ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಧಕರ ಜೊತೆ ಸವಿಸ್ತಾರ ಚರ್ಚಾಕೂಟ

ಕೊಂಕಣಿ ಖಾರ್ವಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಜೊತೆಗೆ ಸವಿಸ್ತಾರವಾಗಿ ಚರ್ಚಿಸಲು ಖಾರ್ವಿ ಆನ್ಲೈನ್ ವತಿಯಿಂದ Escube koffee with kharvionline , Vision2030 ಕಾರ್ಯಕ್ರಮವನ್ನು ತಾರೀಕು 24 April ಭಾನುವಾರ ಬೆಳಿಗ್ಗೆ 10:30 ರಿಂದ ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಸಮಾಜದ ಸಾಧಕರ ಜೊತೆಗೆ ಮಾತುಕತೆ ನಡೆಸಿ ಅವರ ಅನುಭವಗಳನ್ನು ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡು ಮುನ್ನಡೆಯಲು ಇದೊಂದು ಚಿಂತನಾ ಮಂಥನ ವೇದಿಕೆಯೊಂದನ್ನು ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಯುವ ಮನಸ್ಸುಗಳಿಗೆ ಕಲ್ಪಿಸಿಕೊಟ್ಟಿದೆ.

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಪ್ರತಿಯೊಂದು ಸಮಾಜವೂ ಉತ್ಕರ್ಷದ ಹಾದಿಯಲ್ಲಿದೆ. ಆದರೆ ನಮ್ಮ ಕೊಂಕಣಿ ಸಮಾಜ ಮಾತ್ರ ಇನ್ನೂ ಆಮೆಗತಿಯಲ್ಲಿದೆ. ಈ ಆಮೆಗತಿಯನ್ನು ಅಶ್ವಶಕ್ತಿಯನ್ನಾಗಿ ಪರಿವರ್ತಿಸಿ ಕೊಂಕಣಿ ಖಾರ್ವಿ ಸಮಾಜ ಸಾಗಲು ಸಮರ್ಥ ಮಾರ್ಗದರ್ಶನ ಮತ್ತು ಸಮರ್ಥ ನಾಯಕತ್ವದ ಅವಶ್ಯಕತೆ ಇದೆ.

ಈ ಚರ್ಚಾಗೋಷ್ಠಿಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷರಾದ ಶ್ರೀ ಮೋಹನ್ ಬನವಾಳಿಕಾರ್ ರವರು ಸಮಾಜ ಕುಂದುಕೊರತೆಗಳ ಹಾಗೂ ಸಭಾಭವನ ಪ್ರಸ್ತುತ ಯಾವ ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೇಗೆ ಅಭಿವೃದ್ಧಿ ಮಾಡಬೇಕೆಂಬ ವಿಷಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವರು ಹಾಗೂ ಶ್ರೀ ರವಿ ಟಿ ನಾಯ್ಕ ರವರು ಮುಂದಿನ 2030 ರಲ್ಲಿ ಕೊಂಕಣಿ ಖಾರ್ವಿ ಸಮಾಜ ಹೇಗೆ ಬೆಳವಣಿಗೆಯಾಗಬೇಕೆಂದು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಸಮಾಜದ ಕಡಲವಿಜ್ಞಾನಿಯಾಗಿರುವ ಡಾ. ಪ್ರಕಾಶ್ ಮೇಸ್ತಾ ರವರು ಸಮಸ್ತ ಮೀನುಗಾರರನ್ನು ಉದ್ದೇಶಿಸಿ ಅತೀ ಮುಖ್ಯವಾದ ವಿಷಯವನ್ನು ಚರ್ಚಿಸಿರುವರು. ಹಾಗೇಯೇ ಹಿರಿಯರಾದ ಶ್ರೀ ಮಾಧವ ಖಾರ್ವಿಯವರು ನಮ್ಮ ಸಮಾಜದ ಸಂಸ್ಕೃತಿ ಆಚಾರ ವಿಚಾರ ಮತ್ತು ಜನಪದ ಹೋಳಿಹಬ್ಬದ ಸಾಂಪ್ರದಾಯಿಕ ಆಚರಣೆ ಮಹತ್ವದ ಬಗ್ಗೆ ಸಮಗ್ರವಾಗಿ ಪ್ರಸ್ತುತ ಪಡಿಸಲಿದ್ದಾರೆ. ಹಾಗೇಯೇ ಕಿಷನ್ ಗಂಗೊಳ್ಳಿ , ಡಾ. ಡಿಂಪಲ್ ಖಾರ್ವಿ, ರೂಪ ರಮೇಶ್ ಖಾರ್ವಿ, ಕೌಶಿಕ್ ಖಾರ್ವಿ ಮತ್ತು ಡಾಕ್ಟರ್ ಚೇತನ್ ಕಾಂತುರವರು ನಮ್ಮೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಕೊಂಕಣಿ ಖಾರ್ವಿ ಸಮಾಜದ ಮೂಲ ತಾಣ ಯಾವುದು ಎಂಬುದರ ಬಗ್ಗೆ ಹಲವಾರು ಜಿಜ್ಞಾಸೆಗಳಿವೆ. ಈ ಬಗ್ಗೆ ಅಧ್ಯಯನ ನಡೆಸಲು ಕೊಂಕಣಿ ಖಾರ್ವಿ ಸಮಾಜ ಉತ್ಸುಕಗೊಂಡಿದ್ದು ಸಮಾಜದ ಮೂಲತಾಣ ಯಾವುದು ಮತ್ತು ಕರಾವಳಿಯಲ್ಲಿ ನೆಲೆನಿಂತ ಬಗೆಗಿನ ವಸ್ತುನಿಷ್ಠ ಅಧ್ಯಯನದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ವಿವಿಧ ಕ್ಷೇತ್ರಗಳಾದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಬಹಳಷ್ಟು ಹಿಂದುಳಿದಿದೆ. ಇದಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸಮರ್ಥ ಮಾರ್ಗದರ್ಶನ ಕೊರತೆಯೇ ಮುಖ್ಯ ಕಾರಣವಾಗಿದೆ.

ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವವನ್ನು escube Founder & MD ಶ್ರೀ ವೆಂಕಟೇಶ ಖಾರ್ವಿಯವರು ಮಾಡಿರುತ್ತಾರೆ ಮತ್ತು ಸಹ ಪ್ರಾಯೋಜಕತ್ವವನ್ನು ಶ್ರೀ ನಿತ್ಯಾನಂದ ಬೋರ್ಕರ್, TILT SHIFT Pictures, Pune, KHARVI CONSULTANCY SERIVES, Mumbai, SHREE KATYAYANI BANESHWARA CLEARING AGENCY, GOA ಮಾಡಿರುತ್ತಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದ ಕ್ರಿಯಾಶೀಲ ಸಾಧಕರು ಸಮ್ಮಖದಲ್ಲಿ ಸಮಾಜದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಸುವ ಉನ್ನತ ಧೇಯ್ಯೋದ್ದೇಶವನ್ನಿಟ್ಟುಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಖಾರ್ವಿ ಆನ್ಲೈನ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಸಮಾಜದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ವಿವಿಧ ಅಂಶಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ನಡೆಸಿ ದೃಡ ಸಂಕಲ್ಪ ತೊಡಬೇಕಾಗಿದೆ. ಸಮಾಜದ ಚಿಂತನಾಶೀಲ ಮನಸ್ಸುಗಳು ಈ ಚರ್ಚಾಕೂಟದಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

https://kharvionline.com/?page_id=4062

ರಿಜಿಸ್ಟ್ರೇಶನ್ ಗಾಗಿ ಈ ಮೇಲಿನ link ಒತ್ತಬೇಕು.

Team kharvionline.com

One thought on “ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಧಕರ ಜೊತೆ ಸವಿಸ್ತಾರ ಚರ್ಚಾಕೂಟ

  1. ನಮ್ಮ ಸಮಾಜ ದ ಧೀಮಂತ ಏಕೈಕ ನಾಯಕ ವಸಂತ ಖಾರ್ವಿ ಸಮಾಜದ ಪ್ರತಿಯೊಬ್ಬನ ಕಷ್ಟವನ್ನು ಅರಿತವರು ನಾನು ಭಾಲ್ಯದಲ್ಲೇ ನಮ್ಮ ಸಮಾಜದ ಇತಿಹಾಸ ವನ್ನು ವಸಂತ್ ಖಾರ್ವಿ ಯವರ ಭಾಸಣ ಕೇಳಿ ಪ್ರೇರಿತ ನಾದೆ ನಮ್ಮ ಸಮಾಜವನ್ನು SC categery ಗೆ ಸೇರ್ಪಡಿಸ ಬೇಕೆಂದು MLA dr chittaranjan ರವರ ಅವಧಿಯಲ್ಲಿ ಬಹಳಷ್ಟು ಪ್ರಯತ್ನ ಪಟ್ಟಿದ್ದರು ಪರಿಣಾಮ ಖಾರ್ವಿ ಸಮಾಜವನ್ನು BC ಯಿಂದ categery 1ಕ್ಕೆ ಸೇರ್ಪಡಿಸಲಾಯಿತು
    ಆರ್ಥಿಕ ವಾಗಿ ನಮ್ಮ ಸಮಾಜ ಮುಂದುವರಿಯಲಿ ಎಂದು ಅಷ್ಟಮಂಗ ಲದ ಮೊರೆ ಹೋದರು ಸಮಾಜದ ಮುಖಂಡರನ್ನು ಶೃಂಗೇರಿ ಮಠಕ್ಕೆ ಕರೆದುಕೊಂಡು ಹೋಗಿ ಪರಮ ಪೂಜ್ಯ ಭಾರತೀ ತೀರ್ಥ ಸ್ವಾಮೀಜಿ ಯವರ ಆಶೀರ್ವಾದ ಪಡೆಯುವುದರ ಜೊತೆಗೆ ನಮ್ಮ ಸಮಾಜಕ್ಕೆ ಇದ್ದ ಶಾಪ ವಿಮೋಚನೆ ಮಾಡಿಸಿದರು ಬೆರಳೆಣಿಕೆಯಷ್ಟು ಪದವೀಧರರಿದ್ದ ನಮ್ಮ ಸಮಾಜದ ಲ್ಲಿ ಗುರುಗಳ ಆಶೀರ್ವಾದ ದಿಂದ ಪ್ರತಿ ಕುಟುಂಬದಲ್ಲಿ ಇಂಜಿನಿಯರ್ ಕಲಿತ ಯುವಕರನ್ನು ನೋಡುವಂತಾಯಿತು
    ಗುರುಗಳ ಮಾರ್ಗದರ್ಶನ ವನ್ನು ಪಡೆದು ಸಮಾಜದ ಇತರ ಮುಖಂಡರನ್ನು ಸೇರಿಸಿಕೊಂಡು ದುರ್ಗಾಪರಮೇಶ್ವರಿ ಹಾಗೂ kutumeswara ನ ಭವ್ಯ ದೇಗುಲ ನಿರ್ಮಾಣ ಮಾಡಿದರು ನಮ್ಮ ಸಮಾಜ ಒಬ್ಬ ಋಷಿ ಯ ಶಾಪ ದಿಂದ ಮುಕ್ತಿ ಪಡೆಯುವ ಹಾಗೆ ಮಾಡಿದರು
    ಹುಲ್ಲಿನ ಚವಾನಿ ಮಣ್ಣಿನ ಗೋಡೆಯ ಲ್ಲಿ ವಾಸ ಮಾಡುತ್ತಿದ್ದ ನಮ್ಮ ಸಮಾಜದ ಭಾಂದವರು ಪರಮೇಶ್ವರ ನ ಹಾಗೂ ದುರ್ಗೇಯ ಆಶೀರ್ವಾದ ದಿಂದ ಆರ್ಥಿಕ ವಾಗಿ ಭಹಳ ಮುಂದುವರಿಯುವಂತಾ ಯಿತು ಜೈನ ಜಟ್ಟಿಗ ಸಮಿತಿಯ ಸಹಾಯ ದಿಂದ ಸಮಾಜದ ಅನೇಕ ಅಭಿವೃದ್ಧಿ ಮಾಡಿದರು
    ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
    ಮಣಿಪಾಲ ಅರೋಗ್ಯ ಕಾರ್ಡು
    ಮರಣಪಂಡು
    kutumeswara ಬ್ಯಾಂಕಿನ ಮುಖಾಂತರ ಸಮಾಜ ಪ್ರತಿಯೊಬ್ಬನಿಗೂ 1000 ರೂಪಾಯಿ ಪ್ರತಿ ವರ್ಷ ಕ್ಕೆ ಸಿಗುವಹಾಗೆ ಯೋಜನೆಯನ್ನು ರೂಪಿಸಿದ ಮಹಾ ಮೇಧಾವಿ
    ಸಮಾಜಕ್ಕೆ ಇವರ ಸೇವೆ ಹೇಳಿದಷ್ಟು ಸಾಲದು ಪೂಜ್ಯರಿಗೆ ಖಾರ್ವಿ ರತ್ನ ಪ್ರಶಸ್ತಿ ನೀಡಬೇಕೆಂದು ಸಮಾಜ ಭಂದವರಲ್ಲಿ ವಿನಂತಿ ಇವರ ಸೇವೆ ನಮಗೆ ಪ್ರೇರಣೆ ಹಾಗೂ ಸ್ಫೂರ್ತಿ ನೀಡುವಂತಾಗಿದೆ ಜೈ ಶ್ರೀರಾಮ್
    ಉಮೇಶ್ ಖಾರ್ವಿ

Leave a Reply

Your email address will not be published. Required fields are marked *