ಕುಂದೇಶ್ವರ ದೀಪೋತ್ಸವ ಹಾಗೂ ರಥೋತ್ಸವ ಪ್ರಯುಕ್ತ ನ.23ರಂದು ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಯಾವುದೇ ವಾಹನ ನಗರದ ಒಳಗೆ ಪ್ರವೇಶಿಸುವಂತಿಲ್ಲ.
ಕುಂದಾಪುರದ ಸುಪ್ರಸಿದ್ದ ಶ್ರೀ ಕುಂದೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಸಾಂಗವಾಗಿ ನಡೆಯಲು ಕುಂದಾಪುರ ಪೋಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕ್ರಮ ಕೈಗೊಂಡಿದೆ.ನವೆಂಬರ್ 23 ರ ಸಂಜೆ 6.30 ರ ನಂತರ ಯಾವುದೇ ವಾಹನಗಳಿಗೆ ನಗರದ ಒಳಗೆ ಪ್ರವೇಶ ನಿಷೇಧಿಸಲಾಗಿದ್ದು,ಬಸ್ಸುಗಳು ಪ್ರಯಾಣಿಕರನ್ನು ಶಾಸ್ತ್ರಿ ಪಾರ್ಕ್ ಅಂಡರ್ ಪಾಸ್ ಬಳಿ ಇಳಿಸಿ ಸಂತೆಮಾರುಕಟ್ಟೆಯಲ್ಲಿ ಬಸ್ಸುಗಳನ್ನು ನಿಲುಗಡೆ ಮಾಡಬೇಕು.ಅಂಡರ್ ಪಾಸ್ ಎಡಗಡೆಯಲ್ಲಿ ಸಾರ್ವಜನಿಕರ ದ್ವಿಚಕ್ರ ವಾಹನಗಳಿಗೆ ಮತ್ತು ಬಲಗಡೆ ಕಾರು ಮತ್ತಿತರ ನಾಲ್ಕುಚಕ್ರದ ವಾಹನಗಳಿಗೆ ನಿಲುಗಡೆಯ ವ್ಯವಸ್ಥೆ ಕಲ್ಪಿಸಲಾಗಿದೆ.ಅಲ್ಲದೇ ಶಿವಪ್ರಸಾದ್ ರಸ್ತೆ, ಹರಿಪ್ರಸಾದ್ ರಸ್ತೆಯ ಬದಿಯಲ್ಲಿ ಕೂಡಾ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.ಉಳಿದಂತೆ ಕುಂದಾಪುರ ಚಿಕನ್ ಸಾಲ್ ರಸ್ತೆಯ ಮೂಲಕ ವಾಹನಗಳು ನಗರದ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.ಹೆಚ್ಚುವರಿಯಾಗಿ ಕುಂದಾಪುರ ಖಾರ್ವಿಕೇರಿ ರಿಂಗ್ ರೋಡ್ ಮೂಲಕ ಸಂಗಮ್ ತಲುಪಲು ವಾಹನ ಸಂಚಾರಕ್ಕೆ ತುರ್ತು ಬಳಕೆಗೆ ಅವಕಾಶವಿದೆ.
ಈ ವ್ಯವಸ್ಥೆಗೆ ಪೂರಕವಾಗಿ ಖಾರ್ವಿಕೇರಿ ರಿಂಗ್ ರೋಡ್ ನಿವಾಸಿಗಳು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವರೇ ರಸ್ತೆಯನ್ನು ಮುಕ್ತವಾಗಿ ಇಡಲು ಸೂಚಿಸಲಾಗಿದೆ. ದೀಪೋತ್ಸವದ ಪ್ರಯುಕ್ತ ಕುಂದಾಪುರ ಹೊಸ ಬಸ್ ಸ್ಟ್ಯಾಂಡ್,ಹಳೆಬಸ್ ಸ್ಟ್ಯಾಂಡ್,ಪದವಿಪೂರ್ವ ಕಾಲೇಜು,ಮುಂತಾದ ಕಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಯಲು ಸಹಕರಿಸುವಂತೆ ಮತ್ತು ದೀಪೋತ್ಸವದ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲು ಪೋಲೀಸ್ ಇಲಾಖೆಯೊಂದಿಗೆ ಸಹಕರಿಸಲು ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ತುರ್ತು ವಾಹನಗಳಿಗೆ ಸಂಗಮ್ ಮೂಲಕ, ಚಿಕನ್ ಸಾಲ್ ರಸ್ತೆ ಮೂಲಕ, ಹಳೆ ಆದರ್ಶ ಆಸ್ಪತ್ರೆ, ಮೀನು ಮಾರುಕಟ್ಟೆ ರಸ್ತೆಯ ಮೂಲಕ ಪ್ರವೇಶದ ಅವಕಾಶವಿದ್ದು, ಹಳೆಬಸ್ ಸ್ಟ್ಯಾಂಡ್ ನಿಂದ ಪೋಲೀಸ್ ಠಾಣೆಯ ತನಕ ಎಲ್ಲಾ ರಸ್ತೆಗಳು ತೆರೆದಿರುತ್ತದೆ.