ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಲೈವ್ ವೆಬಿನಾರ್ YOGA for LIFE

ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಸಂಪೂರ್ಣ ಸ್ವಾಸ್ಥ್ಯದ ಪರಿಕಲ್ಪನೆಯೊಂದಿಗೆ ಖಾರ್ವಿ ಆನ್ಲೈನ್ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಲೈವ್ ವೆಬಿನಾರ್ YOGA for LIFE ಎಂಬ ಶೀರ್ಷಿಕೆಯಡಿಯಲ್ಲಿ BeWell ಯೋಗ ಸ್ಟುಡಿಯೋ ಬೆಂಗಳೂರು ಸ್ಥಾಪಕರಾದ ಶ್ರೀಮತಿ ರಜನಿ ಮೇಸ್ತಾ ರವರು ಕಾರ್ಯಕ್ರಮ ನಡೆಸಿಕೊಡಲಿದ್ದು, ಯೋಗ ತರಬೇತಿಯ ಪ್ರಾತ್ಯಕ್ಷಿಕೆಯೊಂದಿಗೆ, ನೂಟ್ರಿಷನ್, ಡಯಟ್ ಮತ್ತು ವೈಟ್ ಕರೆಕ್ಷನ್ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.

ಮಹಿಳೆಯರಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಾದ ಥೈರಾಯಿಡ್, PCOD,PCOS ಮುಂತಾದವುಗಳಿಗೆ ಯೋಗದಿಂದ ಪರಿಹಾರ ಕಲ್ಪಿಸಿಕೊಳ್ಳಲು ಸಮಾಜದ ಮಹಿಳೆಯರು, ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಲು ಸುವರ್ಣಾವಕಾಶ ಇರುತ್ತದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕರಾಟೆ ಚಾಂಪಿಯನ್ ಸವಿತಾ ಖಾರ್ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ತಾರೀಕು 26/ 6 /2022 ನೇ ಆದಿತ್ಯವಾರ ಬೆಳಿಗ್ಗೆ 10.30 ರಿಂದ 12.30 ರ ಅವಧಿಯಲ್ಲಿ ಈ ಬಹುಪಯೋಗಿ ಕಾರ್ಯಕ್ರಮವನ್ನು ಶ್ರೀಮತಿ ರಜನಿ ಮೇಸ್ತಾ ರವರು ನಡೆಸಿಕೊಡಲಿದ್ದಾರೆ.

ಕೊಂಕಣಿ ಖಾರ್ವಿ ಸಮಾಜ ಭಾಂಧವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಲೈವ್ ವೆಬಿನಾರ್ ನಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಖಾರ್ವಿ ಆನ್ಲೈನ್ ಕೋರುತ್ತದೆ.

www.kharvionline.com
newskharvionline@gmail.com

Leave a Reply

Your email address will not be published. Required fields are marked *