ಕಡಲಿನ ಪರಿಸರ ಮತ್ತು ಮೀನುಗಾರಿಕೆಯ ಬಗ್ಗೆ ಸಮಗ್ರ ಮಾಹಿತಿಗಳನ್ನು ಪ್ರಸ್ತುತ ಪಡಿಸಲು ಖಾರ್ವಿ ಆನ್ಲೈನ್ ವಿಶೇಷ ವೆಬ್ನಾರ್ ನ್ನು ತಾರೀಕು 1/12 /2021 ರ ಬುಧವಾರದಂದು ಮಧ್ಯಾಹ್ನ ಗಂಟೆ 3ರಿಂದ ಆಯೋಜಿಸಿದ್ದು, ಇದರಲ್ಲಿ ನಮ್ಮ ಸಮಾಜದ ಪ್ರಖ್ಯಾತ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತರವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದು, ಮೀನುಗಾರರ ಪ್ರತಿನಿಧಿಗಳಾಗಿ ಹೊನ್ನಾವರ ಕಾಸರಕೋಡಿನ ಮೀನುಗಾರ ಹೋರಾಟಗಾರ ಶ್ರೀ ಗಣಪತಿ ತಾಂಡೇಲ್ ಮತ್ತು ಕಂಚುಗೋಡಿನ ಸಮಾಜ ಸೇವಕ, ಮೀನುಗಾರರ ಮುಖಂಡ ಶ್ರೀ ನಾಗೇಶ್ ಖಾರ್ವಿಯವರು ಭಾಗವಹಿಸಲಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಮೀನುಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು, ಮೀನುಗಾರರ ಕಷ್ಟ ಕಾರ್ಪಣ್ಯಗಳ ಬಗ್ಗೆ ವಾಸ್ತವತೆ ಅನಾವರಣಗೊಳ್ಳಲಿದೆ. ಕಡಲಿನ ಜೀವವೈವಿಧ್ಯತೆ, ಪರಿಸರ ವಾತಾವರಣದ ಬಗ್ಗೆ ಅಧಿಕಾರಯುತವಾಗಿ ಸಮಗ್ರ ಅಂಶಗಳನ್ನು, ಅಂಕಿಅಂಶಗಳ ಸಮೇತ ವೈಜ್ಞಾನಿಕ ನೆಲೆಯಲ್ಲಿ ಪ್ರಸ್ತುತ ಪಡಿಸಬಲ್ಲ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತರವರು ನಮ್ಮೊಂದಿಗೆ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
ಕಡಲಾಮೆಗಳ ಜೀವನ ಚಕ್ರದ ಬಗ್ಗೆ ವಿಶೇಷ ಅಧ್ಯಯನ, ಸಂಶೋಧನೆ ನಡೆಸಿರುವ ಶ್ರೀ ಪ್ರಕಾಶ ಮೇಸ್ತರವರು ಕಡಲ ಪರಿಸರ ಮತ್ತು ಜೀವವೈವಿಧ್ಯತೆಗಳ ಇಂಚಿಂಚೂ ಮಾಹಿತಿಗಳನ್ನು ಬಲ್ಲರು. ಅವರು ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಪರಿಸರಪೂರಕ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರಬಲವಾಗಿ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಕಡಲಾಮೆಗಳು ಮೊಟ್ಟೆ ಇಡುವ ಸುರಕ್ಷಿತ ತಾಣವಾದ ಕಾಸರಕೋಡು ಕಡಲತೀರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ಪಡುತ್ತಿದ್ದಾರೆ. ಮೀನುಗಾರ ಸಮಾಜ ಭಾಂಧವರು ಈ ವೆಬ್ನಾರ್ ನಲ್ಲಿ ಭಾಗವಹಿಸಿ ಕಡಲು ಮತ್ತು ಮೀನುಗಾರಿಕೆಯ ಸಮಗ್ರ ಮಾಹಿತಿಯನ್ನು ಪಡೆಯಲು ಸೂಕ್ತ ಅವಕಾಶವಿದ್ದು ಇದನ್ನು ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.
ಸುಧಾಕರ್ ಖಾರ್ವಿ
Editor
www.kharvionline.com
ಯಾವುದರಲ್ಲಿ ನೋಡೋದು ಸರ್ ಇದು.
YouTube ಅತವ Google meet ನಲ್ಲಿ
ಯಾವುದರಲ್ಲಿ ನೋಡೋದು ಸರ್ ಇದು.
YouTube ಅತವ Google meet ನಲ್ಲಿ