ಗಂಗೊಳ್ಳಿಗೆ ವಾಣಿಜ್ಯ ಬಂದರು, ಮೀನುಗಾರರ ವಿರೋಧ

ಗಂಗೊಳ್ಳಿ ವಾಣಿಜ್ಯ ಬಂದರು, ಮೀನುಗಾರರ ವಿರೋಧ

ಸಾಗರಮಾಲಾ ಯೋಜನೆಯಡಿಯಲ್ಲಿ ಗಂಗೊಳ್ಳಿ ಬಂದರನ್ನು ವಾಣಿಜ್ಯ ಬಂದರನ್ನಾಗಿ ಪರಿವರ್ತಿಸುವ ಕೋಸ್ಟಲ್ ಬರ್ತ್ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಮೀನುಗಾರರು ಸಿಡಿದೆದ್ದಿದಾರೆ.ಗಂಗೊಳ್ಳಿ ಐತಿಹಾಸಿಕ ಬಂದರಾಗಿದ್ದು ಮೀನುಗಾರರ ಹಿತರಕ್ಷಣೆಗಾಗಿ ಕೇವಲ ಮೀನುಗಾರಿಕೆ ಚಟುವಟಿಕೆಗಳಿಗೋಸ್ಕರ ಮಾತ್ರ ಬಳಸಲು ಅನುಕೂಲವಾಗುವಂತೆ ಸರ್ವ ಋತು ಬಂದರನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಮೀನುಗಾರರ ಸಂಘಟನೆಗಳು ಬೈಂದೂರು ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಗಂಗೊಳ್ಳಿಯ ಪರ್ಸಿನ್ ಸಂಘದ ಅಧ್ಯಕ್ಷರಾದ ನಾರಾಯಣ ಖಾರ್ವಿ, ಹಸಿಮೀನು ವ್ಯಾಪಾರಸ್ಥ ಸಂಘದ ಅಧ್ಯಕ್ಷರಾದ ಧನು ಖಾರ್ವಿ,370 ಸಂಘದ ಅಧ್ಯಕ್ಷ ಬಸವ ಖಾರ್ವಿ.ಫಿಶಿಂಗ್ ಬೋಟ್ ಸಂಘದ ರಾಮ ಖಾರ್ವಿ, ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: kharvionline.com

Leave a Reply

Your email address will not be published. Required fields are marked *