ಕಡಲತೀರದ ವೈವಿಧ್ಯತೆಯ ಸಾಗರ ಕನಾ೯ಟಕ ರಾಜ್ಯ.

ಕಡಲತೀರದ ವೈವಿಧ್ಯತೆಯ ಸಾಗರ ಕನಾ೯ಟಕ ರಾಜ್ಯ ಸಮುದ್ರ ವಿಶ್ವದ ಏಲ್ಲಾ ಭೂಬಾಗಗಳನ್ನು ಸುತ್ತುವರೆದಿದೆ ಸಮುದ್ರದ ನೀರಿಗೆ ಯಾವುದೇ ಗಡಿಗಳು ಇಲ್ಲ ಮಾನವ ತನ್ನ ಅನುಭವದ ಮೂಲಕ ಸಮುದ್ರವನ್ನು 7 ಸಾಗರಗಳಾಗಿ ವಿಗಂಡಿಸಿದಲ್ಲದೆ ಆಯಾ ಪ್ರದೇಶದ ಸಮುದ್ರದ ವಾತಾವರಣ, ವೈವಿದ್ಯಮಯ ಕರಾವಳಿ ತೀರಪ್ರದೇಶದ ಭೌಗೂಳಿಕ ಗುಣಲಕ್ಷಣ ಗಳನ್ನು ವಿಶ್ಲೇಶಿಸಿ ಹಲವು ವಿಧಗಳಲ್ಲಿ ವಿಂಗಡಿಸಿದ್ದಾನೆ, ಸಮುದ್ರದ ಹಾಗೂ ಕಡಲತೀರಗಳ ವಿಂಗಡಣೆಗಳು ಅದರ ವಿಶ್ಲೇಷಣೆಗಳು ಅತ್ಯಂತ ಆಸಕ್ತಿಕರವಾದ ಸಂಗತಿಗಳಾಗಿವೆ ನಮ್ಮ ಕನಾ೯ಟಕ ರಾಜ್ಯದ ಕಡಲತೀರದ ಉತ್ತರ ಭಾಗವನ್ನು ಕೊಂಕಣ ಕರಾವಳಿ ಮತ್ತು ದಕ್ಷಿಣ ಕ್ಕೆ ಕರಾವಳಿ ಅನ್ನುವ ರೂಡಿ, ಕೇರಳ ರಾಜ್ಯದ ಉತ್ತರಭಾಗದ ಕಡಲತೀರವನ್ನು ಮಲಬಾರ ಅಂದರೆ ಗೋವಾ ಮಾಹಾರಾಷ್ಠ್ರದ ದಕ್ಷಿಣ ಕಡಲತೀರಕ್ಕೆ ಕೊಂಕಣ ಎನ್ನುವರು, ಇದರ ಸಮುದ್ರ ಭಾಗಕ್ಕೆ ಅರೇಬಿಯನ ಸಮುದ್ರ ಎಂದು ಗುರುತಿಸಿದರೆ ವಿಶ್ವಕ್ಕೆ ಇದು ಹಿಂದು ಮಾಹಾಸಾಗರದ ಪ್ರದೇಶ. ಕನಾ೯ಟಕದ ಕಡಲು ವಿಶ್ವದ ಸಾಗರ ವಿಜ್ಷಾನಿಗಳಿಗೆ ಇಂಡೂ-ಪೆಸಿಫಿಕ್ ಪ್ರದೇಶದ ವ್ಯಾಪ್ತಿಗೆ ಓಳಪಡುವ ಪ್ರದೇಶವಾದರೆ, ಯುನೈಟೆಡೆ ನೇಷನ್ ನ ಎಫ್.ಏ.ಓ ಮೀನುಗಾರಿಕಾ ವಲಯ 51 ಎಂದು ಗುರುತಿಸುತ್ತಾರೆ.

2.172 ಮಿಲಿಯನ್ ಕಿ.ಮೀ2. ವ್ಯಾಪ್ತಿ ಹೊಂದಿದ ಭಾರತದ EEZ

ಕನಾ೯ಟಕ ಕರಾವಳಿ ತೀರ ನಿವ೯ಹಣೆ ನಕ್ಷೇಗಳು ಡಿ43 ಹಾಳೆಗಳ ವಿವಿಧ ಸಂಖ್ಯೆಗಳನ್ನು ಹೊಂದಿದೆ. ಸ್ಥಳೀಯ ವಾಗಿ ಆಯಾ ಉರಿನ ಅಥವಾ ತಾಲೂಕಿನ ಹೆಸರಿನಲ್ಲಿ ಮರಳು ಕಡಲತೀರವನ್ನು ಹೆಸರಿಸುವದು ರೂಡಿಯಲ್ಲಿದೆ ಉದಾಹರಣೆಗೆ ಕಾರವಾರ ಬೀಚ್, ಕಾಸರಕೋಡ್ ಬೀಚ್, ಮಲ್ಪೆ ಬೀಚ್. ಕಡಲ ತೀರ ಜೀವವೈವಿಧ್ಯತೆಯ ಪರಿಸರಗಳ ವೈವಿಧ್ಯತೆ, ಭೌಗೋಳಿಕ ಗುಣಲಕ್ಷಣ ಗಳ ಪ್ರಕಾರ ಕನಾ೯ಟಕದಲ್ಲಿಸಾಮಾನ್ಯವಾಗಿ ಕಾಣಸಿಗುವ ಪರಿಸರಗಳ ವಿಧಗಳೆಂದರೆ ಮರಳುತೀರ ಪ್ರದೇಶದ ಪರಿಸರ, ಕಲ್ಲು ತೀರಪ್ರದೇಶದ ಪರಿಸರ, ಕಾಂಡ್ಲಾ ಪರಿಸರ. ನಡುಗಡ್ಡೆಗಳು, ಉಬ್ಬರ-ಇಳಿತದ ಮರಳುತೀರ/ಕಲ್ಲುತೀರ ಪರಿಸರ, ನದಿ ಸಂಗಮ ಹಿನ್ನಿರಿನ ಪರಿಸರ, ಹವಳದ್ವೀಪಗಳು, ಸಮುದ್ರ ತಳಬಾಗದ ಪರಿಸರ(ಬೆನಥಿಕ್), ಕೆಸರು ತೀರದ ಪರಿಸರ, ಅಳವೆ ಪರಿಸರಗಳು ಮರಳುದಿಬ್ಬಗಳು, ಮಡ್ ಪ್ಲಾಟ್ ಗಳು, ನೀರಿನಲ್ಲಿ ಮುಳುಗಿರುವ ಕಲ್ಲುಗಳ ಪರಿಸರಗಳು. ಕನಾ೯ಟಕ ರಾಜ್ಯದ ಕರಾವಳಿ ತೀರ ಪ್ರದೇಶ ವಿಶ್ವದಲ್ಲಿ ಹಾಗೂ ಭಾರತದಲ್ಲಿ ತನ್ನದೇ ಆದ ವೈಶಿಷ್ಟ ಪೂಣ೯ ಪರಿಸರ ಮತ್ತು ಕಡಲತೀರಕ್ಕೆ ಹೆಸರುವಾಸಿಯಾಗಿದೆ ಇವುಗಳಲ್ಲಿ ಕಾರವಾರದ ಮಾಜಾಳಿಯಲ್ಲಿರುವ ತೀಳಮಾತಿ ಎನ್ನುವ ಪ್ರದೇಶದಲ್ಲಿ ಕಪ್ಪು ಮರಳಿನ ಬೀಚ್, ನಡುಗಡ್ಡೆಗಳಿಂದ ಸುತ್ತುವರೆದು ರಕ್ಷಿತ ಕಾರವಾರ ತೀರ(ಐಲೆಂಡ್ ಸೇಲ್ ಟರ್ಡ ಕೊಸ್ಟಲೈನ್), ಗೊಕಣ೯ದ ಓಂ ಬೀಚ್, ಆಘನಾಶಿನಿಯ ಗಜನಿ ಪ್ರದೇಶ, ಕುಮಟಾ ತಾಲೂಕಿನ ನುಶಿಕೋಟೆ ಪ್ರದೇಶದ 1800 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದ ಕಾಂಡ್ಲಾಕಾಡು ಭಾರತದ ಪಶ್ಚಿಮ ಕರಾವಳಿಯಲ್ಲಿಯೇ ಅತಿದೊಡ್ಡ ಕಾಂಡ್ಲಾ ಕಾಡು, ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚು ಕಡಲಾಮೆಗಳು ಮೊಟ್ಟೆ ಇಡಲು ಬರುವ ಕಾಸರಕೋಡ ಕಡಲತೀರ ಪ್ರದೇಶ, ಹೊನ್ನಾವರದಲದಲಿರುವ ಕನಾ೯ಟಕ ರಾಜ್ಯದ ಪ್ರಥಮ ಮತ್ತು ಏಕೈಕ ಕಡಲಧಾಮದ ವ್ಯಾಪ್ತಿಯಲ್ಲಿ ಬರುವ 7.5 ಕಿ.ಮಿ. ಉದ್ದದ ನಿಜ೯ನ ಕಲ್ಲುತೀರ (ರಾಕೀ ಶೋರ್ ) ಭಾರತದಲ್ಲಿ ಉದ್ದವಾದ ಕಲ್ಲು ಕಡಲ ತೀರವಾಗಿದೆ,ಉಡುಪಿಯ ಸೆಂಟ್ ಮೇರಿ ದ್ವೀಪ್, ನೇತ್ರಾಣಿ ಹವಳ ದ್ವೀಪ್ ಪ್ರಮುಖವಾಗಿವೆ. ಕನಾ೯ಟಕ ಕರಾವಳಿಗೆ ಬೇಟಿಕೊಡುವ ವಿವಿದ ಜಾತಿಯ ತಿಮಿಂಗಲಗಳು ಡಾಲ್ಪಿನ್ ಗಳು, ಮೆಕರಲ್ ಕೋಸ್ಟ(ಬಂಗಡೆ ಮೀನಿನ ಕರಾವಳಿ) ಎಂದೆ ವಿಶ್ವದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ ಉತ್ತರಕನ್ನಡ. ಕನಾ೯ಟಕ ರಾಜ್ಯ ವೈವಿಧ್ಯಮಯ ಕರಾವಳಿ ತೀರ ಹೊಂದಲು ಪ್ರಮುಖ ಕಾರಣಿಕತ೯ವಾದ ಪಶ್ಚಿಮ ಘಟ್ಟಗಳು ಮತ್ತು ಇಲ್ಲಿನ ನದಿಗಳು, ಪಶ್ಸಿಮ ಘಟ್ಟಗಳು ಉತ್ತರ ಕನಾ೯ಟಕದ ಕಡಲತೀರದ ಮೇಲೆ ಹಬ್ಬಿದ ಕಾರಣ ಜಗತಗತ್ತಿನಲ್ಲಿ ಕಾಣಸೀಗುವ ಬಹುತೇಕ ಕಡಲ ತೀರದ ವಿಧಗಳನ್ನು ಕನಾ೯ಟಕ ರಾಜ್ಯದಲ್ಲಿ ಮಾತ್ರ ನೋಡಸಿಗುತ್ತದೆ ಅವುಗಳಲ್ಲಿ ಬೇ, ಲಗೂನ್, ಕ್ರೀಕ್, ಪೋಕೆಟ್ ಬೀಚ್, ಎಸ್ಚುರಿ, ಮಾಂಗ್ರೊ, ಸೀಸನಲ್ ಕ್ರೀಕ್, ಶ್ಯಾಂಡ್ ಡ್ಯೂನ್, ಬ್ಯಾಕ್ ವಾಟರ್ಸ್, ಕ್ಲೀಫ್, ಕೇವ್, ಹೆಡ್ ಲ್ಯಾಂಡ್, ಸ್ಟಾಕ್, ಟೊಂಬೋಲೋ, ಟೈಡ್ ಐಲ್ಯಾಂಡ್, ಟೈಡಲ್ ಪ್ಲಾಟ್, ಸ್ಪಿಟ್ ಗಳು ಸಾಮಾನ್ಯವಾಗಿದೆ.

ಕುಮಟಾ ತಾಲೂಕಿನ ಮಡ್ ಪ್ಲಾಟ್ ನಲ್ಲಿ ಆಹಾರ ಪಡೆಯುತ್ತಿರುವ ಪಕ್ಷಿಗಳು

ಭಾರತದ ಪಶ್ಚಿಮ ಕರಾವಳಿಯ 5 ರಾಜ್ಯಗಳ ಕಡಲತೀರದ ಉದ್ದಕ್ಕೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ 4ನೇ ಸ್ಥಾನ ಕನಾ೯ಟಕ ರಾಜ್ಯ ಸುಮಾರು ೩೦೦ ಕಿ.ಮಿ. ಉದ್ದದ ಕರಾವಳಿ ತೀರ ಪ್ರದೇಶ, ಕಡಲತೀರದಿಂದ 12 ನಾಟಿಕಲ್ ಮೈಲ್ ದೂರದ ಭಾರತದ ಟೆರಿಟೋರಿಯಲ್ ವಾಟರ್ ಕನಾ೯ಟಕ ರಾಜ್ಯದ ಆಡಳಿತ ವ್ಯಾಪ್ತಿಗೆ ಬರುತ್ತದೆ. ಕರಾವಳಿ ತೀರಗಳು ಭೂಬಾಗ ಮತ್ತು ಸಮುದ್ರವನ್ನು ವಿಭಜಿಸುವ ಪ್ರದೇಶಗಳು ಇಂತಹ ಪ್ರದೇಶಗಳು ಅತಿಹೆಚ್ಚು ಜೀವವೈವಿಧ್ಯತೆಯಿಂದ ಕೂಡಿರುತ್ತದೆ ಹಾಗೂ ಅತಿ ಹೆಚ್ಚು ಬಗೆಯ ಜೀವನಾಂಶ ಸೇವೆಗಳನ್ನು ಓದಗಿಸುತ್ತದೆ. ವಿಶ್ವದ ಪ್ರಮುಖ ನಗರಗಳು ಕಡಲತೀರ ಪ್ರದೇಶದಲ್ಲಿದೆ, ವಿಶ್ವದ ಹೆಚ್ಚಿನ ಜನಸಾಂದ್ರತೆ ಕಡಲತೀರ ಪ್ರದೇಶದಲ್ಲಿದೆ ಆದರೆ ಕನಾ೯ಟಕ ರಾಜ್ಯದ ಕರಾವಳಿ ತೀರದ ಜನಸಾಂದ್ರತೆ ಇದಕ್ಕೆ ತದ್ವಿರುದ್ದ ಕಾರಣ ಪಶ್ಸಿಮ ಘಟ್ಟಗಳು ಕನಾ೯ಟಕದ ಕರಾವಳಿಯನ್ನು ಆವರಿಸಿ ಜನವಸತಿಗೆ ಯೋಗ್ಯವಾದ ಪ್ರದೇಶಗಳನ್ನು ಕಡಿಮೆ ಪ್ರಮಾಣದಲ್ಲಿರಿಸಿದೆ. ಕನಾ೯ಟಕದ ಕರಾವಳಿ ಜೀವವೈವಿಧ್ಯತೆಯ ಆಗರ ಮತ್ತು ಅತಿ ಕ್ಲಿಷ್ಟಕರ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ನೂರಾರು ಬಗೆಯ ಮೀನುಗಳು, ಏಡಿ ಸಿಗಡಿಗಳು, ಮೃದ್ವಂಗಿಗಳು, ಬಗೆ ಬಗೆಯ ಜಾತಿಯ ಹುಳಗಳು, ಸಮುದ್ರಕಳೆಗಳು ತಮ್ಮ ಆವಾಸ ಸ್ಥಾನಗಳ ಆಹಾರ ಚಕ್ರದಲ್ಲಿ ಪ್ರಮುಖ್ಯವಾಗಿರುತ್ತದೆ. ಇವುಗಳಲ್ಲಿ ಕೆಲವು ಜಾತಿ ಮೀನುಗಳು, ಸಿಗಡಿ-ಏಡಿಗಳನ್ನುಫೌಷ್ಠಿಕ ಆಹಾರಕ್ಕಾಗಿ, ಔಷಧದ ತಯಾರಿಕೆಗೆ, ಇನ್ನಿತರ ಬಳಕೆಗಾಗಿ ನಾವು ಬಳಸುತ್ತೆವೆ ಇವುಗಳನ್ನು ಹಿಡಿಯಲು ವಿವಿದ ಪಂಗಡಗಳ ಮೀನುಗಾರರು ಕರಾವಳಿಯಲ್ಲಿ ನೆಲೆ ಕಂಡಿದ್ದಾರೆ ಬಗೆ ಬಗೆಯ ಮೀನುಗಾರಿಕಾ ಬಲೆ, ದೋಣಿ, ಪರಿಕರಗಳು ಹಾಗೂ ವಿಧಾನಗಳನ್ನು ಬಳಸುತ್ತಾರೆ ಮೀನುಗಾರಿಕೆಹಲವು ಕವಲುಗಳನ್ನು ಓಳಗೊಂಡ ಕೌಶಲ್ಯ ಆಧಾರಿತ ದೊಡ್ಡ ಉದ್ಯಮವಾಗಿದೆ ಸಾವಿರಾರು ಕುಟುಂಬಗಳು ಮೀನುಗಾರಿಕೆ ಉದ್ಯಮದ ಮೇಲೆ ಅವಲಂಬಿತವಾಗಿದೆ. ಕರಾವಳಿಯಲ್ಲಿ ಪರಿಸರ ಇನ್ನು ಹಲವು ಉದ್ಯಮಗಳಿಗೆ ನೆಲೆಕಂಡಿದೆ ಇವುಗಳಲ್ಲಿ ಬಂದರು, ನೌಕಾಯಾನ, ಮರಳುಗಾರಿಕೆ, ಗಣಿಗಾರಿಕೆ, ತೋಟಗಾರಿಕೆ, ಇತ್ಯಾದಿ ನೂರಕ್ಕಿಂತ ಹೆಚ್ಚು ಕರಾವಳಿ ಪರಿಸರದ ಬಳಕೆದಾರರ ಗುಂಪುಗಳ ಕುಟುಂಬಗಳಿಗೆ ಜೀವನಾಂಶದ ಸೇವೆಗಳನ್ನು ಓದಗಿಸುವ ಕರಾವಳಿ ಕಡಲು ವಿವಿಧ ರೀತಿಯ ಅಭಿವೃಧ್ದಿಯ ಓತ್ತಡಗಳಲ್ಲಿ ನಲಗುತ್ತಿದೆ. ಕನಾ೯ಟಕ ಸರಕಾರದ ಹಲವು ಇಲಾಖೆಗಳು ಕರಾವಳಿ ತೀರ ಪ್ರದೇಶದ ಆಡಳಿತದ ಅಧಿಕಾರವನ್ನು ವ್ಯಕ್ತ ಪಡಿಸುತ್ತಾರೆ ಆದರೆ ಕರಾವಳಿ ಪರಿಸರ ಸಂರಕ್ಷಣೆ ಹಾಗೂ ನಿವ೯ಹಣೆಗಾಗಿ ಓಂದೆಡೆ ಸೇರಿ ಚಚಿ೯ಸದೆ ಇರುವದು ಕನಾ೯ಟಕ ಕರಾವಳಿಗೆ ಶಾಪವಾಗಿದೆ ಎಂದರೆ ತಪ್ಪಾಗಲಾರದು, ಕನಾ೯ಟಕ ಕರಾವಳಿ ಯಿಂದ ಬರುವ ಉತ್ಪನ್ನ ಹಾಗೂ ಲಾಭಾಂಶಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ತೋರಿಸುವ ಜನರ ಗುಂಪಿಗೆ ಕರಾವಳಿ ತೀರ ಕೇವಲ ಮಾನವರಿಗೆ ಮಾತ್ರ ವಲ್ಲ ನೂರಾರು ಬಗೆಯ ಪಕ್ಕಿಗಳು, ಪ್ರಾಣಿಗಳು, ಜಲಚರಗಳ ಜೀವನ, ಆಹಾರಗಳ ಸಲೆಯಾಗಿರುತ್ತವೆ ಅನ್ನುವದು ಮನವರಿಕೆ ಯಾಗಬೇಕಾಗಿದೆ. ಭಾರತ ಸರಕಾರ ಕರಾವಳಿ ತೀರ ವಲಯ ನಿಯಂತ್ರಣ ನಿಭಂದನೆಗಳನ್ನು 1991 ರಿಂದ ಆರಂಭಿಸಿ 2019 ರ ತನಕ ಹಲವು ಬಾರಿ ಅವುಗಳ ರೂಪರೆಷೇಗಳನ್ನು ಬದಲಿಸಿ ಸಡಿಲಿಸಿದೆ. ಕನಾ೯ಟಕದ ಕರಾವಳಿಯ ಬಳಕೆದಾರರು ಸಂಘಟಿತರಾಗಿ ಕನಾ೯ಟಕದ ವೈಶಿಷ್ಡ ಪೂಣ೯ ಕರಾವಳಿ ತೀರದ ಮುಂದಿನ ಪೀಳಿಗೆಗೂ ಊಳಿಸುವ ಸಂಕಲ್ಪಕ್ಕೆ ಕಟಿಭಧ್ದರಾಗುವದು ಅತ್ಯವಶ್ಯಕವಾಗಿದೆ.

ಅಘನಾಶಿನಿ ಕಪ್ಪೆ ಚಿಪ್ಪು ಸಂಗ್ರಹ
ಓಣ ಮೀನು – ಚೆಟ್ಲಿ ವ್ಯಾಪಾರ ಕುಮಟಾ


ವರದಿ ಡಾ|| ಪ್ರಕಾಶ್ ಮೇಸ್ತ ಹೊನ್ನಾವರ

Leave a Reply

Your email address will not be published. Required fields are marked *