ಎಲ್ಲರಿಗೂ ಮಳೆಯಾದರೂ ಎಲ್ಲರಿಗೂ ಬೆಳೆಯಿಲ್ಲ ಎಂಬ ಗಾದೆಮಾತು ನಮ್ಮಲ್ಲಿ ಪ್ರಚಲಿತದಲ್ಲಿದೆ. ಅಪಾರ ಪರಿಶ್ರಮ ಮತ್ತು ಶಿಸ್ತುಬದ್ದ ದುಡಿಮೆ ನಮಗೆ ಉತ್ತಮ ಫಸಲನ್ನು ತಂದುಕೊಡುತ್ತದೆ.ಹಾಗೆಯೇ ಕಠಿಣ ಪರಿಶ್ರಮದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಗುರಿ ತಲುಪಲು ಪೂರ್ವ ಸಿದ್ಧತೆ, ವಿಶೇಷ ಮುತುವರ್ಜಿ ಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ,ಬೆಂಬಲ ಮತ್ತು ಸ್ಪೂರ್ತಿ ದೊರಕಿದರೆ ಖಂಡಿತಾ ಅವರು ಯಶಸ್ಸು ಗಳಿಸುತ್ತಾರೆ.ಈ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ವಿಶ್ವ ಕೊಂಕಣಿ ಕೇಂದ್ರದ ನೇತೃತ್ವದಲ್ಲಿಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಸಹಭಾಗಿತ್ವದಲ್ಲಿ ಮತ್ತು ಖಾರ್ವಿ ಆನ್ಲೈನ್ ಸಹಕಾರದೊಂದಿಗೆ ಇಂದು ಮಂಗಳೂರಿನಲ್ಲಿ ಕೊಂಕಣಿ ಮಾತೃಭಾಷೆಯ ವಿದ್ಯಾರ್ಥಿಗಳಿಗೆ UPSC, IAS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಮತ್ತು ಬೆನ್ನುಲುಬಾಗಿ ನಿಂತುಕೊಳ್ಳಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ನಮ್ಮ ಸಮಾಜದ ಎಂಟು ಜನ ಅಭ್ಯರ್ಥಿಗಳು ಇದರಲ್ಲಿ ಇದ್ದಾರೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲಿ ಇದೊಂದು ವಿನೂತನ ಮತ್ತು ಅಭೂತಪೂರ್ವ ಕಾರ್ಯಾಗಾರವಾಗಿದೆ.
ಕೊಂಕಣಿ ಖಾರ್ವಿ ಮಹಾಜನಾ ಸಭಾದ ಅಧ್ಯಕ್ಷರಾದ ಶ್ರೀ ಮೋಹನ ಬನಾವಳಿಕಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ತಾಂಡೇಲರವರ ವಿಶೇಷ ಮುತುವರ್ಜಿ, ಖಾರ್ವಿ ಆನ್ಲೈನ್ ವಿಶೇಷ ಆಸಕ್ತಿ ಮತ್ತು ರವಿ ಟಿ ನಾಯ್ಕರವರ ಸಹೃದಯದ ಆರ್ಥಿಕ ನೆರವು ಇಲ್ಲಿ ಗಮನಾರ್ಹ ಸಂಗತಿಯಾಗಿದೆ, ಕೊಂಕಣಿ ಖಾರ್ವಿ ಸಮಾಜದ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಸಕ್ರಿಯರಾಗಿರುವ ಶ್ರೀ ರವಿ ಟಿ ನಾಯ್ಕ ರವರು ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ. ಟೀಮ್ ಖಾರ್ವಿ ಆನ್ಲೈನ್ ನಮ್ಮ ಸಮಾಜದ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.
ಮುಂದೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸೂಕ್ತ ತರಬೇತಿ, ಬೇಕಾಗುವ ಅವಶ್ಯಕ ಅಧ್ಯಯನ ಸಾಮಾಗ್ರಿಗಳ ಪೂರೈಕೆ ಸೇರಿದಂತೆ ಎಲ್ಲಾ ರೀತಿಯ ಖರ್ಚುವೆಚ್ಚಗಳ ನೆರವನ್ನು ವಿಶ್ವಕೊಂಕಣಿ ಕೇಂದ್ರ ಭರಿಸುವ ಸಂಕಲ್ಪ ತೊಟ್ಟಿದೆ
ಸಂಕಲ್ಪಬದ್ಧ ಮನಸ್ಸುಗಳಿಗೆ ಇದೊಂದು ಸ್ಪೂರ್ತಿಯ ದಾರಿದೀಪವಾಗಿದ್ದು, ಸಮಾಜದ ವಿದ್ಯಾರ್ಥಿಗಳ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಭೂತಪೂರ್ವ ಕಾರ್ಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ಈ ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿ ವಿಶ್ವಕೊಂಕಣಿ ಸಭಾ ಶ್ಲಾಘನೀಯ ಕಾರ್ಯ ಮಾಡಿದೆ.ನಮ್ಮ ಸಮಾಜದ ಅಭ್ಯರ್ಥಿಗಳಿಗೆ ಈ ಅವಕಾಶ ಕಲ್ಪಿಸಿಕೊಟ್ಟ ವಿಶ್ವಕೊಂಕಣಿ ಸಭಾಕ್ಕೆ ಕೊಂಕಣಿ ಖಾರ್ವಿ ಮಹಾಜನಾ ಸಭಾ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸಮಾಜವನ್ನುಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಧಾನ ಭೂಮಿಕೆಯಲ್ಲಿ ನಿಂತು ಅವಿರತವಾಗಿ ದುಡಿಯುತ್ತಿರುವ ಶ್ರೀ ಮೋಹನ್ ಬನಾವಳಿಕಾರ್ ರವರ ದೃಡವಾದ ಇಚ್ಛಾಶಕ್ತಿ ಮತ್ತು ದೂರದೃಷ್ಟಿತನದ ನಾಯಕತ್ವದ ಗುಣಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಈ ಅಭೂತಪೂರ್ವ ಕಾರ್ಯಗಾರದಲ್ಲಿ ಪಾಲ್ಗೊಂಡ ಕೊಂಕಣಿ ಖಾರ್ವಿ ಸಮಾಜದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಕೊಂಕಣಿ ಖಾರ್ವಿ ಮಹಾಜನಾ ಸಭಾ ಮತ್ತು ಖಾರ್ವಿ ಆನ್ಲೈನ್ ಸಲ್ಲಿಸುತ್ತದೆ ಮತ್ತು ಅವರ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕೊಂಕಣಿ ಖಾರ್ವಿ ಸಮಾಜದ ಅಭ್ಯರ್ಥಿಗಳಿಗೆ ಖಾರ್ವಿ ಆನ್ಲೈನ್ ವತಿಯಿಂದ Escube koffee with kharvionline coffee ಮಗ್ ನೀಡಿ ಗೌರವಿಸಲಾಯಿತು.
www.kharvionline.com