ಕುಂದಾಪುರ: ಇಲ್ಲಿನ ಕಸಬಾ ಪುರಸಭೆ ವ್ಯಾಪ್ತಿಯ ಕಸಬಾಗುಡ್ಡೆ ನಿಸರ್ಗ ಗಾರ್ಡನ್ ಅಕ್ಕಪಕ್ಕದಲ್ಲಿ ಮಳೆನೀರು ಸರಾಗ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ, ನಿಂತ ಕೊಳಚೆ ನೀರಿನಲ್ಲಿ ನಾನಾ ಕ್ರಿಮಿಕೀಟ ಸಹಿತ ಸೊಳ್ಳೆ ಹಾವಳಿ ಮಿತಿಮೀರಿದ್ದು, ಪರಿಸರವಿಡೀ ದುರ್ನಾತ ಹರಡಿದೆ. ಒಂದು ಕಡೆ ಕೋವಿಡ್ ಭೀತಿ ಸಂದರ್ಭ ಈ ‘ನರಕ’ ಸೃಷ್ಟಿಯಾಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ ಸ್ಥಳೀಯ ನಾಗರಿಕರನ್ನು ಮಾತನಾಡಿಸಿದಾಗ ಮೊದಲು ಮಳೆನೀರು ತೋಡಿನಲ್ಲಿ ಸರಾಗವಾಗಿ ಹರಿದು ಹಿಗುತ್ತಿತ್ತು ಕಳೆದ 2ವರ್ಷಗಳಿಂದ ಚರಂಡಿ ಅಲ್ಲಿ ಗಿಡ ಗಂಟಿಗಳು ಬೆಳೆದು, ಕಸಕಡ್ಡಿ ತುಂಬಿ ನೀರು ನಿಂತು ದುರ್ನಾಥ ಹೊಡೆಯುತ್ತಿದೆ. ನೀರು ಗದ್ದೆ ಬಯಲಿನಲ್ಲಿಯೇ ಸಂಗ್ರಹ ಆಗುತ್ತಿದ್ದು. ಇನ್ನು ಮುಂದಿನ ಮಳೆಗಾಲದಲ್ಲಂತೂ ಇನ್ನೂ ಹೆಚ್ಚಿನ ತೊಂದರೆಗೆ ಒಳಪಡುವುದರಲ್ಲಿ ಸಂಶಯವಿಲ್ಲ.
ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟು ಬೇಗ ಇದಕ್ಕೆ ಸೂಕ್ತ ಪರಿಹಾರ ಒದಗಿಸ ಬೇಕಾಗಿದೆ.