ಕಂಚಗೋಡು ಶ್ರೀ ರಾಮ ಸಭಾಭವನ ನಿರ್ಮಾಣಕ್ಕೆ ಅನುದಾನದ ಕೊಡುಗೆ ನೀಡಿದ ಬೈಂದೂರು ಶಾಸಕರಿಗೆ ಊರ ಪರವಾಗಿ ಸನ್ಮಾನ.
ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಕಡಲತಡಿಯ ಪುಟ್ಟ ಗ್ರಾಮ ಕಂಚಗೋಡು ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ. ಹತ್ತು ಹಲವು ಪ್ರತಿಭೆಗಳ ಕಲಾಸಂಗಮವಾದ ಈ ಪುಟ್ಟ ಗ್ರಾಮದಲ್ಲಿ ಮದುವೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸೂಕ್ತವಾದ ಸಭಾಭವನದ ಕೊರತೆ ಕಾಡುತಿತ್ತು.
ಸಭಾಭವನದ ನಿರ್ಮಾಣಕ್ಕಾಗಿ ಊರ ನಾಗರಿಕರು ಶ್ರೀ ರಾಮಮಂದಿರ ಸಮಿತಿಯ ಮುಂದಾಳತ್ವದಲ್ಲಿ ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ಮನವಿ ನೀಡಲಾಗಿತ್ತು ಬೇಡಿಕೆ ಕಾರ್ಯರೂಪಕ್ಕೆ ಬರಲು ವಿಳಂಬವಾಗಿತ್ತು ಶ್ರೀ ರಾಮ ದೇವಸ್ಥಾನ ಸಮಿತಿಯವರು ಈ ಬಗ್ಗೆ ನಿರಂತರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುಕುಮಾರ ಶೆಟ್ಟಿಯವರನ್ನು ಭೇಟಿಯಾಗಿ ಸಭಾಭವನದ ನಿರ್ಮಾಣದ ಬಗ್ಗೆ ವಿನಂತಿಸಿಕೊಂಡ ಪರಿಣಾಮವಾಗಿ ಮತ್ತು ತೀವ್ರ ಪ್ರಯತ್ನದ ಫಲವಾಗಿ ಶಾಸಕರು ಸಭಾಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುಧಾನ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಆದೇಶ ಪ್ರತಿಯನ್ನು ನೀಡಿದ್ದಾರೆ. ಕಂಚಗೋಡು ಜನರ ಬೇಡಿಕೆಯನ್ನು ಮನ್ನಿಸಿ ತ್ವರಿತಗತಿಯಲ್ಲಿ ಸಭಾಭವನದ ನಿರ್ಮಾಣಕ್ಕೆ ಅನುಧಾನ ಮಂಜೂರಾತಿ ಮಾಡಿದ ಬೈಂದೂರು ಶಾಸಕರಾದ ಶ್ರೀ ಸುಕುಮಾರ ಶೆಟ್ಟಿಯವರನ್ನು ಊರ ಪರವಾಗಿ ಇಂದು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
www.kharvionline.com