ಹಿಡಿತ ಸಾಧಿಸಲು ಒಳ್ಳೆಯ ಅವಕಾಶ.
7) ನಿಮ್ಮಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ವಿಚಾರಗಳನ್ನು ತಿಳಿದುಕೊಳ್ಳಲು ಪೂರಕವಾದ ಕಾರ್ಯಕ್ರಮ.
ಸಮಾಜ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿಮಗೆ ಪ್ರೋತ್ಸಾಹ, ಪ್ರೇರಣೆ, ಸಲಹೆ ಮತ್ತು ಮಾರ್ಗದರ್ಶನ ಕೊಡುತ್ತದೆ. ಪ್ರಗತಿಯತ್ತ /ಗುರಿ ತಲುಪಲು ನಿಮ್ಮನ್ನು ನೀವು ಬದಲಾಯಿಸಿ ಕೊಳ್ಳಬೇಕು. ಆ ಶಕ್ತಿ ನಿಮ್ಮಲ್ಲಿದೆ.
ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಎಲ್ಲರಿಗೂ ಶುಭವಾಗಲಿ
Kharvionline.com
ಪೋಷಕರಲ್ಲಿ ಮತ್ತು ಎಲ್ಲಾ ಸಮಾಜ ಭಾಂದವರಲ್ಲಿ ವಿನಂತಿ.
ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಖಾರ್ವಿ ಸಮಾಜದ ಎಲ್ಲಾ ವಿದ್ಯಾರ್ಥಿಗಳು (10ನೇ ತರಗತಿ ಮತ್ತು ಮೇಲ್ಪಟ್ಟು) ಭಾಗವಹಿಸುವಂತೆ ಪ್ರೋತ್ಸಾಹಿಸಿ. ಈ ಸಂದೇಶವನ್ನು ಖಾರ್ವಿ ಸಮಾಜದ ಇತರ whatsapp group ಗೆ ಕಳುಹಿಸಿ. ಉನ್ನತ ಸಮಾಜ ಕಟ್ಟುವಲ್ಲಿ ನಿಮ್ಮ ಅಳಿಲು ಸೇವೆಯನ್ನು ಅಪೇಕ್ಷಿಸುತ್ತೇವೆ.
Team kharvionline.com