ಸಮಸ್ತ ಖಾರ್ವಿ ಸಮಾಜದ ಪ್ರಪ್ರಥಮ ಹಾಗೂ ಏಕೈಕ ಜಾಲತಾಣ

ಸಮಸ್ತ ಕೊಂಕಣಿ ಖಾರ್ವಿ ಸಮಾಜಕ್ಕೆಂದೇ ಇರುವ ಪ್ರಪ್ರಥಮ ಹಾಗೂ ಏಕೈಕ ಜಾಲತಾಣ. ಪ್ರಪಂಚದಾದ್ಯಂತ ಹಂಚಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ಭಾಂಧವರನೆಲ್ಲ ಒಂದೆಡೆ ಸೇರಿಸಲು, ಆ ಮೂಲಕ ಸಮಾಜದ ಸಂವಹನಕ್ಕೆ ಮತ್ತು ಸಂಘಟನೆಗೆ ವೇದಿಕೆ ಕಲ್ಪಿಸಲು ಈ ಒಂದು ತಾಣವನ್ನು ರೂಪಿಸಲಾಗಿದೆ. ನೀವು ಈ ತಾಣವನ್ನು ಬಳಸಿದಷ್ಟೂ ಇದು ಬೆಳೆಯುತ್ತದೆ. ಈ ತಾಣವನ್ನು ಹೆಚ್ಚು ವೀಕ್ಷಿಸಿ ಖಾರ್ವಿ ಸಮಾಜ ಬಾಂಧವರೊಂದಿಗೆ ಹಂಚಿಕೊಳ್ಳಿ ಹಾಗೂ ಖಾರ್ವಿ ಸಮಾಜದ ಕುರಿತು ಸುದ್ದಿ ಸಮಾಚಾರ ವ್ಯಕ್ತಿ-ವಿಶೇಷ, ಸಾಧನೆ- ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಖಾರ್ವಿ ಸಮಾಜವು ಬೇರೆ ಬೇರೆ ಹೆಸರುಗಳಲ್ಲಿ ಕರೆಸಿಕೊಳ್ಳುತ್ತಿದೆ. ಖಾರ್ವಿ ಎಂಬುದು ಮೂಲತಃ ಕುಲಕಸುಬಿನಿಂದ ಬಂದ ಹೆಸರಾದರೂ ಅದೇ ಒಂದು ಸಮೂದಾಯವಾಗಿಯೂ ಗುರುತಿಸಿಕೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಆಯಾ ರಾಜ್ಯಗಳಲ್ಲಿ ಅನುಗುಣವಾಗಿ ಖಾರ್ವಿ ಸಮುದಾಯ ಬೋಸ್ಲೆ, ಪಾಲೇಕರ್ ಹಾಗೂ ಕರ್ನಾಟಕದಲ್ಲಿ ಸಮಾಜವು ಆರ್ಕಾಟಿ, ನಾಯ್ಕ್, ಸಾರಂಗ್, ಕೋಟಾನ್, ಮೇಸ್ತ, ಬನವಾಲಿಕರ್, ಪಟೇಲ್, ತಾಂಡೇಲ್, ಕಾನೋಜಿ, ಕುಡ್ತಲಕರ್, ಸೀಪಾಯಿ, ಕಲೈಕಾರ್, ಪೂಲ್ ಕಾರ್, ಪಂಡಿತ್, ಬೋರ್ಕರ್ , ಹೆಗ್ಡೆ ಹಾಗೂ ಹಲವು ಉಪ ನಾಮಗಳಿಂದಲೂ ಗುರುತ್ತಿಸಿಕೊಳ್ಳುತ್ತಿದ್ದಾರೆ. ಹೀಗೆ ನಾನಾ ಹೆಸರಿನಲ್ಲಿ ಗುರುತ್ತಿಸಿಕೊಳ್ಳುತ್ತಿರುವ ಎಲ್ಲಾ ಖಾರ್ವಿಯವರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವೇ kharvionline.com

ಖಾರ್ವಿ ಸಮುದಾಯಕ್ಕೆ ಸಂಬಂಧಿಸಿದ ಸುದ್ಧಿ, ಖಾರ್ವಿ ಸಮುದಾಯದ ಸಾಧಕರು, ಉದ್ಯಮಿಗಳು ಪ್ರತಿಭಾವಂತರನ್ನು ಇಡೀ ಸಮುದಾಯಕ್ಕೆ ಪರಿಚಯಿಸಿ ಸಮುದಾಯದ ಇತರಲ್ಲಿ ಹೆಮ್ಮೆ ಪಡುವಂತೆ ಮಾಡುವ ಜೊತೆಗೆ ಸಮುದಾಯದ ಹಿರಿಯವರಿಂದ ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನ ಲಭಿಸುವಂತಹ ಕಾರ್ಯವನ್ನು kharvionline.com ಮಾಡಲಿದೆ.

ಕೊಂಕಣಿ ಖಾರ್ವಿ ಸಮಾಜದ ಮೂಲನೆಲೆಯ ಬಗ್ಗೆ ಮತ್ತು ಇನ್ನಿತರ ವಿಷಯಗಳ ಕುರಿತಂತೆ ತಮ್ಮಲ್ಲಿ ಏನಾದರೂ ಐತಿಹ್ಯಗಳು, ದಾಖಲಾತಿಗಳು ಮತ್ತು ಇತರ ವಿವರಗಳೇನಾದರೂ ಇದ್ದಲ್ಲಿ ದಯವಿಟ್ಟು ಖಾರ್ವಿ ಆನ್ಲೈನ್ ನ್ನು ಸಂಪರ್ಕಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಸಮಾಜದ ಮೂಲನೆಲಗಟ್ಟು ಮತ್ತು ಸಂಸ್ಕೃತಿಯ ಬಗ್ಗೆ ಜಗತ್ತಿಗೆ ಪರಿಚಯಿಸಲು ತಮ್ಮೆಲ್ಲರ ಸಹಕಾರದ ಅಗತ್ಯವಿದೆ. ದಯವಿಟ್ಟು ತಮ್ಮಲ್ಲಿ ಮಾಹಿತಿ ಅಥವಾ ಇನ್ನಿತರ ವಿಷಯಗಳಿದ್ದರೆ ಸಂಪರ್ಕಿಸಬೇಕಾಗಿ ವಿಜ್ಞಾಪನೆ.

Editor Sudhakar Kharvi &
Team kharvionline.com
Email : newskharvionline@gmail.com
whatsapp: +91 9071278342 | 9916550448

Leave a Reply

Your email address will not be published. Required fields are marked *