ಕುಮಟಾ: ಶೈವಿಕಾ ಆರ್ ಖಾರ್ವಿ, … ಬ್ಯಾಕ್ ಟು ಯುವರ್ ರೂಟ್ಸ್ ನೆಡೆಸಿದ 7-12 ವರ್ಷ ವಯೋಮಿತಿಯಲ್ಲಿ ಸಾಂಪ್ರದಾಯಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ.
ಬ್ಯಾಕ್ ಟು ಯುವರ್ ರೂಟ್ಸ್ ಭಾರತ ಎಂಬ ಸಂಸ್ಥೆ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದ ಆನ್‌ಲೈನ್ ಸಾಂಪ್ರದಾಯಿಕ ನೃತ್ಯ ಸ್ಪರ್ಧೆಯನ್ನು ನಡೆಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ “likes” ಮತ್ತು ತೀರ್ಪುಗಾರರ ಆಯ್ಕೆ ಎಂಬ ಎರಡು ವರ್ಗಗಳಿದ್ದವು. ಅದರಲ್ಲಿ ರಾಮ್ ಪ್ರಸನ್ನ ಖಾರ್ವಿ ಮತ್ತು ರೂಪ ಖಾರ್ವಿ ಮಗಳಾದ ಶೈವಿಕಾ ಆರ್ ಖಾರ್ವಿ … 7-12 ವರ್ಷ ವಯೋಮಿತಿಯಲ್ಲಿ ತೀರ್ಪುಗಾರರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
ಒಂಬತ್ತು ವರ್ಷದ ಶೈವೀಕ, ಕುಮಟಾದ ವಿದುಷಿ ನಯನ ಪ್ರಸನ್ನರ ಮಾರ್ಗದರ್ಶನದಲ್ಲಿ, ಕಳೆದ 5 ವರ್ಷಗಳಿಂದ ಭರತನಾಟ್ಯದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಅವಳು ಭರತನಾಟ್ಯದ ಜೂನಿಯರ್ ಪರೀಕ್ಷೆಯ ಮೊದಲು ನಡೆಯುವ ಎರಡು ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದಿದ್ದಾಳೆ. ಅಲ್ಲದೆ ಚಂದನ ಚಾನೆಲ್ ಅವರ ಮಧುರ ಮಧುರ ಈ ಮಂಜುಳ ಗಾನ, ಕುಮಟಾ ಉತ್ಸವ, ಮತ್ತು ವಿಬ್ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ.
3 thoughts on “ಬ್ಯಾಕ್ ಟು ಯುವರ್ ರೂಟ್ಸ್ ನೃತ್ಯ ಸ್ಪರ್ಧೆ : ಶೈವಿಕಾ ಆರ್ ಖಾರ್ವಿ ಪ್ರಥಮ”
ಖಾರ್ವಿ ಸಮಾಜದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆ
ಶೈವಿಕಾ ಆರ್ ಖಾರ್ವಿ ಯವರ ಅಭೂತಪೂರ್ವ ಸಾಂಪ್ರದಾಯಿಕ ನೃತ್ಯ ಪ್ರದರ್ಶನ.
ಶೈವಿಕಾ ಆರ್ ಖಾರ್ವಿ D/o ರಾಮ್ ಪ್ರಸನ್ನ ಖಾರ್ವಿ ಮತ್ತು ರೂಪ ಖಾರ್ವಿ ಇವರಿಗೆ ಅಭಿನಂದನೆಗಳು. ಈ ಕಲೆಯನ್ನು ಉಳಿಸಿ ಬೆಳೆಸಿಕೊಳ್ಳುವ ಜೊತೆಯಲ್ಲಿ ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಕೆ.
ರಾಮ್ ಪ್ರಸನ್ನ ಖಾರ್ವಿ ಯವರ ಸುಪುತ್ರಿ ಶೈವಿಕಾಳ ಅಮೋಘ ಭರತನಾಟ್ಯ ಪ್ರದರ್ಶನ ಮನೋಜ್ಞ ವಾಗಿ ಮೂಡಿಬಂದಿದೆ. ಪ್ರಥಮ ಪ್ರಶಸ್ತಿ ವಿಜೇತೆ ಶೈವಿಕಾಳ ನೃತ್ಯ ಕಲಾವೈಭವ ಹೃನ್ಮನ ಸೆಳೆಯುವುದಂತಿದೆ.ಶೈವಿಕಾಳ ಪ್ರತಿಭೆ ಮತ್ತಷ್ಟೂ ಶೈನ್ ಆಗಲಿ ಎಂದು ಶುಭ ಹಾರೈಸುತ್ತೇನೆ.👌👌👌👍👌👍👌👍👍👍👌👌👍👍👌👌👋👋👋👋👋👋👋👋🎉🎉🎉💐💐💐🎉💐🎉💐💐🎉💐🎉🙏🙏🙏🙏🙏
ಈಗಿನ ಮಕ್ಕಳು ಸಾಂಪ್ರದಾಯಿಕ ನೃತ್ಯ ಮತ್ತು ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಶೈವಿಕಾಳ ಈ ನೃತ್ಯ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಶೈವಿಕಾಳಿಗೆ ನಮ್ಮೆಲ್ಲರ ಶುಭ ಹಾರೈಕೆ.