ಕನ್ಯಾನು ಕನ್ಯಾನು ತುಮ್ಹಿ ಕಸ್ಸಿ ಕಸ್ಸಿ ನಾಸ್ತಾಯಿ ಕನ್ಯಾನು…

ಉಭಯ ಕುಶಲೋಪರಿಯಂತಿರುವ ಈ ಹಾಡು ದೀರ್ಘವಾಗುವಂತೆ ಈ ಹೆಂಗಸರು ಹೊಸ ಹೊಸದನ್ನು ಪೋಣಿಸುತ್ತಾ ಹೋಗುತ್ತಾರೆ. ಮೂಲಸೆಲೆಯಲ್ಲಿ ಜನರ ಉಡುಗೆ ತೊಡುಗೆ, ಅವರ ಆಚಾರ ವಿಚಾರ ಹಾಡಿನೊಂದಿಗೆ ಕಂಠದಿಂದ ಕಂಠಕ್ಕೆ ಹರಿಯುವಾಗ ಬದಲಾಯಿಸುತ್ತ ಬಂದಿರುವುದನ್ನು ಇವರ ಹಾಡುಗಳು ಮತ್ತು ಕೆಲವು ಮನೋರಂಜಕ ವೇಷ ಧರಿಸುವಿಕೆಗಳ ಇವರ ಪರಿಚರ್ಯೆಗಳನ್ನು ಗಮನಿಸುವಂತದ್ದಾಗಿದೆ. ಯಾವುದೆ ಸಂಪರ್ಕ ಕಡಿಮೆ ಇದ್ದ ದಿನಗಳಲ್ಲೂ ಗೌಳಿ, ಸಿದ್ಧಿ, ಆವ್ರು ಗರ್ಜಿ ಮತ್ತು ಸೋಂದ್ರ ವೇಷ ಧರಿಸಿಕೊಳ್ಳುವುದನ್ನು ಗಮನಿಸುವಾಗ ಮೂಲಸೆಲೆಯಲ್ಲಿ ಈ ಎಲ್ಲ ಜನಜಾತಿಗಳು ಆಸುಪಾಸಿನವರಾಗಿದ್ದರು ಅಥವಾ ಪರಿಚಿತರಾಗಿದ್ದರು ಎನ್ನುವುದನ್ನು ಮನಗಾಣಬಹುದು. ಇನ್ನೊಂದು ಹಾಡು ಹೀಗಿದೆ:

ಲಾಂಬು ಲಾಂಬು ದೌಂತರು ಗಾಲೂನು ಆಯ್ಲೆಲೆ
ಕಂಚೆ ಗಾಂವ್ಚೆ ನಾರಿಯಾಗೆ ತುಮ್ಹಿ
ಕಂಚೆ ಗಾಂವ್ಚೆ ನಾರಿಯಾಗೆ ತುಮ್ಹಿ| – ಒಂದು ತಂಡ
ಆಮ್ಹಿ ಗೋಂಯೆ ಗಾಂವ್ಚೆ ನಾರಿಯಾಗೆ ಆಮ್ಹಿ
ಗೋಂಯೆ ಗಾಂವ್ಚೆ ನಾರಿಯಾಗೆ ಆಮ್ಹಿ| – ಇನ್ನೊಂದು ತಂಡ
ತುಮ್ಹಿ ಕೀಜೆರು ಬೈಸೂನು ಆಯ್ಲೆಗೆ ತುಮ್ಹಿ
ಕೀಜೆರು ಬೈಸೂನು ಆಯ್ಲೆಗೆ ತುಮ್ಹಿ -ತಂಡ ಒಂದು
ಆಮ್ಹಿ ಘೋಡೇರು ಬೈಸೂನು ಆಯ್ಲೆಗೆ ಅಮ್ಹಿ
ಘೋಡೇರು ಬೈಸೂನು ಆಯ್ಲೆಗೆ ಅಮ್ಹಿ| -ತಂಡ ಇನ್ನೊಂದು
(ಉದ್ದುದ್ದ ದೋತರ ತೊಟ್ಟು ಕೊಂಡು ಬಂದ ನಾರಿಯರೆ
ನೀವು ಯಾವ ಊರಿನ ನಾರಿಯರು ನೀವು
ಯಾವ ಊರಿನ ನಾರಿಯರು – ಒಂದು ತಂಡ
ನಾವು ಗೋವಾ ಊರಿನ ನಾರಿಯರು ನಾವು
ಗೋವಾ ಊರಿನ ನಾರಿಯರು – ಇನ್ನೊಂದು ತಂಡ
ನೀವು ಯಾವುದರ ಮೇಲೆ ಕೂತು ಬಂದಿರಿ ನೀವು
ಯಾವುದರ ಮೇಲೆ ಕೂತು ಬಂದಿರಿ -ತಂಡ ಒಂದು
ನಾವು ಕುದುರೆಯ ಮೇಲೆ ಕೂತು ಬಂದಿವಿ
ಕುದುರೆಯ ಮೇಲೆ ಕೂತು ಬಂದಿವಿ -ತಂಡ ಇನ್ನೊಂದು

ಸಾಮಾಜಿಕ ಜೀವನದ ಸಂಘಟನೆಯಲ್ಲಿ ಪಟೇಲ, ಸಾರಂಗ, ಆರ್ಕಾಟಿ, ನಾಯ್ಕ ಮೊದಲಾದವರು ಗಣ್ಯರಾಗಿದ್ದು, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಗುಹೋಗುಗಳಲ್ಲಿ ಅವರ ಪಾರುಪತ್ಯವಿರುತ್ತದೆ. ಹೀಗೆ ಗಂಡಸರ ಯಾಜಮಾನ್ಯವಿದ್ದಾಗಲೂ ಈ ಸಮಾಜದಲ್ಲಿ ಹೆಂಗಸರು ಸಾಕಷ್ಟು ಸ್ವಾತಂತ್ರ್ಯ ಹೊಂದಿರುತ್ತಾಳೆ ಎನ್ನುವುದಕ್ಕೆ ಹೋಳಿಯಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಕೆಯು ನಿರ್ಭಿಡೆಯಿಂದ ಪಾಲ್ಗೊಳ್ಳುತ್ತಿರುವುದೇ ನಿದರ್ಶನವಾಗಿರುತ್ತದೆ. ಹಾಡುವುದು,ಕುಣಿಯುವುದು ಗಂಡಸರಿಗೆ ಮಾತ್ರ ಮೀಸಲಿಟ್ಟಿರುವ ಸ್ವಾಮ್ಯವಲ್ಲ, ಹೆಂಗಸರೂ ಕೂಡ ಅವುಗಳಲ್ಲಿ ಪರಿಣತಿ ಹೊಂದಿರುತ್ತಾಳೆ ಎನ್ನುವುದನ್ನು ಅವರು ಸಾಕ್ಷೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ. ಹೆಂಗಸರದೇ ಇನ್ನೊಂದು ಹಾಡನ್ನು ಗಮನಿಸಿ:

ಹೇ ಮ್ಹಾಜೆ ಸೋಡಿ| ಕಾಯ್ ಪಾಯಿಜೆ ಸೋಡಿ|
ಅಂಗ್ಣಾತುಲೆ ಫುಟಿ ಫುಟಿ ಕೊಂಬೆ| ಅಂಗ್ಣಾತುಲೆ ತರ್ನೆ ಕೊಂಬೆ|
ಆಂವು ಆತ್ತ ಖಾತೋಲಿ| – ಎದುರು ಬದುರಾದವರಲ್ಲಿ ಒಬ್ಬರು.
ಖಾಯ್ನ ಕಿತೆ ಪಾತ್ರಿ| – ಎದುರು ಬದುರಾದವರಲ್ಲಿ ಇನ್ನೊಬ್ಬರು
ಹೇ ಮ್ಹಾಜೆ ಸೋಡಿ| ಕಾಯ್ ಪಾಯಿಜೆ ಸೋಡಿ|
( ಹೇ ನನ್ನ ಸೋಡಿ| ಏನು ಬೇಕು ಸೋಡಿ|
ಅಂಗಳದ ಕೊಬ್ಬಿದ ಕೋಳಿ| ಅಂಗಳದ ಎಳೆಯ ಕೋಳಿ|
ನಾನೀಗ ತಿನ್ನುವೆ| – ಎದುರು ಬದುರಾದವರಲ್ಲಿ ಒಬ್ಬರು.
ತಿನ್ನೋಲ್ಲ ಯಾಕೆ ಪಾತ್ರಿ| – ಎದುರು ಬದುರಾದವರಲ್ಲಿ ಇನ್ನೊಬ್ಬರು
ಹೇ ನನ್ನ ಸೋಡಿ| ಏನು ಬೇಕು ಸೋಡಿ |

ಮೇಲಿನ ಹಾಡನ್ನು ಗಮನಿಸುವಾಗ ಈ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವೆ ಕಣ್ಮುಂದೆ ಬರುತ್ತದೆ. ಸೋಡಿ ಇದೊಂದು ಪಂದ್ಯದ ಹೆಸರು. ಪಾತ್ರಿ, ಕೋಳಿ, ಅಂಗಳ, ಸೋಡಿ ಇವೆಲ್ಲವೂ ಅವರ ಸಾಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸು ಹೊಕ್ಕಾಗಿರುವಂತದು. ಇಲ್ಲಿ ಹಾಡುವಂತಹ ಹಲವು ಹಾಡುಗಳಲ್ಲಿ ಮರಾಠಿ ಮತ್ತು ಗುಜರಾತಿ ಭಾಷೆಗಳ ಹೊಳಹು ಇರುವುದು ಈ ಜನರು ಮತ್ತು ಇವರ ಜಾನಪದಗಳ ಮೂಲಸೆಲೆ ಮರಾಠಿ ಮತ್ತು ಗುಜರಾತಿ ಪ್ರಾಬಲ್ಯದ ಪ್ರದೇಶಗಳಾಗಿರಬಹುದು ಎನ್ನುವ ಗುಮಾನಿ ಗಟ್ಟಿಯಾಗುತ್ತದೆ.

ಹೆಂಗಸರು ಜೋಡಿಯಾಗಿ ಒಬ್ಬರು ಇನ್ನೊಬ್ಬರ ಹಸ್ತಗಳನ್ನು ಹಿಡಿದು ಪರಸ್ಪರ ಹಿಂದಕ್ಕೆ ಜಗ್ಗುತ್ತಾ ವರ್ತುಲಾಕಾರವಾಗಿ ಕುಣಿಯುತ್ತ ಹೇ ಮ್ಹಾಜೆ ಸೋಡಿ ಹಾಡನ್ನು ಹಾಡುವಂತದು ಆಗಿರುತ್ತದೆ. ಈ ರೀತಿ ಹಾಡುತ್ತಾ ಕುಣಿಯುತ್ತಾ ಮಧ್ಯರಾತ್ರಿಯ ವರೆಗೂ ಸಾಗುತ್ತದೆ. ವರ್ಷಾಕ್ಕೊಂದಾವರ್ತಿ ಸಿಕ್ಕುವ ಈ ಅವಕಾಶವನ್ನು ಇವರು ನಿದ್ದೆ ಬಿಟ್ಟಾದರೂ ಉಪಯೋಗಿಸಿಕೊಳ್ಳುತ್ತಾರೆ.
ಕನ್ಯಾನು ಕನ್ಯಾನು ತುಮ್ಹಿ ಕಸ್ಸಿ ಕಸ್ಸಿ ನಾಸ್ತಾಯಿ ಕನ್ಯಾನು
ಕನ್ಯಾನು ಕನ್ಯಾನು ತುಮ್ಹಿ ಕಸ್ಸಿ ಕಸ್ಸಿ ನಾಸ್ತಾಯಿ ಕನ್ಯಾನು
ಆಡು ಸರ್ಕೆ ಕನ್ಯಾನು ತುಮ್ಹಿ ಗೋಲು ಗುಂವಾತು ಕನ್ಯಾನು
ಕನ್ಯಾನು ಕನ್ಯಾನು ತುಮ್ಹಿ ಕಸ್ಸಿ ಕಸ್ಸಿ ನಾಸ್ತಾಯಿ ಕನ್ಯಾನು
(ಕನ್ಯೆಯರೆ ಕನ್ಯೆಯರೆ ನೀವು ಹೇಗೇಗೋ ಕುಣಿಯುವಿರಿ ಕನ್ಯೆಯರೆ
ಕನ್ಯೆಯರೆ ಕನ್ಯೆಯರೆ ನೀವು ಹೇಗೇಗೋ ಕುಣಿಯುವಿರಿ ಕನ್ಯೆಯರೆ
ಅಡ್ಡ ಸರೂತ ಕನ್ಯೆಯರೆ ನೀವು ಗೋಳವಾಗಿ ತಿರುಗುತ ಕನ್ಯೆಯರೆ
ಕನ್ಯೆಯರೆ ಕನ್ಯೆಯರೆ ನೀವು ಹೇಗೇಗೋ ಕುಣಿಯುವಿರಿ ಕನ್ಯೆಯರೆ)
ವರ್ಷಾಕು ಏಕು ಹೋಳೀರೆ ಬಾಬಾ ವರ್ಷಾಕು ಏಕು ಹೋಳೀರೆ|
ಯೋ ಯೋ ಸಾಂಗಾತು ಯೋ ಕಲ್ ಮಾಂಡೀಲಾ ರೆ
ಯೋ ಯೋ ಸಾಂಗಾತು ಯೋ ಕಲ್ ಮಾಂಡೀಲಾ|

ವರ್ಷಕ್ಕೊಮ್ಮೆ ನಡೆಯುವ ಈ ಹೋಳಿ ಹಬ್ಬದಲ್ಲಿ ಸಮಾಜದ ಎಲ್ಲರೂ ಕೂಡ ಭಾಗವಹಿಸುತ್ತಾರೆ. ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಮೇಲಿನ ಎರಡು ಮತ್ತು ಮೂರರ ಸಾಲನ್ನು ನಾನು ಅರ್ಥೈಸಲಿಕ್ಕೆ ಹೋಗಿಲ್ಲ. ಸಾಂಗಾತು ಇದು ಸಂಗಾತಿಯ ಅರ್ಥವನ್ನು ಕೊಡುತ್ತದೋ ಅನ್ನುವ ಸಂಶಯ ಇದೆ. ಯಾಕೆಂದರೆ ಹೋಳಿಯನ್ನು ವಸಂತೋತ್ಸವವಾಗಿಯೂ ಆಚರಿಸುವ ಪರಿಪಾಠ ಉತ್ತರಭಾರತದ ಹಲವಾರು ಕಡೆಗಳಲ್ಲಿ ಇದೆ. ಏನೇ ಆದರೂ ಕೊಂಕಣಿ ಖಾರ್ವಿ ಸಮುದಾಯದ ಸಾಂಸ್ಕೃತಿಕ ಮಜಲುಗಳನ್ನು ಆಳವಾಗಿ ಅಭ್ಯಸಿಸುವ ಅಗತ್ಯ ಇದೆ ಅನ್ನುವುದು ಸರ್ವವಿದಿತ.

ಗಂಡಸರ ಚಟುವಟಿಕೆಗಳು ಹೋಳಿ ಸುಡುವುದಕ್ಕೆ ಒಂದು ವಾರವಿರುವಾಗ ಪ್ರಾರಂಭವಾಗುತ್ತದೆ. ಇವರದು ಹೋಳಿ ಉತ್ಸವಕ್ಕೆ ಸಿದ್ಧತೆಗೊಳಿಸಬೇಕಾದ ಚಟುವಟಿಕೆಗಳು. ಮೂರು ದಿನಗಳ ವರೆಗೆ “ಗಢೆ” ಬೀಳುವ ಕಾರ್ಯಕ್ರಮ ನಡೆಯುತ್ತದೆ. ಮೊದಲನೆಯ ದಿನ ಶೈವ ದೇವಾಲಯದ ಎದುರುಗಡೆ, ಎರಡನೆಯ ದಿನ ವೈಷ್ಣವ ದೇವಾಲಯದ ಎದುರುಗಡೆ ಮತ್ತು ಮೂರನೆಯ ದಿನ ಹೋಳಿ ಸುಡಲು ಗೊತ್ತು ಪಡಿಸಿದ ಹೊಲದಲ್ಲಿ ಗಢೆ ಬೀಳುವ ಕಾರ್ಯಕ್ರಮ ಮೂರು ದಿನಗಳ ವರೆಗೆ ಸತತವಾಗಿ ಹಮ್ಮಿಕೊಳ್ಳಲಾಗುವುದು. ಈ ನಿರಂತರದ ಒಂದು ದಿನ ಹೋಳಿ ಸುಡುವ ಹೊಲದಲ್ಲಿ ಮಣ್ಣೆನ ಶಟ್ಟೆ ಹುಡಿ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ಈ ಚಟುವಟಿಕೆಯನ್ನು ಗಮನದಲ್ಲಿರಿಸಬೇಕು. ಈಗ ನೆನಪಿನಿಂದ ಮರೆಯಾದರೂ ಪ್ರಾಚೀನ ಕಾಲದಲ್ಲಿ ಕರ್ಷಕ ಕಾಯಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇದ್ದಿತ್ತು. ಅದಕ್ಕೆ ಸಾಂಕೇತಿಕವಾಗಿ ಗದ್ದೆಯ ಮಣ್ಣಿನ ಶೆಟ್ಟೆಯನ್ನು ಹುಡಿ ಮಾಡುವಂತಹ ಆಚರಣೆ ಚಾಲ್ತಿಯಲ್ಲಿ ಇದ್ದಿರಬೇಕು. ಗುಮ್ಮಟೆ, ಜಾಗಟೆಗಳ ಲಯದೊಂದಿಗೆ ಹಾಡುತ್ತಾ ಇವರು ಗೊತ್ತುಪಡಿಸಿದ ಜಾಗಕ್ಕೆ ಸಾಗುತ್ತಾರೆ. ಸಾರಂಗ, ಪಟೇಲ, ನಾಯ್ಕ ಮೊದಲಾದ ಸಮಾಜದ ಮುಖ್ಯಸ್ಥರು ಇಡೀ ಹೋಳಿ ಹಬ್ಬದ ಉತ್ಸವವು ಸಾಂಗವಾಗಿ ನಡೆಸುವ ಜವಾಬ್ದಾರಿ ವಹಿಸುತ್ತಾರೆ. ಗಢೆ ಬೀಳುವ ಕಾರ್ಯಕ್ರಮಕ್ಕೆ ಜನರು ಸಾಲಾಗಿ ಹೋಗುವಾಗಿನ ಹಾಡು ಹೀಗಿದೆ:

ಹ್ಯಾಂ ವಾಟೇನು ಕೋಣು ಕೋಣು ಗೆssಲಾರೆ ಬಾಬಾ,
ಹ್ಯಾಂ ವಾಟೇನು ಕೋಣು ಕೋಣು ಗೆssಲಾರೆ|
ಹ್ಯಾಂ ವಾಟೇನು ಕೃಷ್ಣಸ್ವಾಮಿ ಗೆssಲಾರೆ ಬಾಬಾ
ಹ್ಯಾ ವಾಟೇನು ಕೃಷ್ಣಸ್ವಾಮಿ ಗೆssಲಾರೆ|
ಯದೆ ಯದೆ ಕೂಳುಕೂಟು ಸಾಮ್ರಾಜ್ ಹೋ
ತಂತು ಅಸ್ಸಾ ಮಮ್ಮಾಯಿ ದೇವು ಬಂಗ್ರಾಚೆ||
ಹ್ಯಾಂ ವಾಟೇನು ಕೋಣು ಕೋಣು ಗೆssಲಾರೆ. , , , .
( ಈ ಹಾದಿಯಲ್ಲಿ ಯಾರ್ಯಾರು ಹೋಗಿದ್ದಾರೋ ಅಣ್ಣಾ,
ಈ ಹಾದಿಯಲ್ಲಿ ಯಾರ್ಯಾರು ಹೋಗಿದ್ದಾರೋ |
ಈ ಹಾದಿಯಲ್ಲಿ ಕೃಷ್ಣ ಸ್ವಾಮಿ ಹೋಗಿದ್ದಾರೋ ಅಣ್ಣಾ
ಈ ಹಾದಿಯಲ್ಲಿ ಕೃಷ್ಣ ಸ್ವಾಮಿ ಹೋಗಿದ್ದಾರೋ|
ಸಣ್ಣ ಸಣ್ಣ ಕುಲಕೂಟ ಸಾಮ್ರಾಜ್ಯ ಹೋ,
ಅದರಲ್ಲಿದೆ ಮಹಾಮಾಯಿ ಬಂಗಾರದ್ದು||
ಈ ಹಾದಿಯಲ್ಲಿ ಕೃಷ್ಣ ಸ್ವಾಮಿ ಹೋಗಿದ್ದಾರೋ ಅಣ್ಣಾ. . . ,.)

ಹೀಗೆ ಹಾಡುತ್ತಾ ಬಂದು ಸಾಗಿದ ಜನರು ದೇವಸ್ಥಾನದ ಎದುರಿನ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಕಲೆತು, ವರ್ತುಲಾಕಾರವಾಗಿ ನಿಲ್ಲುತ್ತಾರೆ. ಹಿರಿಯರೊಬ್ಬರು ಭೈರವ ದೇವರ ಕುರಿತ ಹಾಡು ಹೇಳುತ್ತಾರೆ. ಸಮೂಹ ಹಾಡಿನ ಸಾಲುಗಳನ್ನು ಪುನರುಚ್ಛರಿಸುತ್ತಾರೆ.

ಹಿರಿಯ: ಆಜು ತರು ಭೈರಮು ದೇವಾ ಕೋಣು ನಮನು ಗೆಲೇಗಾ
ಕೋಣು ನಮನು ಗೆಲೇ ತರು ಗುರು ನಮನು ಗೆಲೇಗಾ|
ಸಮೂಹ: ಆಜು ತರು ಭೈರಮು ದೇವಾ ಕೋಣು ನಮನು ಗೆಲೇಗಾ
ಕೋಣು ನಮನು ಗೆಲೇ ತರು ಗುರು ನಮನು ಗೆಲೇಗಾ|
ಹಿರಿಯ: ಅತ್ತರೇಯ ಬೊಮ್ಮಾಕು ನಮ್ಮನುಗ ಗೆಲೇಮು
ಕುಂದೇಸರು ದೇವಾಕು ನಮ್ಮನುಗ ಗೆಲೇಮು|
ಸಮೂಹ: ಆಜು ತರು ಭೈರಮು ದೇವಾ ಕೋಣು ನಮನು ಗೆಲೇಗಾ
ಕೋಣು ನಮನು ಗೆಲೇ ತರು ಗುರು ನಮನು ಗೆಲೇಗಾ|

( ಹಿರಿಯ : ಈವತ್ತಿನ ದಿನ ಭೈರವ ದೇವರು ಯಾರನ್ನು ನಮಿಸಿ ಹೋದರು
ಯಾರ ನಮಿಸಿ ಹೋದರೂ ಗುರುವನ್ನೇ ನಮಿಸಿ ಹೋದರು
ಸಮೂಹ: ಈವತ್ತಿನ ದಿನ ಭೈರವ ದೇವರು ಯಾರನ್ನು ನಮಿಸಿ ಹೋದರು
ಯಾರ ನಮಿಸಿ ಹೋದರೂ ಗುರುವನ್ನೇ ನಮಿಸಿ ಹೋದರು
ಹಿರಿಯ : ಅತ್ತರೇಯ ಬೊಮ್ಮನಿಗೆ ನಮಿಸಿಯೇ ಹೋದನು
ಕುಂದೇಸರು ದೇವನಿಗೂ ನಮಿಸಿಯೇ ಹೋದನು
ಸಮೂಹ: ಆಜು ತರು ಭೈರಮು ದೇವಾ ಕೋಣು ನಮನು ಗೆಲೇಗಾ
ಕೋಣು ನಮನು ಗೆಲೇ ತರು ಗುರು ನಮನು ಗೆಲೇಗಾ|

ಲೇಖಕರು: ಶ್ರೀಶಂಖಾ
shrishankha@gmail.com

ಲೇಖನ ಮುಂದುವರೆಯುವುದು…..

Leave a Reply

Your email address will not be published. Required fields are marked *