ಮದ್ದುಗುಡ್ಡೆ ಕುಂದಾಪುರ : ಸಡಗರದ ಪಲ್ಲಕ್ಕಿ ಉತ್ಸವ

ಮದ್ದುಗುಡ್ಡೆ ಕುಂದಾಪುರ : ಸಡಗರದ ಪಲ್ಲಕ್ಕಿ ಉತ್ಸವ

ಕೊಂಕಣಿ ಖಾರ್ವಿ ಪ್ರಗತಿಪರ ಸಂಘ (ರಿ) ಮದ್ದುಗುಡ್ಡೆ ಕುಂದಾಪುರ ಇದರ 12ನೇ ವರ್ಷದ ಪುಷ್ಪಾಲಂಕೃತ ಪಲ್ಲಕ್ಕಿ ಉತ್ಸವದ ಕಾರ್ಯಕ್ರಮ ದಿನಾಂಕ 1.2.2022 ರ ಮಂಗಳವಾರದಂದು ಬೆಳಗ್ಗೆ ಸ್ಥಳಶುದ್ಧಿ, ಗಣಹೋಮ ಹಾಗೂ ಮಧ್ಯಾಹ್ನ 12:30 ಕ್ಕೆ ದಿ. ತಾಕು ನಾಗೇಶ್ ಖಾರ್ವಿಯವರ ಸ್ಮರಣಾರ್ಥ ಶ್ರೀಮತಿ ಲಕ್ಷ್ಮಿ ಬಾಯ್ ಮತ್ತು ಮಕ್ಕಳು ಹೊಸಕೇರಿ ಮದ್ದುಗುಡ್ಡೆ ಇವರಿಂದ ಅನ್ನಸಂತರ್ಪಣೆ ಸೇವೆ ನಡೆಯಿತು

ಸಂಜೆ 5.30 ಸರಿಯಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿ ಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ ಸಂಜೀವ ಖಾರ್ವಿ, ಮಹಿಳಾ ಪ್ರಗತಿಪರ ಸಂಘದ ಅಧ್ಯಕ್ಷರಾದ ದೀಪ ಸತೀಶ್ ಖಾರ್ವಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.. ನಂತರ ತಾಯಿ ಮಹಾಕಾಳಿ ಅಮ್ಮನವರ ಸನ್ನಿಧಿಗೆ ತೆರಳಿ ಪೂಜಾ ಸೇವೆಯನ್ನು ಮುಗಿಸಿ ಪುಷ್ಪಾಲಂಕೃತ ಪಲ್ಲಕ್ಕಿಯನ್ನು ಚಂಡೆ ವಾದನ, ವಾದ್ಯಘೋಷಗಳೊಂದಿಗೆ ಪುರಮೆರವಣಿಗೆಯಲ್ಲಿ ಕುಂದಾಪುರ ರಾಜಮಾರ್ಗದಲ್ಲಿ ಸಾಗಿ ಬಂದು ಮದ್ದುಗುಡ್ಡೆಯ ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ವೇದಿಕೆಯಲ್ಲಿ ಬರಮಾಡಿಕೊಳ್ಳಲಾಯಿತು.

ತಾಯಿಯ ಪೂಜಾ ವಿಧಿವಿಧಾನ ಮುಗಿದಮೇಲೆ ದೇವಸ್ಥಾನದ ಪ್ರಧಾನ ಅರ್ಚಕ ರಿಂದ ಆಶೀರ್ವಚನ, ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯಾನಂದ ಖಾರ್ವಿ ಯವರು ಶುಭಕೋರಿ ಹರಸಿದರು.. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸಂಜೀವ ಖಾರ್ವಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿ ಅವರು ಮಾತನಾಡಿ ಗ್ರಾಮದ ಎಲ್ಲಾ ವರ್ಗದ ಸಮಾಜದವರಿಗೆ ಹರಸಿ ಹಾರೈಸಿದ ನಂತರ .ಪ್ರಸಾದ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಅಶೋಕ ಖಾರ್ವಿ ಹಾಗೂ ಭವಾನಿಶಂಕರ್ ಖಾರ್ವಿ ಯವರು ನಿರ್ವಹಿಸಿ ವಂದಿಸಿದರು…

Leave a Reply

Your email address will not be published. Required fields are marked *