ಸಮಾಜಮುಖಿ ಸೇವಾಕಾರ್ಯ ಸೂರ್ಯಕಾಂತ್ ಸಾರಂಗರಿಗೆ ರೋಟರಿ ಕ್ಲಬ್ ಅತ್ಯುತ್ತಮ ಪ್ರಶಸ್ತಿ

ಸಮಾಜಮುಖಿ ಕಾರ್ಯದ ಜನಮನ್ನಣೆ ಗಳಿಸಿರುವ ಹೊನ್ನಾವರ ರೋಟರಿ ಕ್ಲಬ್ 2020 2021 ನೇ ಸಾಲಿನ ಸೇವಾಕಾರ್ಯ ದಿಂದ 6 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು,ಅಂದು ಅಧ್ಯಕ್ಷರಾಗಿದ್ದ ಶ್ರೀ ಸೂರ್ಯಕಾಂತ ಸಾರಂಗ್ ರವರಿಗೆ ಅತ್ಯುತ್ತಮ ಅಧ್ಯಕ್ಷ ಮತ್ತು ಕ್ಲಬಿಗೆ ಅತ್ಯುತ್ತಮ ಕ್ಲಬ್ ಎಂಬ ಫಲಕಗಳನ್ನು ನೀಡಿ ಗೌರವಿಸಲಾಗಿದೆ.ಕೊಲ್ಲಾಪುರದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.ರೋಟರಿ ಕ್ಲಬ್ ಸೇವೆಯಲ್ಲಿ ಅತ್ಯುತ್ತಮ ಹಾಗೂ ವೃತ್ತಿಸೇವೆಯಲ್ಲಿ ಅತ್ಯುತ್ತಮ,ಸಮುದಾಯ ಸೇವೆಯಲ್ಲಿ ಅತ್ಯುತ್ತಮ ಮತ್ತು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಕ್ಲಬ್ ಎಂಬ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಾಧನೆಗೆ ಸರ್ವರ ಸಹಕಾರವೇ ಕಾರಣವೆಂದು ಸೂರ್ಯಕಾಂತ್ ಸಾರಂಗರು ಹೇಳಿದ್ದಾರೆ.ಈ ಅಭೂತಪೂರ್ವ ಸಾಧನೆಗೈದ ಶ್ರೀ ಸೂರ್ಯಕಾಂತ್ ಸಾರಂಗರಿಗೆ ಖಾರ್ವಿ ಆನ್ಲೈನ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

www.kharvionline.com

Leave a Reply

Your email address will not be published. Required fields are marked *