ಗೌರವಾನ್ವಿತ ಶ್ರೀ ಕೋಟ ಶ್ರೀನಿವಾಸ ಪೂಜಾರಿ ರವರು ಜಿಲ್ಲಾ ಉಸ್ತುವಾರಿ ಸಚಿವರು ಉ. ಕ. ರವರಲ್ಲಿ
ಮಾನ್ಯರೇ, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ತಮಗೆ ಹಾರ್ದಿಕ ಸ್ವಾಗತ.
ನಿಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಯಾಗಿರುವ 2000ರ ಪೂರ್ವದ ಅರಣ್ಯ ಭೂಮಿಯಲ್ಲಿನ ಅಕ್ರಮ ಸಾಗುವಳಿಯನ್ನು ಸಕ್ರಮಪಡಿಸಲು ಮತ್ತು ಅವರ ಹಿತರಕ್ಷಣೆಗಾಗಿ ತಾವು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಿರಾಗಿಯು ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಪರಿಸರ ಮಾಲಿನ್ಯ ಸಹಿತ ಜೀವವೈವಿಧ್ಯತೆಗಳಿಗೆ ಮಾರಕವಾಗಬಲ್ಲ ಮತ್ತು ಸ್ಥಳೀಯ ಸಾರ್ವಜನಿಕರ ತೀವ್ರ ವಿರೋಧ ಇರುವ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೂಡಲೇ ಕೈಬಿಟ್ಟು ಜಿಲ್ಲೆಯ ಕರಾವಳಿಯ ಜನತೆಗೆ ಈಗಿನ ಸ್ವಚ್ಛ ಪರಿಸರದಲ್ಲಿ ಬದುಕಲು ಇರುವ ಹಕ್ಕನ್ನು ಉಳಿಸಿಕೊಡಿ ಎನ್ನುವದಾಗಿ ಈಮೂಲಕ ವಿನಮ್ರವಾಗಿ ಕೋರುತ್ತಾ
ನಮ್ಮ ಜಿಲ್ಲೆಯ ಜಿಲ್ಲಾಡಳಿತವು ಯಾವುದೋ ಬಲವಾದ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ತಾಲ್ಲೂಕಿನ ಕಾಸರಕೋಡ ಟೊಂಕದ ಕಡಲತೀರದಲ್ಲಿ ಅಪ್ರಜಾಸತ್ತಾತ್ಮಕ, ಸರ್ವಾಧಿಕಾರಿ ನಡೆಯೊಂದಿಗೆ ಸಿಆರ್ ಝೆಡ್ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಪೋಲೀಸ್ ಬಲವನ್ನು ದುರುಪಯೋಗ ಪಡಿಸಿಕೊಂಡು ಸಾವಿರಾರು ಮೀನುಗಾರರ ಕುಟುಂಬ ವಾಸವಿರುವ ಸನಿಹದ ಕಡಲತೀರದಲ್ಲಿ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಮೊಟ್ಟೆಇಟ್ಟಿರುವ ಪ್ರದೇಶದಲ್ಲಿ 2ಕೀ.ಮೀಟರ್ ಉದ್ದಕ್ಕೂ ಸಾವಿರಾರು ಲಾರಿಗಿಂತ ಹೆಚ್ಚಿನ ಭಾರೀಪ್ರಮಾಣದಲ್ಲಿ ಮಣ್ಣನ್ನು ಸುರಿದು ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಖಾಸಗಿ ವಾಣಿಜ್ಯ ಬಂದರು ಕಂಪೆನಿಯೊಂದಿಗೆ ಸಾಮೀಲಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಮಾನವಹಕ್ಕುಗಳನ್ನು ದಮನಮಾಡುವ ಕಾರ್ಯ ನಡೆದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.
ಗಣರಾಜ್ಯದಿನ ಅಲ್ಲಿ ಮೀನುಗಾರ ಮಹಿಳೆಯರ ಮೇಲೆ ಮತ್ತು ಮೀನುಗಾರ ಯುವಕರ ಮೇಲೆ ದೌರ್ಜನ್ಯ ನಡೆದಿದೆ. ಮೀನುಗಾರರ ವಸತಿಗೆ ಧಕ್ಕೆ ಆಗುವರೀತಿಯಲ್ಲಿ ಬಲವಂತವಾಗಿ ಕಡಲತೀರದಲ್ಲಿ ಸಿವಾಲ್ ತೆರವುಗೊಳಿಸಲಾಗಿದೆ.ದಯವಿಟ್ಟು ಈ ವಿಚಾರದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆಗೆ ಒಳಪಡಿಸಿ ಜಿಲ್ಲೆಯ ಜನರಿಗೆ ಮೀನುಗಾರರಿಗೆ ಸಾಮಾಜಿಕ ನ್ಯಾಯ ಕೊಡಿಸಿ ಜಿಲ್ಲಾ ಆಡಳಿತದ ಸರ್ವಾಧಿಕಾರಿ ಮನೋಭಾವಕ್ಕೆ ತಡೆಹಾಕಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಗೌರವವನ್ನು ಹೆಚ್ಚಿಸುವಿರೆಂದು ನಂಬುತ್ತೇನೆ.
ವಂದನೆಗಳೊಂದಿಗೆ ನಿಮ್ಮ ವಿಶ್ವಾಸಿ
ಚಂದ್ರಕಾಂತ ಕೊಚರೇಕರ.ಹೊನ್ನಾವರ.
ಕಾರ್ಯದರ್ಶಿ, ರಾಷ್ಟ್ರೀಯ ಮೀನುಗಾರರ ಸಂಘಟನೆ. ಕರ್ನಾಟಕ 9448530732