ರಾಷ್ಟ್ರಕ್ಕೆ ಮಾರಕವಾಗಿರುವ ರೋಗವು ಪ್ರತಿ ಹಳ್ಳಿ ಹಳ್ಳಿಯಲ್ಲಿ ವ್ಯಾಪಿಸುತ್ತಿರುವುದು ಹಾಗೂ ಆದರಿಂದ ಆಗುತ್ತಿರುವ ಕಷ್ಠ ನಷ್ಠವು ಮಿತಿ ಮೀರಿದೆ.ಹಾಗೂ ಇತ್ತೀಚಿನ ಕೆಲವು ದಿನಗಳಿಂದ ನಮ್ಮ ಏರಿಯಾದಲ್ಲೂ ಈ ಸೋಂಕು ತಗಲಿದ್ದು,ಇದನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟಲು ಎಲ್ಲರೂ ಸಜ್ಜಾಗಬೇಕಾಗಿದೆ. ದೇವಸ್ಥಾನ ಆಡಳಿತ ಮಂಡಳಿಯು ಮುಂಜಾಗೃತ ಕ್ರಮ ವಹಿಸಲು ತಾಲೂಕು ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದೊಂದಿಗಿದ್ದು,ಕೋರೋನಾ ಬಾರದಂತೆ ಜಾಗೃತ ವಹಿಸಲು ದಿಟ್ಟ ನಿಲುವು ತೆಗೆದುಕೊಂಡು ಈಗಾಗಲೇ ಮೂರು ಬಾರಿ ಸಭೆಯನ್ನು ಸ್ಥಳೀಯವಾಗಿ ಜರುಗಿಸಿದೆ.
ಲಸಿಕೆಗಾಗಿ ಬೇಡಿಕೆಯನ್ನು ಇಟ್ಟಿದ್ದು,ಲಸಿಕೆಯು ಅಲಭ್ಯತೆಯ ಕಾರಣ ಸ್ವಲ್ಪ ದಿನಗಳ ನಂತರ ನೀಡುವ ಭರವಸೆ ನೀಡಿರುತ್ತಾರೆ.ಸಾಮೂಹಿಕವಾಗಿ ಲಸಿಕೆ ನೀಡುವ ಯೋಜನೆಯನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಕೋರೋನಾವು ಸಮುದಾಯ ಮಟ್ಟದಲ್ಲಿ ಹರಡದಂತೆ ನಾವು ಕೋವಿಡ್ 19 ಪರೀಕ್ಷೆ ಮಾಡಲು ಕಾರ್ಯಪ್ರವತ್ತಾಗಿದ್ದೇವೆ.ನಮಗೆ ನಮ್ಮ ಸಮಾಜದ ಪ್ರತಿಯೊಬ್ಬರ ಸಹಕಾರವು ಅತ್ಯಗತ್ಯವಾಗಿದ್ದು ತಾವುಗಳು ನಮ್ಮೊಂದಿಗೆ ಸಹಕರಿಸಬೇಕಾಗಿ ಕೋರುತ್ತೇವೆ.
ಕೋವಿಡ್ ತಪಾಸಣೆಯನ್ನು ಸ್ಥಳೀಯವಾಗಿ ನಮ್ಮ ನಮ್ಮ ಏರಿಯಾದಲ್ಲಿಯೇ ನಡೆಸಲಾಗುವುದು. ತಪಾಸಣೆ ಮಾತ್ರ ಏರಿಯಾದಲ್ಲಿ ನಡೆಸಿದ್ರು ಇದರ ವರದಿಯು 4 ದಿನಗಳ ನಂತರ ತಮ್ಮ ಮೊಬೈಲ್ ನೇರವಾಗಿ ನಿಮಗೆ ಸಿಗುತ್ತದೆ.
ನಿಮಗೆ ಏನಾದ್ರೂ ಜ್ವರ,ಕೆಮ್ಮು,ನೆಗಡಿ,ಮೈಕೈ ನೋವುಗಳಿದ್ದಲ್ಲಿ ತಪಾಸಣೆ ಮಾಡಿಕೊಂಡು ಕೂಡಲೇ ಗುಣಮುಖರಾಗುವುದು ಒಳ್ಳೇಯದ್ದು.
ಇಂದಿನ ಸಭೆಯಲ್ಲಿ ನಿಮ್ಮ ನಿಮ್ಮ ವಠಾರದ ಯುವಕರನ್ನೆ ಇದರ ಸದುಪಯೋಗ ಪಡೆಯಲು ವಿನಂತಿಸುವಂತೆ ಹೇಳಲಾಗಿದ್ದು,ಇದರ ಪ್ರಯೋಜನ ಪಡೆದು ಕೋರೋನಾ ಮುಕ್ತರಾಗೋಣ ಎಂದು ಅಭಿಪ್ರಾಯ ಪಟ್ಟಿದ್ದೇವೆ.
ಶ್ರೀ ಮಹಾಕಾಳಿ ಮಾತೆಯು ಸರ್ವರನ್ನು ರಕ್ಷಿಸುತ್ತಾಳೆ.
ಭಯ ಪಡುವ ಅವಶ್ಯಕತೆ ಇಲ್ಲ.ಮುಂಜಾಗೃತ ಕ್ರಮವನ್ನು ಅನುಸರಿಸೋಣ.ಸಾಮಾಜಿಕ ಅಂತರ ಕಾಪಾಡೋಣ. ಆಗಾಗ್ಗೆ ಕೈ ತೊಳೆಯೋಣ. ಧೈರ್ಯದಿಂದ ಕಾರ್ಯವನ್ನು ಸಾಧಿಸೋಣ.
*ಓಂ ಶ್ರಿ ಮಹಾಕಾಳೈ ನಮಃ