ಫೆಬ್ರವರಿ 12ಕ್ಕೆ ಪಡುಗಡಲಿನಿಂದ ಕೃತಿ ಅನಾವರಣ

ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿಯವರು ಕಡಲು, ಕರಾವಳಿ ಜೀವನ, ಮೀನುಗಾರಿಕೆ, ಮತ್ಸ್ಯ ಸಂಪತ್ತಿನ ಕುರಿತು ಜಯಕಿರಣದಲ್ಲಿ ಬರೆಯುತ್ತಿರುವ ಸರಣಿ ಅಂಕಣಗಳ ಸಂಕಲನ ಪಡುಗಡಲಿನಿಂದ ಕೃತಿ ಇದೇ ಫೆಬ್ರವರಿ 12 ರಂದು, ಮುಲ್ಕಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

ದಶಕಗಳ ಕಾಲ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ನಾಗರಾಜ ಖಾರ್ವಿಯವರ ನೈಜ ಅನುಭವಗಳು, ರೋಚಕ ವಿಚಾರಗಳು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಹೊಸದಿಗಂತ ಪತ್ರಿಕೆಯ ಅಂಕಣಕಾರರಾದ ಹಕ್ಲಾಡಿ ಸಂದೇಶ್ ನಾಯ್ಕ್‌ರವರ ಮುನ್ನುಡಿ, ಸಿದ್ಧಾಪುರ ಶಾಲೆಯ ಶಿಕ್ಷಕರೂ, ಕುಂದಗನ್ನಡ ಕವಿಯೂ ಆದ ಕೃಷ್ಣ ಡಿ.ಎಸ್ ಅವರ ಬೆನ್ನುಡಿ, ಕರಾವಳಿ ಕಾವಲು ಪೊಲೀಸ್ ಪಡೆಯ ನಾಗರಾಜ್ ತ್ರಾಸಿ ಹೊಸಪೇಟೆ, ಅವರ ಶುಭ ಹಾರೈಕೆಯ ನುಡಿಗಳೊಂದಿಗೆ ಸಂಕಲನವು ಸುಂದರವಾಗಿ ಮೂಡಿ ಬಂದಿದೆ. ಕಥಾಬಿಂದು ಪ್ರಕಾಶನದವರು ಪ್ರಕಟಿಸುತ್ತಿರುವ ಈ ಕೃತಿಯಲ್ಲಿ ಒಟ್ಟು 50 ಲೇಖನಗಳಿವೆ.

ಪ್ರಸ್ತುತ ಇವರು ದ.ಕ.ಜಿ‌.ಪಂ.ಹಿ.ಪ್ರಾ.ಶಾಲೆ ಮುಲ್ಲಕಾಡು ಮಂಗಳೂರಿನಲ್ಲಿ ಪದವೀಧರ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದು ಇವರ ಮೂರನೆಯ ಕೃತಿಯಾಗಿದೆ. ಇಬ್ಬನಿಯ ಮೆರವಣಿಗೆ, ಕಮಲ ತನಯನ ಷಟ್ಪದಿ ಕೃತಿಗಳು ಪ್ರಕಟಗೊಂಡಿದ್ದು, ಪಾರ್ಥೇಶ್ವರನ ಅಂಕಿತದಲ್ಲಿ 500 ವಚನಗಳನ್ನು ರಚಿಸಿದ್ದಾರೆ.

Leave a Reply

Your email address will not be published. Required fields are marked *