ಕಾಸರಕೋಡು ಕಡಲತೀರದಲ್ಲಿ ಕಡಲಾಮೆ ಸಾವು, ಅಮಾನವೀಯ ಕೃತ್ಯ: ರಾಜೇಶ ಗೋವಿಂದ ತಾಂಡೇಲ
ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ದಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸುಪರ್ಧಿಯಲ್ಲಿರುವ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಕಡಲತೀರದಲ್ಲಿ ಕಡಲಾಮೆಗಳು ಸಂತಾನಾಭಿವ್ರಧ್ಧಿಗಾಗಿ ಮೊಟ್ಟೆ ಇಡಲು ಬರುವ ರಿಡ್ಲೆ ಜಾತಿಯ ಕಡಲಾಮೆಗಳನ್ನು ಸ್ಥಳೀಯ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾವಲು ಸಿಬ್ಬಂದಿಗಳು ಹೊಡೆದು ಸಾಯಿಸುವ ಅಮಾನವೀಯ ಕೃತ್ಯ ಎಸಗಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೊಂಕಣಿ ಖಾರ್ವಿ ಸಮಾಜದವರು ಆಗ್ರಹ ಪಡಿಸಿದ್ದಾರೆ.
ಕಡಲಾಮೆಗಳನ್ನು ಹಿಂದುಗಳು ಅದರಲ್ಲೂ ವಿಶೇಷವಾಗಿ ಕೊಂಕಣ ಖಾರ್ವಿ ಸೇರಿದಂತೆ ಇಲ್ಲಿನ ಬೆಸ್ತರು ಕಡಲಾಮೆಗಳನ್ನು ದೈವಿಸ್ವರೂಪ ಎಂದು ಪೂಜನೀಯ ಭಾವನೆಯಿಂದ ಆರಾದಿಸುತ್ತಾರೆ.ಕಡಲಾಮೆಗಳ ಕುರಿತು ಕುರ್ಮಾವತಾರದ ಇತಿಹಾಸವನ್ನು ಉಲ್ಲೇಖಿಸುತ್ತಾರೆ.ಗೋವಿಗೆ ಸಮಾನವಾದ ನಂಬಿಕೆಯಿಂದ ಕಾಣುತ್ತಾರೆ.ಇಲ್ಲಿ ನಿಷೇದಾಜ್ಞೆ ನಡುವೆಯೇ ವಾಣಿಜ್ಯ ಬಂದರು ಕಂಪನಿಯವರು ಕಡಲಾಮೆಗಳನ್ನು ಸಾಯಿಸಿ ಅವುಗಳ ಮಾರಣಹೋಮ ನಡೆಸುತ್ತಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು ದಿ ಹೊನ್ನಾವರ ಪೋರ್ಟ ಪ್ರೈವೇಟ್ ಕಂಪೆನಿಯ ಮತ್ತು ಅದರ ಕಾವಲು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು.ಸ್ಥಳೀಯ ಕೊಂಕಣಿ ಖಾರ್ವಿ ಸಮಾಜದ ಮುಖಂಡ ರಾಜೇಶ ಗೋವಿಂದ ತಾಂಡೇಲರು ಸ್ಥಳೀಯ ಅರಣ್ಯವಲಯಾದಿಕಾರಿಯವರನ್ನು ಆಗ್ರಹ ಪಡಿಸಿದ್ದಾರೆ.ಮತ್ತು ವಾಣಿಜ್ಯ ಬಂದರು ನಿರ್ಮಾಣ ಕಂಪನಿ ಹಾಗೂ ಅದರ ಕಾವಲು ಸಿಬ್ಬಂದಿಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕುಕ್ರತ್ಯವನ್ನು ಖಂಡಿಸುವುದಾಗಿ ಅವರು ತಿಳಿಸಿದರು.