ಬ್ರಹ್ಮರಥೋತ್ಸವದ ಪರಿಕಲ್ಪನೆಯೊಂದಿಗೆ ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ

ಬ್ರಹ್ಮರಥೋತ್ಸವದ ಪರಿಕಲ್ಪನೆಯೊಂದಿಗೆ ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿ ಉತ್ಸವ.

ಒಂದು ಸಮಾಜದ ಆಚಾರ ವಿಚಾರ, ನಂಬಿಕೆ, ಸಂಪ್ರದಾಯ, ಭಾಷೆ ಸಾಹಿತ್ಯ, ಶಿಲ್ಪ, ಸಂಗೀತ, ನೃತ್ಯ, ಲಲಿತಕಲೆಗಳು, ಉಡುಗೆ ತೊಡುಗೆಇತ್ಯಾದಿಗಳ ಮೊತ್ತವೇ ಸಂಸ್ಕೃತಿ. ಇದಕ್ಕೆ ಶ್ರೇಷ್ಠ ನಿದರ್ಶನದ ಕಲಶಪ್ರಾಯವೆಂಬಂತೆ ಬಹೂದ್ದೂರ್ ಷಾ ರಸ್ತೆಯ ನಿವಾಸಿಗಳು ರಥೋತ್ಸವದ ವೈಭವವನ್ನು ಸಾಕ್ಷಾತ್ಕಾರಗೊಳಿಸುವ ಪರಿಕಲ್ಪನೆಯಲ್ಲಿ ಅದ್ಭುತವಾದ ರಥವನ್ನು ನಿರ್ಮಿಸಿದ್ದಾರೆ. ಶ್ರೀ ಮಹಾಕಾಳಿ ಅಮ್ಮನವರ ಮೂರನೇ ವರ್ಷದ ಪಲ್ಲಕ್ಕಿ ಉತ್ಸವವನ್ನು ರಥೋತ್ಸವದ ಮಾದರಿಯಲ್ಲಿ ಸ್ವಾಗತಿಸಿದ್ದಾರೆ. ಇದು ಕೊಂಕಣಿ ಖಾರ್ವಿ ಸಮಾಜದ ಐತಿಹಾಸಿಕ ಮೈಲಿಗಲ್ಲಾಗಿದ್ದು, ಕಾಲಘಟ್ಟದಲ್ಲಿ ಶ್ರೀ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ರಥೋತ್ಸವ ಜರುಗಬಹುದು ಎಂಬ ಶುಭಶಕುನವನ್ನು ವೈಶಿಷ್ಟ್ಯಪೂರ್ಣವಾಗಿ ಬಿಂಬಿಸುತ್ತದೆ.

ವೈವಿಧ್ಯಮಯ ಚಿತ್ತಾರ ಮತ್ತು ವೈಶಿಷ್ಟ್ಯಪೂರ್ಣ ಪರಿಕಲ್ಪನೆಯೊಂದಿಗೆ ಮೂಡಿಬಂದಿರುವ ಈ ರಥ ನೋಡಲು ತುಂಬಾ ಆಕರ್ಷಕವಾಗಿದೆ. ಬಹೂದ್ದೂರ್ ಷಾ ರಸ್ತೆ ಶ್ರೀ ಮಹಾಕಾಳಿ ಸೇವಾ ಸಮಿತಿಯವರು ಶ್ರದ್ಧೆ ಭಕ್ತಿಯಿಂದ ತಮ್ಮ ಪರಿಸರಕ್ಕೆ ರಥೋತ್ಸವದ ಮಾದರಿಯಲ್ಲಿ ಶ್ರೀ ಮಹಾಕಾಳಿ ಅಮ್ಮನವರ ಪಲ್ಲಕ್ಕಿಯನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಸ್ಮರಣೀಯಗೊಳಿಸಿದ್ದಾರೆ.

ಬ್ರಹ್ಮರಥೋತ್ಸವದ ಪರಿಕಲ್ಪನೆಯೊಂದಿಗೆ ಧಾರ್ಮಿಕ ಪರಂಪರೆಯ ಹೊಸ ಇತಿಹಾಸ ಸೃಷ್ಟಿಸಿರುವ ಪಲ್ಲಕ್ಕಿ ಉತ್ಸವವು ಜನಮಾನಸದಲ್ಲಿ ಅಭೂತಪೂರ್ವ ಸಂಚಲನ ಸೃಷ್ಟಿಸಿದೆ. ಪವಿತ್ರ ಧಾರ್ಮಿಕ ಸಂಭ್ರಮವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಇದಕ್ಕೆ ಕಾರಣೀಕರ್ತರಾದ ಮತ್ತು ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದ ಭಕ್ತಮಹಾಶಯರಿಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತದೆ.

www.kharvionline.com

Leave a Reply

Your email address will not be published. Required fields are marked *