ಕರಾವಳಿ ವಿದ್ಯಾವರ್ಧಕ ಸಂಘ (ರಿ.) ಮಂಕಿ “ಮನವಿ”

ಕರಾವಳಿ ವಿದ್ಯಾವರ್ಧಕ ಸಂಘ (ರಿ.)
ದೇವರಗದ್ದೆ ಮಂಕಿ ತಾ|| ಹೊನ್ನಾವರ (ಉ.ಕ)
DRUK/SOR/195/2018-2019 -1998

ಮನವಿ

ಕಳೆದ 25 ವರ್ಷಗಳ ಹಿಂದೆ ಹೊನ್ನಾವರ ತಾಲೂಕಿನ ಮಂಕಿಯ ದೇವರಗದ್ದೆಯಲ್ಲಿ ನಮ್ಮ ಸಮಾಜದ ಜನರಲ್ಲಿ ಶಿಕ್ಷಣದ ಕೊರತೆ ನೀಗಿಸಿ ಎಲ್ಲರನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಲು ಹಾಗೂ ಸಂಘಟಿಸಲು ಕರಾವಳಿ ವಿದ್ಯಾವರ್ಧಕ ಸಂಘದ ಸ್ಥಾಪನೆಯಾಗಿದ್ದು ಸಂಘವು ಈ ವರ್ಷ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ನಮ್ಮೇಲ್ಲರಿಗೂ ಸಂಭ್ರಮದ ಸಂಗತಿಯಾಗಿದೆ. ಸಂಘವು ಕೊಂಕಣಿ ಖಾರ್ವಿ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಕಳೆದ ಹಲವಾರು ವರ್ಷಗಳಿಂದ ಸ್ಥಳಿಯ ಸುತ್ತಮುತ್ತಲಿನ 3 ಕನ್ನಡ ಶಾಲೆಗಳಿಗೆ ಪಠ್ಯ ವಿತರಣೆ,ಕ್ರೀಡಾ ಸಲಕರಣೆ ವಿತರಣೆ, ಪ್ರತಿಭಾ ಪುರಸ್ಕಾರ, ವಿಶೇಷ ಸಾಧನೆಗೈದ ನಮ್ಮೂರಿನ ಪ್ರತಿಭೆಗಳಿಗೆ ಸನ್ಮಾನ ಹಾಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ/ನಿರ್ವಹಿಸಿದ ಸೈನಿಕರಿಗೆ ಪ್ರತಿವರ್ಷವೂ ಸನ್ಮಾನಿಸಿ ಗೌರವ ಸಮರ್ಪಣೆ ಮಾಡುತ್ತಾ ಬಂದಿದೆ. ರಜತ ಮಹೋತ್ಸವದ ಈ ಸುಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಸ್ವಂತ ಕಟ್ಟಡ ಕಟ್ಟಲು ಪ್ರಯತ್ನಿಸುತ್ತಿದ್ದು, ಸಂಘದ ಸದಸ್ಯರ ಹಾಗೂ ಹಿತೈಸಿಗಳ ಅವಿರತ ಪ್ರಯತ್ನದ ಫಲವಾಗಿ ಸಂಘವು ಈ ವರ್ಷ ಸಭಾಭವನವನ್ನು ಲೋಕಾರ್ಪಣೆ ಮಾಡಲು ಮುಂದಾಗಿದೆ. ಸುಮಾರು 45 ಲಕ್ಷ ವೆಚ್ಚದಲ್ಲಿ ಸಿದ್ದಗೊಳ್ಳುತ್ತಿರುವ ಸಭಾಭವನ ಈಗಾಗಲೇ ಶೇ. 25% ರಷ್ಟು ಕೆಲಸ ಮುಗಿದಿದ್ದು ಕಟ್ಟಡ ಪೂರ್ಣಗೊಳ್ಳಲು ಇನ್ನೂ ಸುಮಾರು 35 ಲಕ್ಷ ರೂಪಾಯಿಗಳ ಅವಶ್ಯಕತೆ ಇದ್ದು ತಮ್ಮಲ್ಲಿ ವಿನಂತಿಸುವುದೇನೆಂದರೇ ಈ ಸಭಾಭವನ ಮಹೋತ್ಸವ ಆಚರಿಸಿಕೊಳ್ಳುವ ಸುಸಂದರ್ಭದಲ್ಲಿ ಸಭಾಭವನ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲು ಕಾರಣೀಕರ್ತರಾಗಿ ಎಂದು ತಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತಿದ್ದೇವೆ.

ಪೂರ್ಣಗೊಳಿಸಲು ತಮ್ಮಿಂದ ತನು-ಮನದ ಜೊತೆಗೆ ಆರ್ಥಿಕ ಸಹಕಾರ ಬಯಸುತ್ತಿದೆ. ಕರಾವಳಿ ವಿದ್ಯಾವರ್ಧಕ ಸಂಘ,ನಮ್ಮೂರಿನ ಹಿರಿಯರ,ಸಮಾಜದ ಸಮಸ್ತ ಸಾರ್ವಜನಿಕರ, ಮಾರ್ಗದರ್ಶಕರ ಹಾಗೂ ಸದಸ್ಯರ ಸಲಹೆ,ಸಹಕಾರ ಹಾಗೂ ಮಾರ್ಗದರ್ಶನದಿಂದ 2023 ರಂದು ತನ್ನ ರಜತ ಮಹೋತ್ಸವ ವನ್ನು ಆಚರಿಸಿ ಕೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ಸಂಘವು ಸ್ವಂತ ಕಟ್ಟಡ(ಸಭಾಭವನ)ದ ಉದ್ಘಾಟನೆ ಮಾಡಲು ಯೋಜನೆ ಮಾಡಿಕೊಂಡಿದೆ.ಅದಕ್ಕೆ ತಮ್ಮಿಂದ ತನು,ಮನ,ಧನ ರೂಪದ ಸಹಕಾರ ನಿರೀಕ್ಷೆ ಮಾಡುತ್ತಿದೆ.

ರೂ.10/-,50/-,100/-,500/-ಹೀಗೆ ನಿಮ್ಮ ಅನುಕೂಲತೆಗೆ ತಕ್ಕಂತೆ ಧನ ಸಹಾಯ ಮಾಡಬಹುದು. ಸಂಘದ ಖಾತೆಗೆ ಹಣ ಜಮೆ ಮಾಡಿದವರು screenshot ನ್ನು +919632587543 +91 85499 47175 ಈ ಮೊಬೈಲ್ ನಂಬರ್ ಗೆ ವಾಟ್ಸಾಪ್ ಮಾಡಿ.
ಬ್ಯಾಂಕ್‌ ಖಾತೆಗೆ ದೇಣಿಗೆ ಹಣ ಜಮಾ ಮಾಡುವವರು
ಬ್ಯಾಂಕ್‌ ಖಾತೆ:

ಕರಾವಳಿ ವಿದ್ಯಾವರ್ಧಕ ಸಂಘ
S.B A/C No: 03262200037546
IFSC: CNRB0010326
ಕೆನರಾ ಬ್ಯಾಂಕ್‌ ಮಂಕಿ

One thought on “ಕರಾವಳಿ ವಿದ್ಯಾವರ್ಧಕ ಸಂಘ (ರಿ.) ಮಂಕಿ “ಮನವಿ”

Leave a Reply

Your email address will not be published. Required fields are marked *