ಥ್ಯಾಲಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ CESTOBALL ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ತಂಡ ಪ್ರಥಮ ಸ್ಥಾನ ಗಳಿಸಿದ್ದು ಈ ಮಹಿಳಾ ತಂಡದಲ್ಲಿ ಕೊಂಕಣಿ ಖಾರ್ವಿ ಸಮಾಜದ ನಮ್ರತಾ ಎಂ. ಆಯ್ಕೆಯಾಗಿದ್ದರು. ಪ್ರಥಮ ಸ್ಥಾನ ವೀಜೇತ ತಂಡದಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ಸಮಾಜದ ಹೆಣ್ಣು ಮಗಳು ನಮ್ರತಾ ಮುಗಳಿಯವರು ಭಾರತ ತಂಡದಿಂದ ಅಧಿಕೃತವಾಗಿ ಆಯ್ಕೆಯಾಗಿ ತಂಡದೊಂದಿಗೆ ಪ್ರತಿನಿಧಿಸಿ ತನ್ನ ಅಮೋಘ ಆಟವನ್ನಾಡಿ ಭಾರತ ತಂಡ ಜಯಗಳಿಸುವಲ್ಲಿ ಸಫಲತೆಯನ್ನು ಕಂಡಿದ್ದಾರೆ. ನಮ್ರತಾ ಎಂ. ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ. ಮೂಲತಃ ಹೊನ್ನಾವರ ತಾಲೂಕಿನ ಮುಗಳಿಯವರಾದ ನಮೃತಾ ಮೋಹನ್ ಮುಗಳಿ ಮತ್ತು ಸುನೀತಾ ಮುಗಳಿಯವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ITE ವಿದ್ಯಾರ್ಥಿನಿಯಾಗಿರುವ ನಮೃತಾರವರು ಮುಗಳಿ ಕೃಷ್ಣ ಮೇಸ್ತರವರ ಮೊಮ್ಮಗಳಾಗಿದ್ದಾರೆ. ನಮ್ಮ ದೇಶ, ರಾಜ್ಯ, ಜಿಲ್ಲೆ, ಸಮಾಜ ಹೆಮ್ಮೆ ಪಡುವಂತೆ ಮಾಡಿದ ನಮ್ರತಾರಿಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ.