ಖಾರ್ವಿ ಸಮಾಜದ ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆಗಳ ಅನಾವರಣ

ತಾ.15/08/2021 ರಂದು ನಡೆದ “Kharvi Youngsters Online Conclave (KYOC) ” ಕಾರ್ಯಕ್ರಮ ಯಶಸ್ವಿಯಾಗಲು ಕಾರಣ ಕರ್ತರಾದ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ , ಮುಖ್ಯ ಅತಿಥಿಗಳಾದ Mrs.Mamata Subraya kharvi ಮತ್ತು Mrs. Roopa Ramesh kharvi ಇವರಿಗೆ kharvionline ಪರವಾಗಿ ಧನ್ಯವಾದಗಳು.

10ನೇ ತರಗತಿ ಮತ್ತು 12ನೇ ತರಗತಿ ಓದುತ್ತಿರುವ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವಾರು ಗಣ್ಯರು ಮೆಚ್ಚಗೆಯ ಮಾತುಗಳೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೀತಿ ನಮ್ಮ ಸಮಾಜ ಇತರ ಸಮಾಜಕ್ಕಿಂತ ತುಂಬಾ ಮುಂದುವರಿದಿದೆ ಎಂದು ಅನಿಸುತ್ತಿದೆ. ನಮ್ಮ ಸಮಾಜದಲ್ಲಿ ಇಂತಹ ಪ್ರತಿಭೆಗಳು ಇದೆ ಎಂದು ತಿಳಿದುಕೊಳ್ಳಲು ನಮಗೆ ಇಷ್ಟು ಸಮಯ ಬೇಕಾಯಿತು.

ವಿದ್ಯಾರ್ಥಿಗಳ ಭಾವನೆ, ಅನಿಸಿಕೆ, ಸಲಹೆ, ಮಾತನಾಡುವ ಶೈಲಿ ಮತ್ತು ತಮ್ಮ ಜೀವನದ ಗುರಿಯನ್ನು ವ್ಯಕ್ತಪಡಿಸಿದ ರೀತಿ ನೋಡಿದರೆ ನಮ್ಮ ಸಮಾಜದ ಮಕ್ಕಳು ವಿದ್ಯಾಭ್ಯಾಸದ ಜೊತೆ ವಿಶ್ವ ದರ್ಜೆಯ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಖಾರ್ವಿ ಸಮಾಜದ ಪ್ರತಿಯೊಬ್ಬರೂ ಈ ಸಂತೋಷದಲ್ಲಿ ಭಾಗವಹಿಸಬೇಕು / ಆಸ್ವಾದಿಸಬೇಕು ಎನ್ನುವ ನಿಟ್ಟಿನಲ್ಲಿ ನಾವು ಈ ಕಾರ್ಯಕ್ರಮದ ಕೆಲವೊಂದು video clip ನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ.

ಮುಂದಿನ ದಿನಗಳಲ್ಲಿ ಕೂಡ ನಾವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಮುಂದೆಯೂ ನಾವು ಅಪೇಕ್ಷಿಸಿದ್ದೀವೆ.

ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ನಮ್ಮ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯುವ ಜೊತೆಯಲ್ಲಿ ಒಂದು ಮಾದರಿ ಸಮಾಜವನ್ನಾಗಿ ಪರಿವರ್ತಿಸಲು ಸಾದ್ಯ.

ಶ್ರೀಯುತ ರವಿ T. Naik ರವರ ಮಾರ್ಗದರ್ಶನ ಮತ್ತು ಶ್ರೀಯುತ ರಾಮ್ ಪ್ರಸನ್ನ ಖಾರ್ವಿ ಯವರು ಕಾರ್ಯಕ್ರಮ ನಡೆಸಿಕೊಟ್ಟ ರೀತಿ ಹಾಗೂ ಶ್ರೀಯುತ S.K Naik, Bangalore, ಮಹೇಶ್ ಪಟೇಲ್ ರವರ ಸಹಕಾರ ಕಾರ್ಯಕ್ರಮ ಯಶಸ್ವಿಯಾಗಲು ನೆರವಾಯಿತು.

ಎಲ್ಲರಿಗೂ ಧನ್ಯವಾದಗಳು

www.Kharvionline.com

One thought on “ಖಾರ್ವಿ ಸಮಾಜದ ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆಗಳ ಅನಾವರಣ

Leave a Reply

Your email address will not be published. Required fields are marked *