ಕಾರಣಿಕ ದೇವಸ್ಥಾನ ಗಂಗೊಳ್ಳಿ ನಗರ ಮಹಾಂಕಾಳಿ
ಒಂದು ಚಿಟಿಕೆ ಪ್ರಸಾದದಲ್ಲಿ ಆನೆ ಬಲ, ನಂಬಿದವರ ಬೆನ್ನ ಹಿಂದೆ ನಿಂತು ಕಾಪಾಡುವ ನಗರೇಶ್ವರಿ.
ಅನಾದಿ ಕಾಲದ ಇತಿಹಾಸ ಇರುವ ಕಲೈ ಕಾರ್ ಮಠ ತನ್ನ ಕಾರಣಿಕತೆಯಿಂದ ಇಂದಿಗೂ ಜನಮಾನಸದಲ್ಲಿ ತನ್ನ ವೈಭವವನ್ನು ಉಳಿಸಿಕೊಂಡಿದೆ ಕಣ್ಣಿಗೆ ಕಟ್ಟುವಂಥಹ ಕಾರಣಿಕೆ ಮೈ ಜುಮ್ ಎನಿಸುವ ಘಟನೆ…ಒಂದಾ…?? ಎರಡಾ???? ಆಬ್ಭಾ…!!!!
ಎಂಥಹ ಕಷ್ಟದ ಪರಿಸ್ತಿಯಲ್ಲಿಯೂ ದೇವರ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಎಲ್ಲರ ಪ್ರೀತಿಗೆ ಪಾತ್ರರಾದವರು ದಿವಂಗತ ಅಣ್ಣಪ್ಪ ಕಲೈಕಾರ್ ಇವರ ಕಾಲ ಎಂದರೆ ಅದು ಕಾರಣಿಕೆಯ ವೈಭವದ ಕಾಲವಾಗಿತ್ತು ಕಲ್ಲು ಕುಟ್ಟಿಗ ದೇವರ ತುಂಟಾಟ, ಶಿಕ್ಷೆ, ರಕ್ಷಣೆಯ ಪವಾಡ ಭಕ್ತರ ಮನಸ್ಸನ್ನು ಕದ್ದು ಬಿಟ್ಟಿತ್ತು.
ಕಷ್ಟ ಎಂದು ಬಂದವರಿಗೆ ಚಿಕ್ಕ ಚಿಕ್ಕ ಕಲ್ಲು ಎಸೆದು ತನ್ನ ಇರುವಿಕೆಯನ್ನು ನಂಬಿಸಿ ಕಾಪಾಡಿದ್ದಲ್ಲದೆ ಕೆಲವೊಂದು ಸಂಧರ್ಭದಲ್ಲಿ ತನ್ನ ಕಪ್ಪು ಆಳೆತ್ತರದ ಭಯ ಹುಟ್ಟಿಸುವ ರೂಪ ತೋರಿಸಿ ಕೊಂಡಿದ್ದು ಇದೆ. ಇಂತಹ ನೂರಾರು ಘಟನೆಗಳು ಇಲ್ಲಿ ನಡೆದಿದೆ ಎಂದು ಕುಟುಂಬಸ್ಥರು ಹೇಳುವಾಗ ಶ್ರೀ ದೇವಿಯ ಮಹಿಮೆ ಈ ಸನ್ನಿಧಾನದ ಪವಾಡ ಬಗ್ಗೆ ಖುಷಿ ಹೆಮ್ಮೆ ಭಯ ಭಕ್ತಿ ಎಲ್ಲವೂ ಒಮ್ಮೆಲೇ ಮೂಡುತದೆ. ಬಾಲಕನೂಬ್ಬನಿಗೆ ಅಮ್ಮನವರು ಮತ್ತು ಕಲ್ಲು ಕುಟ್ಟಿಗಾ ದೇವರು ತನ್ನ ಅಜ್ಜ ಅಜ್ಜಿ ರೂಪದಲ್ಲಿ ಬಾಳೆ ಹಣ್ಣು ತಿನ್ನಲು ನೀಡಿದ್ದು ಈ ಘಟನೆ ಕೇಳುವಾಗ ಮೈ ಜುಮ್ ಎನಿಸಿದರೂ ಇದು ಸತ್ಯ.
ಕ್ಷೇತ್ರದ ಸನ್ನಿಧಾನದಲ್ಲಿ ಸತ್ಯ,ಪ್ರಾಮಾಣಿಕ ಸೇವಾ ಭಾವನೆ ಇದ್ದರೇ ಇಂತಹ ಕಾರಣಿಕೆಗಳು ನಡೆಯುತ್ತವೆ ಎನ್ನುವುದು ಹಿರಿ ತಲೆಗಳ ಅಂಬೋಣವಾಗಿದೆ. ಹಿರಿ ತಲೆಗಳು ಹಿರಿಯರಂತೆ ಸ್ವಾರ್ಥ ಬಯಸದೇ ನಡೆಯ ಬೇಕಾಗಿದೆ.
ಅನ್ಯಾಯ, ಮೋಸ, ಕಪಟತನವನ್ನು ಈ ಸನ್ನಿಧಾನದ ದೇವರು ಖಡಾ ಖಂಡಿತವಾಗಿ ವಿರೋದಿಸುತ್ತದೆ .ಆ ಕೂಡಲೇ ಅಲ್ಲದಿದ್ದರೂ ಸಮಯ ನೋಡಿ ಕೊಡುವ ಹೊಡೆತದ ರುಚಿಯನ್ನು ಕುಟುಂಬಸ್ಥರು, ಭಕ್ತರು ನೆನಪಿಸಿಕೊಳ್ಳುತ್ತಾರೆ.
ಮಲ್ಲಿಗೆ ಹೂ ಅಂದರೆ ಬಹಳ ಇಷ್ಟಪಡುವ ಅಮ್ಮನವರಿಗೆ ದಿನ ಪೂಜೆಗೆ ಮಲ್ಲಿಗೆ ಬೇಕೇ ಬೇಕು. ನವರಾತ್ರಿಯ 9 ದಿನದ ವೈಭೋಗ ಕಣ್ಣು ತುಂಬಿ ಬರುವದು. ನವರಾತ್ರಿಯ 9 ದಿನದಲ್ಲಿ ಅರ್ಧ ಬೆಲೆಯಲ್ಲಿ ಪೂಜೆ ಮಾಡಲಾಗುತ್ತದೆ. ಇದು ಅನಾದಿ ಕಾಲದಿಂದ ನಡೆದು ಬಂದ ಪ್ರತೀತಿ. ಇದನ್ನು ಯಾವದೇ ಕಾರಣಕ್ಕೆ ತಪ್ಪುವಂತಿಲ್ಲ ನವರಾತ್ರಿಯ ಪ್ರಥಮ ಪೂಜೆ ಕುಂದಾಪುರ ಸಾರಂಗ್ ಕುಟುಂಬಸ್ತ್ರದ್ದು ಸನ್ನಿಧಿಯಲ್ಲಿ ನಾನಾ ಬಗೆಯ ಪೂಜಾ ಕಾರ್ಯಗಳು ನಡೆದು ಬರುತಿದೆ.
ಇಲ್ಲಿ ದೇವರ ಸನ್ನಿಧಾನದಲ್ಲಿ ಭಕ್ತರ ಕಷ್ಟಗಳಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಲ್ಲಿ ಭಕ್ತರ ಪರ ಇಡುವ ಪ್ರಾರ್ಥನೆಗೆ ಹೆಚ್ಚು ಮಹತ್ವ ಇರುತ್ತದೆ ಇದಕ್ಕೆ “ಮಾಗಣೆ” ಎನ್ನುತ್ತೇವೆ ದೇವರ ಮುಂದೆ ಪ್ರಾರ್ಥನೆ ಇಡುವುದು ಅದೊಂದು ಕಲೆಗಾರಿಕೆ ದೇವರ ಮನಸ್ಸನ್ನು ತನ್ನ ಕಡೆ ಸೆಳೆಯುವಂತೆ ಪ್ರಾಮಾಣಿಕವಾಗಿ ಪ್ರಾರ್ಥಿಸುವ ರೀತಿ ಇದು ಅನಾದಿ ಕಾಲದಿಂದ ನಡೆದು ಬಂದಿರುವ ಪ್ರತೀತಿ ಅಣ್ಣಪ್ಪ ಕಲೈಕಾರ್, ನಾರಾಯಣ ಕಲೈಕಾರ್, ಸಂಜೀವ ಕಲೈಕಾರ್ ಈ ಪ್ರಾರ್ಥನೆ ಇಡುವ ಮೂಲಕ ಜನರ ಮನಸ್ಸನ್ನು ಗೆದ್ದಿರುತ್ತಾರೆ.
ಹಲವು ಪ್ರಥಮಗಳಿಗೆ ಕಾರಣವಾದ ಈ ಸನ್ನಿಧಾನ ಮುಂದೆ ಇನ್ನೂ ಹೆಚ್ಚಾಗಿ ವಿಜೃಂಭಿಸ ಬೇಕು ಎನ್ನುವದು ಭಕ್ತರ ಅಭಿಲಾಷೆ ಆಗಿದೆ.
ನಗರ ಎಂಬ ಪುಟ್ಟ ಊರಿಂದ ಕೇದಗೆ ಹೂವಿನ ಮೇಲೇರಿ ಬಂದು ಅಮ್ಮನವರೆಂದು ಪ್ರಸಿದ್ದಿ ಪಡೆದು ಇಲ್ಲಿ ಕಾರಣಿಕತೆಯಿಂದ ಮೆರೆದ ಅಮ್ಮ ಇನ್ನೊಮ್ಮೆ ಕಾರಣಿಕತೆಯಿಂದ ಮೆರೆಯುವಂತಗಲಿ, ಸನ್ನಿಧಿಯ ಅಭಿವೃದ್ಧಿ ಕಾರ್ಯಗಳಿಗೆ ಬೆಂಗಾವಲಾಗಿ ನಿಲ್ಲಬೇಕಾಗಿದೆ ಶ್ರೀ ಅಮ್ಮನವರು.
ರವಿ ಕುಮಾರ್ ಗಂಗೊಳ್ಳಿ
ಅಭಯಪ್ರಸಾದ ನೀಡುವ ಅಧಿದೇವತೆ ನಗರ ಮಹಾಂಕಾಳಿಯ ಸ್ಥಳಪುರಾಣ,ಮಹಿಮೆಯ ಬಗ್ಗೆ ಪ್ರಸ್ತುತಪಡಿಸಿರುವ ಲೇಖನ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು👍👌👍👌🙏🙏🙏🙏