ಮನುವಿಕಾಸ ಮತ್ತು ನಬಾರ್ಡ್ ಇವರ ಸಹಯೋಗದಲ್ಲಿ ಕಾಸರಕೋಡ ಮೀನು ಮಾರಾಟಗಾರರ ಮತ್ತು ಮತ್ಯೋದ್ಯಮ ಸಂಘ ಇವರಿಗೆ ಒಂದು ದಿನದ ರೈತ ಉತ್ಪಾದಕ ಸಂಸ್ಥೆಯ ಪರಿಕಲ್ಪನಾ ತರಬೇತಿಯನ್ನು ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದಿವಾಕರ್ ಅಘನಾಶಿನಿ ಇವರು ಸಂಘಟನೆ ಎಂದರೇನು ಅದನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕು ಮತ್ತು ಸಂಘಟನೆಯಿಂದ ಹೇಗೆ ಕೆಲಸವೂ ಸುಲಭ ಗೊಳ್ಳುವುದು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಪ್ರಕಾಶ್ ಮೇಸ್ತ ( ಕಡಲ ವಿಜ್ಞಾನಿ) ಇವರು ಒಣ ಮೀನು ಮಾರಾಟ ಮತ್ತು ಮೀನು, ಸಿಗಡಿ, ಏಡಿಯ ಮೌಲ್ಯವರ್ಧಿತ ಉತ್ಪನ್ನಗಳು ಅದನ್ನು ಸಂಗ್ರಹಿಸುವ ರೀತಿ ಪ್ಯಾಕಿಂಗ್ ಬ್ರಾಂಡಿಂಗ್, ಮೌಲ್ಯವರ್ಧನೆ ಮಾಡುವಾಗ ವಹಿಸಬೇಕಾದ ಸ್ವಚ್ಛತೆಗಳ ಬಗ್ಗೆ ವಿವರಿಸಿದರು.
ಮನುವಿಕಾಸ ಸಂಸ್ಥೆಯ ಅಡ್ಮಿನ್ ಸಿಬ್ಬಂದಿಗಳಾದ ಭಾರ್ಗವ್ ಹೆಗಡೆ ಮತ್ತು ಮಾಧುರಿ ಪಟಗಾರ ಇವರು ರೈತ ಉತ್ಪಾದಕ ಸಂಸ್ಥೆ ಎಂದರೇನು, ಅದರ ಕೆಲಸ ಕಾರ್ಯಗಳು, ಉತ್ತಮ ಸಿ.ಇ.ಒ. ಗೆ ಇರಬೇಕಾದ ಗುಣಲಕ್ಷಣಗಳು , ಅವರ ಆಯ್ಕೆ, ಅವರ ಕೆಲಸಗಳು, ಆಡಳಿತ ನಿರ್ದೇಶಕ ಮಂಡಳಿ, ಅವರ ಜವಾಬ್ದಾರಿ, ಉತ್ಪಾದಕ ಸಂಘದ ಸದಸ್ಯರಿಗಿರುವ ಜವಾಬ್ದಾರಿ, ಬ್ಯುಸಿನೆಸ್ ಅಭಿವೃದ್ಧಿ ,ಮಾರುಕಟ್ಟೆ, ನಿರ್ವಹಿಸಬೇಕಾದ ದಾಖಲಾತಿ ಪತ್ರಗಳು, ರೈತ ಉತ್ಪಾದಕ ಸಂಸ್ಥೆಯಲ್ಲಿ ಎನ್.ಜಿ.ಒ ಪಾತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಮೀುಗಾರಿಕೆಯ ಇಲಾಖೆಯ ರವಿ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ತಾಂಡೆಲ್, ನಿರ್ದೇಶಕ ಮಂಡಳಿಯ ರೇಣುಕಾ ತಾಂಡೆಲ್, ಪ್ರೀತಿ ತಾಂಡೆಲ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೇಖಾ ತಾಂಡೆಲ್ ಸ್ವಾಗತಿಸಿದರು. ರಮೇಶ್ ನಾಯ್ಕ ವಂದಿಸಿದರು.