ಪರಿಸರವು ಮಾನವ ಜೀವನಕ್ಕೆ ಉಸಿರಾಟದಷ್ಟೇ ಮುಖ್ಯವಾಗಿದೆ. ಏಕೆಂದರೆ ಯಾವುದೇ ಪರಿಸರವಿಲ್ಲದಿದ್ದರೆ ಜೀವಿ ಹೇಗೆ ಉಸಿರಾಡ ಬವುದು. ಇಂದು ಪ್ರತಿಯೊಬ್ಬ ಮಾನವನೂ ತನ್ನ ಮಟ್ಟದಲ್ಲಿ ಪರಿಸರವನ್ನು ಸಮತೋಲನದಲ್ಲಿಡಲು ಪ್ರಯತ್ನಿಸಬೇಕು. ಏಕೆಂದರೆ ಪರಿಸರ ಮಾಲಿನ್ಯದಂತಹ ಗಂಭೀರ ಸಮಸ್ಯೆಗಳನ್ನು ತೊಡೆದುಹಾಕುವುದು ಯಾವುದೇ ಒಂದು ಗುಂಪಿನ ವಿಷಯವಲ್ಲ.
ಜೂನ್ 5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನ (World Environment Day)ವನ್ನು ಆಚರಿಸಲಾಗುತ್ತದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬಂತೆ ಪರಿಸರವಿದ್ದರೆ ಮಾತ್ರ ಮಾನವನಿದ್ದಾನೆ. ಹಸಿರಿಲ್ಲದೆ ಉಸಿರಿಲ್ಲ. ಪ್ರಕೃತಿಯಲ್ಲಿನ ನೀರು, ಮಣ್ಣು, ಗಾಳಿ, ಮರಗಳಿಲ್ಲದೆ ಮನುಷ್ಯ ಸಂಕುಲವಿಲ್ಲ. ಮಾನವನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಾದ್ಯಂತ ಜನರು ಗಿಡಗಳನ್ನು ನೆಡುತ್ತಾರೆ. ಗಿಡಗಳನ್ನು ನೆಡುವುದು, ನೆಟ್ಟ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಮಾಡುತ್ತಾರೆ.
ವಿಶ್ವದಾದ್ಯಂತ ಸುಮಾರು 150 ದೇಶಗಳು ಪರಿಸರ ದಿನವನ್ನು ಆಚರಿಸುತ್ತವೆ. ಪ್ರಕೃತಿಯ ಮೇಲಾಗುತ್ತಿರುವ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸಲು ಮುಂದಾಯಿತು. ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ.
ನಮ್ಮ ಈ ಭೂಮಿಯನ್ನು ರಕ್ಷಿಸಲು ಎಲ್ಲರೂ ಕೈಜೋಡಿಸೋಣ. ಈ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ, ಭೂಮಿ ಉಳಿಸೋಣ, ಹಸಿರು ಬೆಳೆಸೋಣ ಸರ್ವರಿಗೂ ಪರಿಸರ ದಿನದ ಶುಭಾಶಯಗಳು
www.kharvionline.com
ಭೂಮಿಯ ಮಾಲಿನ್ಯಕ್ಕೆ ಕಾರಣವಾಗುವ ಮಾನವ ಚಟುವಟಿಕೆಗಳೆ ಪರಿಸರಕ್ಕೆ ದೊಡ್ಡ ಅಪಾಯ. ಒಂದು ಸ್ವಚ್ಛ ಮತ್ತು ಮಾಲಿನ್ಯ-ಮುಕ್ತ ಪರಿಸರವನ್ನು ಸೃಷ್ಟಿಸಲು ನಮ್ಮಿಂದ ಮಾತ್ರ ಸಾಧ್ಯ. ನಮ್ಮ ಮುಂದಿನ ಪೀಳಿಗೆ ಒಂದು ಶುದ್ಧ ಪರಿಸರ ನಿರ್ಮಾಣ ಮಾಡೋಣ ನಾವೇ ಸೃಷ್ಟಿಸಿದ ಮಾಲಿನ್ಯಕ್ಕೆ ಕಡಿವಾಣ ಹಾಕಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ. ಮಾಲಿನ್ಯವು ನಿಮ್ಮನ್ನು ನಾಶಮಾಡುವ ಮೊದಲು ಅದನ್ನು ಅಳಿಸಿವ ಪ್ರಯತ್ನ ಮಾಡೋಣ.
ಎಲ್ಲರಿಗೂ ಆರೋಗ್ಯಕರ ಮತ್ತು ವಿಶ್ವ ಪರಿಸರ ದಿನದ ಶುಭಾಶಯಗಳು… ಪ್ರತಿದಿನವೂ ಪರಿಸರ ದಿನವಾಗಲಿ …
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷ್ಮಸ್ವಮೆ |
🙏