ದಿನಾಂಕ 15-05-2021ರಂದು ತೌತ್ತೆ ಚಂಡಮಾರುತ ಕರ್ನಾಟಕ ಕರವಳಿಯಿಂದ ಆದುಹೋದರಿಂದ ಕಾರಣ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ಕೊಲ್ಲೋರ ಸಂಜೀವ ಖಾರ್ವಿ ಮತ್ತು ಚೂಡಬಿಕ್ಯ ಖಾರ್ವಿ ಯವರ ಮನೆ ಸಮುದ್ರದ ಅಂಚಿನಲ್ಲಿರುವುದರಿಂದ 30-ರಿಂದ40 ತೆಂಗಿನ ಮರ ಸಮುದ್ರಪಾಲಾಗಿದೆ. 3ಮನೆ ಅಪಾಯದಂಚಿನಲ್ಲಿದೆ. ನಮ್ಮ ಗಂಗೋಳ್ಳಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ನಮೋ ಸದಾಶಿವ ಖಾರ್ವಿ ಯವರು ನಮ್ಮ ಶಾಸಕರ ಮತ್ತುಅಧಿಕಾರಿಗಳು ಗಮನಕ್ಕೆ ತಂದು ಶಾಸಕ ಶ್ರೀ ಸುಕುಮಾರ್ ಶಟ್ಟೆ.ಮಾಜಿ.ಶಾಸಕ ಶ್ರೀ ಗೋಪಾಲ್ ಪೂಜಾರಿ. ಜಿಲ್ಲಾಧಿಕಾರಿ ಜಿ.ಜಗಧೀಶ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ ಕುಂದಾಪುರ ತಹಶೀಲ್ದಾರರು,ಜಲ್ಲಾಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಧಿಕರಿ ನವೀನ್ ಭಟ್,ಮೀನುಗಾರಿಕೆ ನಿರ್ದೇಶಕರಾದ ಗಣೇಶ್, ಕುಂದಾಪುರ ಮೀನುಗಾರರ ಸಹಾಯಕ ನಿರ್ದೇಶಕರಾದ ಸುಮಲತಾ, ಮೀನುಗಾರಿಕೆ ಇಂಜಿನಿಯರಿಂಗ್ ಇಲಾಖೆಯ ಉದಯ ಕುಮಾರ್, ವಿಜಯ್ ಶಟ್ಟಿ, ಆಗಮಿಸಿ ಸ್ಥಳ ಪರಿಸಿಲಿಸಿ ತಾತ್ಕಾಲಿಕವಾಗಿ ತಡೆಗೋಡೆಗೆ ಸೂಚಿಸಲಾಗಿದೆ. ತಡೆಗೋಡೆಯ ಕೆಲಸ ಭರದಿಂದ ಸಾಗುತ್ತಿದೆ.