ಬಹುಮುಖ ಪ್ರತಿಭೆಯ ಬಾಲಕಲಾಪ್ರತಿಭೆ ಮಿತ್ ಖಾರ್ವಿ ಕುಂದಾಪುರ

ಪ್ರತಿಭೆ ಎನ್ನುವುದು ದೇವರ ವರಪ್ರಸಾದವಿದ್ದಂತೆ ಅರಳುತ್ತಿರುವ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಿ ಬೆಳೆಸುವುದು ಹಿರಿಯರ, ಗುರುಗಳ, ಸಮಾಜದ ಕರ್ತವ್ಯವೂ ಹೌದು. ವಿದ್ಯಾರ್ಜನೆ, ಚಿತ್ರಕಲೆ, ಶ್ಲೋಕ ಪಠಣ, ಚೆಸ್, ಕ್ರಾಪ್ಟ್ ಹೀಗೆ ಕಾಲಿಟ್ಟ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಅತ್ಯುದ್ಬುತ ಪ್ರತಿಭೆ ತೋರುತ್ತಿದ್ದಾನೆ ಕುಂದಾಪುರ ಖಾರ್ವಿ ಕೇರಿಯ ಬಾಲಪ್ರತಿಭೆ ಮಿತ್ ಖಾರ್ವಿ.

ಕುಂದಾಪುರ ಖಾರ್ವಿಕೇರಿಯ ಗಾಯಿತ್ರಿ ಖಾರ್ವಿ ಯವರ ಪುತ್ರನಾದ ಮಿತ್ ಖಾರ್ವಿ ಕುಂದಾಪುರದ S. V. E. M (ಇಂಗ್ಲಿಷ್ ಮಿಡೀಯಂ) ಸ್ಕೂಲ್ ನಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದು ಅಪರಿಮಿತ ಕಲಾಕೌಶ್ಯಲದ ಬಾಲಪ್ರತಿಭೆಯಾಗಿದ್ದಾನೆ. ಬಹುಮುಖ ಪ್ರತಿಭೆಯ ಮಿತ್ ನಿಗೆ ಚಿತ್ರಕಲೆಯಲ್ಲಿ ಅಪರಿಚಿತ ಆಸಕ್ತಿ ಇವನಲ್ಲಿನ ಅಭೂತಪೂರ್ವ ಚಿತ್ರಕಲೆಯನ್ನು ಗಮನಿಸಿದ ಚಿತ್ರಕಲಾ ಶಿಕ್ಷಕರಾದ ಶ್ರೀ ಹರೀಶ್ ಸಾಗ್ ರವರು ತಮ್ಮ ಸಮೃದ್ಧ ಚಿತ್ರಕಲೆಯನ್ನು ಧಾರೆಯೆರೆದು ಕೊಟ್ಟರು. 3 Varna Art ಕ್ಲಾಸಿನ ವಿದ್ಯಾರ್ಥಿ ಯಾಗಿರುತ್ತಾರೆ. Basic, Colour Shading, Pencil Shading, Charcoal Shading, Watercolour Paintings ಗಳಲ್ಲಿ ಅಪ್ರತಿಮ ಕಲಾಕೌಶ್ಯಲ ಹೊಂದಿರುವ ಮಿತ್ ರಚಿಸಿರುವ ಚಿತ್ರಗಳು ಬೆರಗು ಹುಟ್ಟಿಸುತ್ತದೆ.

ತಾಯಿಯ ಅಕ್ಕರೆಯ ಪ್ರೋತ್ಸಾಹ, ಗುರುಗಳಾದ ಶ್ರೀ ಹರೀಶ್ ಸಾಗ್ ರವರ ಅದ್ಬುತ ಕಲಾಕೌಶ್ಯಲದ ತರಬೇತಿ ಈ ಬಾಲಪ್ರತಿಭೆಯ ಕೀರ್ತಿ, ಯಶಸ್ಸಿಗೆ ನಾಂದಿ ಹಾಡುತ್ತಿದೆ ಖಾರ್ವಿ ಸಮಾಜದ ಹೆಮ್ಮೆಯ ಬಹುಮುಖ ಕಲಾಪ್ರತಿಭೆಯ ಬಾಲಪ್ರತಿಭೆ ಮಿತ್ ಗೆ ಖಾರ್ವಿ ಆನ್ಲೈನ್ ಶುಭಹಾರೈಸುತ್ತದೆ.

ನಮ್ಮ ಸಮಾಜದ ಹೆಮ್ಮೆಯ ಈ ಬಾಲಪ್ರತಿಭೆಗೆ ಪ್ರೋತ್ಸಾಹ ದೊರೆಯುತ್ತಾ ಭವಿಷ್ಯದ ಶ್ರೇಷ್ಠ ಸಾಧನೆಯಾಗಲಿ. ಮಿತ್ ಅಪರಿಮಿತ ಸಾಧನೆಗೈದು ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದು ಮತ್ತೊಮ್ಮೆ ಮಗದೊಮ್ಮೆ ಶುಭಹಾರೈಸುತ್ತೇವೆ.

ಸುಧಾಕರ್ ಖಾರ್ವಿ
www.kharvionline.com

8 thoughts on “ಬಹುಮುಖ ಪ್ರತಿಭೆಯ ಬಾಲಕಲಾಪ್ರತಿಭೆ ಮಿತ್ ಖಾರ್ವಿ ಕುಂದಾಪುರ

  1. ನಮ್ಮ ಸಮಾಜದ ಅದ್ಬುತ ಬಾಲಪ್ರತಿಭೆ ಮಿತ್ ಕೈಚಳಕದ ಕುಂಚದಲ್ಲಿ ಮೂಡಿ ಬಂದಿರುವ ಚಿತ್ರಗಳು ಮಿತ್ ನೈಪುಣ್ಯತೆಗೆ ಕನ್ನಡಿ ಹಿಡಿಯುತ್ತವೆ. ಈ ಚಿತ್ರಗಳು ತೀರಾ ಸರಳವೆಂದು ಮೇಲುನೋಟಕ್ಕೆ ತೋರುವ ರೇಖೆಗಳಿಂದ ಗರಿಷ್ಠ ಪರಿಣಾಮವನ್ನು ಸಾಧಿಸುವ ಅಪೂರ್ವ ಶೈಲಿಗೆ ಸಶಕ್ತ ಉದಾಹರಣೆಗಳು.ಕಲಾವಿಕಸನದ ಹೊಸ ಆಯಾಮಗಳು ಮಿತ್ ರಚಿಸಿದ ಕಲಾಕೃತಿಗಳಲ್ಲಿ ನವಿರಾಗಿ ಕಂಗೊಳಿಸುತ್ತಿದೆ.ಈ ಬಾಲಪ್ರತಿಭೆಯ ಕಲಾಕೃತಿಗಳ ಸೊಬಗನ್ನು ಕಂಡಾಗ ನನಗೆ ವಿಶ್ವ ವಿಖ್ಯಾತ ಚಿತ್ರ ಕಲಾವಿದ ಸ್ಪೇನ್ ದೇಶದ ಪ್ಯಾಬ್ಲೊ ಪಿಕಾಸೋರವರ ಕಲಾಕೃತಿಗಳ ನೆನಪಾಗುತ್ತದೆ. ತಮ್ಮ ಶಿಷ್ಯ ನಿಗೆ ಅತ್ಕ್ರುಷ್ಟ ಕಲೆಯನ್ನು ಧಾರೆಯೆರೆದ ಗುರುಗಳಾದ ಶ್ರೀ ಹರೀಶ್ ಸಾಗ್ ರವರಿಗೆ ಅಭಿನಂದನೆಗಳು. ಮಗುವಿನ ಭವಿಷ್ಯ ಧ್ರುವತಾರೆಯಂತೆ ಬೆಳಗಲಿ ಎಂದು ಶುಭ ಹಾರೈಸುತ್ತೇನೆ.👌👌👍👍👍👌👌👌👍👌👋👋👋👋👋👋🙏🙏🙏🙏🙏💐💐💐💐🎉🎉🎉🎉🎉

  2. ನಿನ್ನ ಕೈಯಲ್ಲಿ ಇನ್ನಷ್ಟು ಕಲಾಕೃತಿಗಳು ಮೂಡಿಬರಲಿ. ದೇವರು ನಿನಗೆ ಒಳಿತನ್ನು ಮಾಡಲಿ. ಕಲೆಯನ್ನು ಗುರುತಿಸಿ ಬೆಳೆಸುತ್ತಿರುವ ಗುರುವಿಗೊಂದು namana🙏

  3. ಕೊಂಕಣ ಖಾರ್ವಿ ಸಮಾಜದ ಭವಿಷ್ಯದ ಧ್ರುವತಾರೆ.
    ನಿಮ್ಮ ಕಲೆಗೆ ಸಮಾಜದ ಎಲ್ಲಾ ರೀತಿಯ ಪ್ರೋತ್ಸಾಹ ದೊರೆತು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರತಿಭೆ ಬೆಳೆಯಲಿ. ಗುಡ್ ಲಕ್ ಮೀತ್…

  4. ಪ್ರತಿಭೆಗೆ ಎಲ್ಲೆ ಇಲ್ಲದೆ, ಸಾಧನೆಯ ಗರಿ ಸದಾ ಅರಳುತ್ತಿರಲಿ. ಭವಿಷ್ಯ ಒಳ್ಳೆದಾಗಲಿ…ಮೀತ್.
    🌹🌹🌹🌹
    ಹರೀಶ್ ಸಾಗಾ

Leave a Reply

Your email address will not be published. Required fields are marked *