ಆರ್ಥಿಕ ಸ್ವಾತಂತ್ರ್ಯವಿಲ್ಲದೇ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ ಆರ್ಥಿಕ ಸ್ವಾವಲಂಬನೆ ಇಲ್ಲದೇ ರಾಜಕೀಯದಲ್ಲಾಗಲೀ, ಸಾಮಾಜಿಕ ಕ್ಷೇತ್ರದಲ್ಲಾಗಲಿ ಒಂದು ಸಮಾಜ ಮುಂದುವರಿಯುವುದು ಬಹಳ ಕಷ್ಟ. ಒಂದು ಸಮಾಜದ ಅಭಿವೃದ್ಧಿಪೂರಕವಾದ ಚಟುವಟಿಕೆಗಳೆಲ್ಲವೂ ಆರ್ಥಿಕ ಸ್ವಾವಲಂಬನೆಯನ್ನೇ ಅವಲಂಬಿಸಿರುವುದು ಇದಕ್ಕೆ ಕಾರಣವಾಗಿದೆ. ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಾದರೆ ಸಮಾಜದ ಪ್ರತಿಯೊಬ್ಬರು ಆರ್ಥಿಕವಾಗಿ ಪ್ರಬಲರಾಗಿರಬೇಕು. ಅವರಿಗೆ ಸಮರ್ಪಕ ದುಡಿಮೆಯ ಉದ್ಯೋಗವಿರಬೇಕು.ಇದು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ. ಆರ್ಥಿಕ ಸಬಲೀಕರಣದ ವಿಚಾರ ಬಂದಾಗ ನಮ್ಮ ಕೊಂಕಣಿ ಖಾರ್ವಿ ಸಮಾಜದ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ ಸಮಾಜದ ಎಂಬತ್ತು ಶೇಕಡಾ ಮಂದಿ ಮೀನುಗಾರಿಕೆಯನ್ನೆ ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ.
ಸರ್ಕಾರಿ ಉದ್ಯೋಗದಲ್ಲಿರುವವರು ತೀರಾ ಕನಿಷ್ಠ ಮಂದಿ ಪ್ರಸ್ತುತ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ಸಕರಾತ್ಮಕ ಚಿಂತನೆಗಳಿಗೆ ಧೋರಣೆಗಳಿಗೆ ನಮ್ಮ ಸಮಾಜ ತೆರೆದುಕೊಳ್ಳುತ್ತಿದೆ. ನಮ್ಮ ಸಮಾಜದ ವಿದ್ಯಾವಂತ ಯುವಕ ಯುವತಿಯರು ಉನ್ನತ IAS, IPS ಉದ್ಯೋಗಾಕಾಂಕ್ಷಿಗಳಾಗಿದ್ದು ಉತ್ತಮ ಬೆಳವಣಿಗೆಯ ಸೂಚಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ನೆರವು ನೀಡಲು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಭಾ ಮತ್ತು ಖಾರ್ವಿ ಆನ್ಲೈನ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ವರ್ಷದಲ್ಲಿ UPSC ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ನಮ್ಮ ಸಮಾಜದ ಎಲ್ಲಾ ಆಕಾಂಕ್ಷಿಗಳನ್ನು UPSC Mock Test ಮತ್ತು Orientation ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಸೇರಲು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.
ಈ ಕಾರ್ಯಕ್ರಮದಲ್ಲಿ ಭವಿಷ್ಯದ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳು, ಯೋಜನೆ ಮತ್ತು ಇತರ ವೃತ್ತಿ ಆಧಾರಿತ ಮಾರ್ಗದರ್ಶನ ಕಾರ್ಯಕ್ರಮಗಳು, ಖಾರ್ವಿ ಸಮಾಜದ ವಿದ್ಯಾರ್ಥಿ ಡೇಟಾಬೇಸ್ ಗಾಗಿ ನೋಂದಣಿ ಕಾರ್ಯಕ್ರಮಗಳು ನಡೆಯಲಿದೆ. 2nd puc ಪೂರ್ಣಗೊಳಿಸಿ ಭವಿಷ್ಯದಲ್ಲಿ ವೈದ್ಯಕೀಯ, ಕಲೆ, ವಾಣಿಜ್ಯ, ಕಾನೂನು ಕ್ಷೇತ್ರಗಳಲ್ಲಿ ವೃತ್ತಿಪರ ಕೋರ್ಸ್ ಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕೂಡಾ ಭಾಗವಹಿಸಬಹುದು. ಈ ಮಾಹಿತಿಯನ್ನು ಆಯಾ ಕ್ಷೇತ್ರಗಳಲ್ಲಿ ಭವಿಷ್ಯದ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.
ಇದಲ್ಲದೇ ವಿಶ್ವ ಕೊಂಕಣಿ ಕೇಂದ್ರದ 2022 ರಲ್ಲಿಇಂಜಿನಿಯರಿಂಗ್ ತೆಗೆದುಕೊಳ್ಳಲು ಬಯಸುವ ಎಲ್ಲಾ ಅರ್ಹ 2nd puc ವಿದ್ಯಾರ್ಥಿಗಳಿಗೆ ರೂ.2 ಲಕ್ಷ ವಿದ್ಯಾರ್ಥಿ ವೇತನ ನೋಂದಣಿ ಕಾರ್ಯಕ್ರಮವೂ ಇದೆ. ಖಾರ್ವಿ ಸಮಾಜದ ಎಲ್ಲಾ PUC ವಿದ್ಯಾರ್ಥಿಗಳು, ಎಲ್ಲಾ ಪದವಿ ದರ್ಜೆಯ ವಿದ್ಯಾರ್ಥಿಗಳು ಮತ್ತು 35 ವರ್ಷದೊಳಗಿನ ಪದವೀಧರರು UPSC Mock Test ತೆಗೆದುಕೊಳ್ಳಬಹುದು. ಅಣಕು ಪರೀಕ್ಷೆಯ ಪಠ್ಯಕ್ರಮವು 2011, 2015 UPSC ಪ್ರಿಲಿಮ್ಸ್ ಜಿಎಸ್ 1 ಮತ್ತು ಸಿಎಸ್ಎಟಿ ಪರೀಕ್ಷೆಯ ಪೇಪರ್ ಗಳಾಗಿರುತ್ತದೆ.
ಇದು ಪರಿಚಯಾತ್ಮಕ ಮಿನಿ ಅಣಕು ಪರೀಕ್ಷೆಯಾಗಿರುವುದರಿಂದ ಮೂಲ ಅಣಕು ಪರೀಕ್ಷೆಗೆ ಹೋಲಿಸಿದರೆ ಪರೀಕ್ಷೆಗಳಲ್ಲಿ ಪ್ರಶ್ನೆಗಳ ಸಂಖ್ಯೆ ಕಡಿಮೆ ಇರುತ್ತದೆ. ಈ ಅಭೂತಪೂರ್ವ ಕಾರ್ಯಕ್ರಮವನ್ನು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಭಾ, ಖಾರ್ವಿ ಆನ್ಲೈನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದೆ.ಕೊಂಕಣಿ ಖಾರ್ವಿ ಮಹಾಜನಾ ಸಭಾದ ಅಧ್ಯಕ್ಷರಾಗಿರುವ ಶ್ರೀ ಮೋಹನ್ ಬನವಾಳಿಕರ್ ಮತ್ತು ಕಾರ್ಯದರ್ಶಿಯಾಗಿರುವ ಕೃಷ್ಣ ತಾಂಡೇಲ್ ರವರು ವಿಶೇಷ ಮುತುವರ್ಜಿಯಿಂದ ಆಯೋಜಿಸುತ್ತಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದಲ್ಲಿ ಸಮಾಜಕ್ಕೆ ದೊರೆಯುವ ಎಲ್ಲಾ ರೀತಿಯ ಸೌಲಭ್ಯ ಮತ್ತು ವಿಶೇಷ ಯೋಜನೆಗಳ ಪ್ರಯೋಜನಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಿಸುವಲ್ಲಿ ಮೋಹನ್ ಬನಾವಳಿಕಾರ್ ರವರು ಸಮಾಜಮುಖಿ ಚಿಂತನೆಯ ದೂರದೃಷ್ಟಿತನದಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮಾಜ ಸಾಮೂಹಿಕ ಮಟ್ಟದಲ್ಲಿ ಶ್ರೇಷ್ಟತೆ ಸಾಧಿಸಬೇಕೇಂಬ ಅವರ ಹಂಬಲ, ಕಳಕಳಿಯೇ ಅವರನ್ನು ಸಮಾಜದ ಅತ್ಯುನ್ನುತ್ತ ಸಂಸ್ಥೆಗೆ ನಿಯುಕ್ತಿಗೊಳ್ಳುವಂತೆ ಮಾಡಿದೆ.
ಮುಂಬೈ ಉದ್ಯಮಿ ರವಿ ಟಿ ನಾಯ್ಕರವರು ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಯ ಕುರಿತಂತೆ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮ ಸಲಹೆ ಸಹಕಾರ ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಹೆಮ್ಮೆಯ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಡಲಜೀವಶಾಸ್ರ್ತದ ಬಗ್ಗೆ ಸಮಗ್ರವಾದ ಅಮೂಲ್ಯ ಮಾಹಿತಿ ನೀಡಲಿದ್ದಾರೆ. ಕಡಲಿನ ಬಗ್ಗೆ ಅಪಾರವಾದ ವೈಜ್ಞಾನಿಕ ಮಾಹಿತಿಯನ್ನು ಅವರು ಪ್ರಸ್ತುತ ಪಡಿಸಲಿದ್ದಾರೆ ಮತ್ತು ಭಟ್ಟಳದ ಕಾಲೇಜಿನ ಪ್ರಾಂಶುಪಾಲರಾದ ರೂಪ ರಮೇಶ್ ಖಾರ್ವಿಯವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹಳಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಸಮಾಜದ ಶ್ರೇಯೋಭಿಲಾಷೆಗಾಗಿ ಹಮ್ಮಿಕೊಂಡಿರುವ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿಜ್ಞಾಪಿಸಿಕೊಳ್ಳುತ್ತೇವೆ.
ಸುಧಾಕರ್ ಖಾರ್ವಿ
Editor www.kharvionline.com