ಸಾಧನೆಯ ಬೆನ್ನೇರಿ ಹೊರಟ ಸೋಮ…

ನಾನು ಕೂಡ ಚಂದ ಕಾಣಬೇಕಾಂತ ದೇಹ ಬೆಳೆಸಿ ಸತತ ಎರಡ್ಮೂರು ತಿಂಗಳವರೆಗೆ ಜಿಮ್ ಮಾಡಿದೆ ಕೊನೆಗೆ ಯಬ್ಬಾ ದೇಹ ದಂಡಿಸಿ ದಿನನಿತ್ಯ ಸುಸ್ತು ಮಾಡಿಕೊಂಡು ಬೆವರಿಸೋ ಕಷ್ಟ ಅಂತು ಬೇಡವೇ ಬೇಡ, ದೇಹ ಸದೃಢ ಆಗುತ್ತೆ ಬರುತ್ತೆ ಎಂಬ ಕಾಯೋ ತಾಳ್ಮೆ ಅಂತು ನಮಗಿಲ್ಲ ಅಂತ ಬಿಟ್ಟುಬಿಟ್ಟೆ ಕೊನೆಗೆ ನನಗೆ ಸಿಕ್ಕ ಲಾಭ ಅಂದರೆ ಕುತಲ್ಲೂ ನಿಂತಲ್ಲೂ ಊಟ ಮಾಡುವಾಗ ಪದೇ ಪದೇ ದೇಹ ಸ್ವಲ್ಪ ಬೆಳೆದಿರಬೇಕು ಅಲ್ವ ಅಂದುಕೊಂಡು ನೋಡಿಕೊಂಡಿದ್ದು ಖುಷಿ ಮಾತ್ರ ಆದರೆ ದೇಹದಾರ್ಢ ಪಟು ನಮ್ಮ ಸೋಮಶೇಖರ ಖಾರ್ವಿ ಮಾತ್ರ ತುಂಬಾ ಗ್ರೇಟ್ ಕಾಣ್ರೀ….ಯಾಕೆ ಗೊತ್ತಾ? ಕಡು ಬಡತನದಲ್ಲಿಯೂ ಸತತ 12 ವರ್ಷಗಳ ವರೆಗೆ ಶ್ರಮವಹಿಸಿ ತಪಸ್ಸಿನಂತೆ ಛಲಬೀಡದೇ ಮಿ| ಇಂಡಿಯಾ ಬಾಗಿಲ ಸಮೀಪ ಬಂದಿದ್ದಾನೆ ಅಂದರೆ ತಪಸ್ಸಿನ ಫಲವೇ ಸರಿ.

ಮೀನುಗಾರಿಕೆಯೇ ಜೀವನಾಧಾರ ಅದು ಬಿಟ್ರೆ ಬೇರೆ ಕೆಲಸ ಗೊತ್ತಿಲ್ಲ.ನೆಲೆ ನಿಲ್ಲಲ್ಲು ಸರಿಯಾದ ಸೂರಿ ಇಲ್ಲ ಅಲ್ಲೊಮ್ಮೆ ಇಲ್ಲೊಮ್ಮೆ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತ ಅಲೆಮಾರಿ ಜೀವನದಾಟ ಮನೆಯಲ್ಲಿ ಹೇಳಲಾರದಷ್ಡೂ ಅರ್ಥಿಕ ಸಮಸ್ಯೆ .

ಒಂದು ಕಡೆ ಮತ್ಸ್ಯಕ್ಷಾಮ ಇನ್ನೊಂದು ಕಡೆ ಈ ಕರೋನಾ ಗಿರೋನಾ ಅಂತ ಜೀವನ ನಡೆಸುವುದೇ ತುಂಬಾ ಕಷ್ಟದ ಸಮಯದಲ್ಲಿ ಸಾಧನೆ ಮಾಡಬೇಕು ಮಿ| ಇಂಡಿಯಾ ಆಗಬೇಕು ಎಂಬ ಈ ಹುಚ್ಚುತನ ಹಠ ಇದೆಯಲ್ಲ ಎಲ್ಲರಿಗೂ ಬರಲ್ಲ….

ಹುಟ್ಟೂರೂ ಭಟ್ಕಳವಾದರೂ ತಂದೆಯ ಊರಾದ ಕುಂದಾಪ್ರ ಕಂಚುಗೋಡಿನಲ್ಲಿ ಬಂದು ನೆಲೆಸಿದರು. ಸೋಮಶೇಖರ್ ಖಾರ್ವಿ 2009 ರ ಆರಂಭದಿಂದ 12 ವರ್ಷಗಳಿಂದ ದೇಹದಾರ್ಢ್ಯ ಪಟು ಸ್ಪರ್ಧೆಗಳಲ್ಲಿ ಒಟ್ಟು 70ರಷ್ಟು ಪ್ರಶಸ್ತಿಗಳನ್ನು ಸ್ವಂತ ಮಾಡಿಕೊಂಡು. 2015,2016,2017 ಹೀಗೆ ಸತತ ಮೂರು ವರ್ಷ ಮಿ| ಕರ್ನಾಟಕ ಆಗಿ ಹೊರಹೊಮ್ಮಿದ್ದಾರೆ. ಸತತ 7 ಬಾರಿ ಮಿ| ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರೂ ಬಡತನ ಅರ್ಥಿಕ ಸಮಸ್ಯೆಗಳಿಂದ ಕೈ ಚಲ್ಲಿದರು.

ಮೊನ್ನೆ ಬಂದ ರಾಕ್ಷಸ ತೌಕ್ತೆ ಚಂಡಮಾರುತದಿಂದ ಸಮುದ್ರವು ರೌದ್ರ ನರ್ತನದಿಂದ ಹಲವು ಮೀನುಗಾರರ ಬಲೆ ಇಂಚು ದೋಣಿಗಳು ನುಂಗಿ ನೀರು ಪಾಲು ಮಾಡಿದು ಸಾಕಾಗದೇ ತೌಕ್ತೆ ಬಂದು ಮೀನುಗಾರರ ಜೀವನ ತುಕ್ಡೆ ತುಕ್ಡೆ ಮಾಡಿಬಿಟ್ಟಿತ್ತು. ಮೀನುಗಾರರು ಅಪಾಯ ಲೆಕ್ಕಿಸದೇ ದೋಣಿಗಳನ್ನು ಕಾಪಾಡುವ ಪ್ರಯತದಲ್ಲಿದ್ದರು. ಸೋಮಶೇಖರ್ ಕೂಡ ಕಂಚುಗೋಡಿನ ಸಮುದ್ರ ತಟದಲ್ಲಿ ರಕ್ಷಣೆಯ ಕಾರ್ಯದಲ್ಲಿ ಮೀನುಗಾರರ ಜೊತೆ ಸೋಮ ಕೂಡ ಹಣ್ಣುಕಾಯಿಗಳಾದನು. ಇನ್ನೆನೂ ಕಾರ್ಯ ಮುಗಿದು ಸುಸ್ತಾಗಿ ಹಸಿವು ತಾಳಲಾರದೇ ಮನೆಗೆ ಹೋಗಿ ಊಟ ಮಾಡಿ ಆರಾಮ ಮಾಡಬೇಕು ಎಂದು ಹಸಿವಿನಿಂದ ಸೀದಾ ಅಡುಗೆ ಕೋಣೆಗೆ ಹೋಗಿ ಊಟ ಮಾಡಬೇಕು ಎನ್ನುವಾಗ್ಲೆ ಕಣ್ಣಿಗೆ ಬಿದ್ದಿದ್ದು ಗ್ಯಾಸ್ ಮೇಲೆ ದಗದಗ ಉರಿಯುವ ಎಣ್ಣೆ ಬಾಣಲಿ. ಪಕ್ಕದಲ್ಲೆ ಗ್ಯಾಸ್ ಸಿಲಿಂಡರ್ ಇರುವುದರಿಂದ ಅಯ್ಯೋ ಸುಮ್ನೆ ಇದ್ರೆ ಇಡೀ ಅಡುಗೆ ಕೋಣೆಯೇ ಬೆಂಕಿಗೆ ಆಹುತಿಗಾಗುತ್ತೆ ಎಂದು ತಿಳಿದು ತತ್‍ಕ್ಷಣ ಗ್ಯಾಸ್ ಮೇಲೆ ಇದ್ದ ಎಣ್ಣೆ ಬಾಣಲಿಯನ್ನು ಎತ್ತಿಕೊಂಡು ಬಾತ್ ರೂಮಲ್ಲಿ ಸುರಿಬೇಕು ಎಂಬ ಗಡಿಬಿಡಿಯಲ್ಲಿ ಕಾಲು ಜಾರಿ ಸುಡುತ್ತಿದ್ದ ಎಣ್ಣೆ ಬಾಣಲಿ ಮೇಲೆ ಬಿದ್ದು ಮುಖ ಮೈ ಕೈ ಸುಟ್ಟುಕೊಂಡು ನರಳಾಡಿ ಕೂಗಾಡಿದರು. ಮಳೆಯಲ್ಲಿ ನೆನೆದು ಬಂದ ಒದ್ದೆ ಬಟ್ಟೆ ಕಾರಣ ಸ್ವಲ್ಪ ದೊಡ್ಡ ಮಟ್ಟದ ಗಾಯಗಳಿಂದ ಪಾರಾದರು. ಅದೇನೋ ಹೇಳ್ತಾರಲ್ಲ “ಸಾವು ಘಳಿಗೆ ಬೇಕಾದರೂ ಆ ಕ್ಷಣ ತಪ್ಪಿಸಿಕೊಳ್ಳಬಹುದು ಆದರೆ ನೋವು ತಿನ್ನೊ ಘಳಿಗೆ ಮಾತ್ರ ತಪ್ಪಿಸೋಕೇ ಆಗಲ್ಲ” ಅಂತಾರೆ ಹಾಗೇ ಆಯಿತು ಸೋಮನ ಸ್ಥಿತಿ.

ಒಂದೆಡೆ ಮೀನುಗಾರಿಕೆ ಇಲ್ಲ ಮತ್ತೊಂದೆಡೆ ಕರೋನಾ, ಕೈಯಲ್ಲಿ ಕಾಸಿಲ್ಲ ಆದರೂ ಮಿ| ಇಂಡಿಯಾ ಆಗಬೇಕಾದರೆ ದಿನವೊಂದಕ್ಕೆ 40 ಮೊಟ್ಟೆ, ಒಂದು ಕೆಜಿ ಚಿಕನ್, ೨ ಕೆಜಿ ಹಣ್ಣುಪ್ಪಾಲು ಸೇವನೆ ಮಾಡಲೇಬೇಕು ಆದರೂ ಸರಿ ಸಾಲಸೋಲ ಮಾಡಿ ಸಾಧನೆಯ ಬಸ್ ಏರಬೇಕು ಅನ್ನೂ ಸಮಯದಲ್ಲೇ ಮತ್ತೊಂದು ಬೆಂಕಿಯ ದುರಂತ ನಡೆದೇ ಹೋಯ್ತು … ದಯವಿಟ್ಟು ಈ ದುರಂತದಿಂದ ಚೇತರಿಸಿಕೊಳ್ಳಲು ಮತ್ತು ಆರ್ಥಿಕ ಸಮಸ್ಯೆ ಬಗೆಹರಿಸಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ನಿಮ್ಮ ಸಹಾಯ ಹಸ್ತಗಾಗಿ ಎದುರು ನೋಡುತ್ತಿರುವ ಸೋಮ ಶೇಖರ ಖಾರ್ವಿ.

ಫೋನ್ ಪೇ & ಗೂಗಲ್ ಪೇ
ನಂಬ್ರ : 6363194548
-ಹೆಬ್ಬುಲಿ ರಮ್ಮಿ ಖಾರ್ವಿ

Leave a Reply

Your email address will not be published. Required fields are marked *