ವಿಶೇಷವಾಗಿ ಜರುಗುವ ಹೋಳಿ ಹಬ್ಬವಂತೂ ಇತರ ಜನರಿಗಿಂತ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತದೆ. ಈ ಹಬ್ಬದ ಆರಂಭದಿಂದ ಕೊನೇತನಕ ಪಾತಾಳ ಲೋಕದಿಂದ ಗಡ್ಡೆ ಎನ್ನುವ ದೈವವನ್ನು ಆಹ್ವಾನಿಸಿ ಆಶೀರ್ವಾದ ಪಡೆಯುವ ವಿಶಿಷ್ಟ ಆಚರಣೆ ಇದರಲ್ಲಿದೆ. ಈ ಸಂದರ್ಭದಲ್ಲಿ ಆರಂಭದಿಂದ ಕೊನೇತನಕ ಆಗಾಗ್ಗೆ ಗುಂಪು ಗುಂಪಾಗಿ ಪುರುಷರು ಜಾಗಂಟೆ ಧ್ವನಿಯಲ್ಲಿ ಹಾಡುವ ಹಾಡು ಸಾಹಿತ್ಯ ಸರ್ವ ದೇವರಿಗೆ ನಮಿಸುವ ಹಾಡು ಹೀಗಿದೆ.
ಅತಳ ನಮನ ವಿತಳ ನಮನ ಸುತಳ ನಮನ ಕೆಲೇಗಾ
ತಳ ತಳ ರಸಾತಳ ನಮನುಗಾ ಕೆಲೇಗಾ
ಸ್ವರ್ಗ ಮೃತ್ಯು ಪಾತಾಳ ನಮನುಗಾ ಕೆಲೇಗಾ
ಇಂದ್ರ ವರುಣ ಅಗ್ನಿ ಮರುತ ಸುರಗಣ ನಮನುಗಾ
ಹರಿಹರ ಬ್ರಹ್ಮಾದಿ ದೇವ ದೇವ ನಮನುಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಚಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಚಗಾ
ಜೀವಾತ್ಮ ಪರಮಾತ್ಮ ಸೂರ್ಯದೇವಾಕ್ ನಮನುಗಾ
ಜೀವರಾಶಿ ಸೃಷ್ಟಿಕರ್ತೆ ಭೂದೇವಿ ನಮನುಗಾ
ಶಾಂತಿದೂತ ನಿಶಾರಾಜ ಚಂದ್ರಮಕು ನಮನುಗಾ
ಸಾಧ್ವಿ ಸುತಾರಗಣ ಬ್ರಹ್ಮಾಂಡ ನಮನುಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಾಚಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಾಚಗಾ
ಸಕಲ ದೇವು ನಮನುತರು ಗುರು ನಮನ ಗೆಲೇಗಾ
ಆದಿ ಗುಣ ಕಶ್ಯಪು ರಾಜ ಗುರು ವಸಿಷ್ಟಾಕು
ಹರಷರ ವ್ಯಾಸಮುನಿ ವಾಲ್ಮೀಕಿ ನಮನುಗ
ದ್ವಾಪರಾಚೆ ಕೃಷ್ಣ ದೇವು ತ್ರೇತಾಯುಗ ರಾಮಚಂದ್ರ
ಆದಿಕರಾ ವಂದನ ಕಾಳ ಬೈರವಾಕ್
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಾಚಗಾ
ಆದಿಶಕ್ತಿ ಮಹಾಕಾಳಿ ರವಳನಾಥ ಮಹಾಮಾಯೆ
ಶೃಂಗೇರಿ ಶಾರದಾಂಬೆ ನಮನುಗಾ ಕರಾಗಾ
ಸರ್ವ ವಿಘ್ನ ನಿವಾರಕ ಸಕಲ ಸಿದ್ಧಿ ವಿನಾಯಕ
ಸ್ಮರಣ ಕರತಾ ನಾಚುತಾ ಶರಣು ಶರಣು ಪಾಯೇಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಾಚಗಾ
ಗುಂಮ್ಟಿ ಮಾಂಡ್ ವಾಜತಾ ದೇವಳ ಮುಕಾರ್ ನಾಚಗಾ