ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನ, ಕೋಡಿ ಕನ್ಯಾಣ “ಮನವಿ”

॥ ಶ್ರೀ ಚಕ್ರೇಶ್ವರೀ ಮಹಾಮಾತ ಸರ್ವ ಯೋಗಿನ್ಯಧೀಶ್ವರೀ
ಸರ್ವ ಭೂತ ಹಿತೇ ಮಾತಾ ಶರ್ವಾಣೀ ಜಗದೀಶ್ವರೀ |
ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನ
ಕೋಡಿ ಕನ್ಯಾಣ-576 226, ಉಡುಪಿ ಜಿಲ್ಲೆ ಮೊ: 9916317975, 9900459694

ಮನವಿ

ಪ್ರಿಯ ಆಸ್ತಿಕ ಮಹಾಶಯರೇ… ಸರಿಸುಮಾರು 90 ವರ್ಷಗಳಿಂದಲೂ ಕೋಡಿ ಕನ್ಯಾಣದಲ್ಲಿ ಶ್ರೀ ಚಕ್ರೇಶ್ವರೀ ಅಮ್ಮನವರ ದೇವಸ್ಥಾನ ಇರುವುದು ಇಲ್ಲಿನ ಎಲ್ಲಾ ನಿವಾಸಿಗಳಿಗೂ ಹಾಗೂ ಆಸು ಪಾಸಿನ ಗ್ರಾಮದ ಎಲ್ಲಾ ಭಕ್ತ ಜನರಿಗೂ ಗೊತ್ತಿರುವ ಸಂಗತಿ. ಪೂರ್ವಜರ ಸಾಂಸ್ಕೃತಿಕ ಹಿರಿಮೆಯೊಂದಿಗೆ ದೇವಿಯನ್ನು ಈ ಭಾಗದ ಕೊಂಕಣಿ ಖಾರ್ವಿ ಸಮುದಾಯದವರು, ಊರಿನ ಭಕ್ತ ಬಾಂಧವರು ಆರಾಧಿಸಿಕೊಂಡು ಬಂದಿರುತ್ತಾರೆ. ಬಹಳ ಶಿಥಿಲವಾಗಿದ್ದ ದೇಗುಲವನ್ನು ದಿನಾಂಕ: 24 ಮತ್ತು 25 ಫೆಬ್ರವರಿ 2004 ರಂದು ಊರ ಹಾಗೂ ಪರವೂರ ಜನರ ಸಹಕಾರದಿಂದ ಆಗಿನ ಸಮಯಕ್ಕೆ ಸರಿಹೊಂದುವ ಸುಂದರವಾದ ದೇಗುಲವನ್ನು ನಿರ್ಮಿಸಿ, ವೈದಿಕ ವಿಧಿಗಳೊಂದಿಗೆ ಬಹಳ ಶೃದ್ಧೆಯಿಂದ ದೇವಿಯ ದೇಗುಲವನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆಗೊಂಡಿರುವುದು ಎಲ್ಲಾ ಭಕ್ತರ ಶೃದ್ಧೆಗೂ ಹಾಗೂ ಶ್ರೀ ಚಕ್ರೇಶ್ವರೀ ದೇವಿಯ ಕಾರಣೀಕ ಶಕ್ತಿಗೆ ಸಾಕ್ಷಿಯಾಗಿರುತ್ತದೆ.

ಇದೀಗ ದೇಗುಲ ನಿರ್ಮಾಣವಾಗಿ 19ನೇ ವರ್ಷದ ವರ್ಧಂತಿ ಆಚರಿಸುವ ಹೊಸ್ತಿಲಲ್ಲಿ ನಿಂತಿದೆ. ದೇವರ ಪ್ರೇರಣೆಯಂತೆ ಆಡಳಿತ ಸಮಿತಿ ಮತ್ತು ನಂಬಿದ ಭಕ್ತ ಸಮೂಹಕ್ಕೆ ಹೊಸ ವಿಚಾರವೊಂದು ಗೋಚರಿಸಿತು. ದೇಗುಲದ ಅಭಿವೃದ್ಧಿ ಮತ್ತು ಭಕ್ತ ಜನರ ಶ್ರೇಯಸ್ಸಿಗೋಸ್ಕರ ಆರೂಢ ಪ್ರಶ್ನಾಚಿಂತನೆಯನ್ನು ಹಿರಿಯರ ಮಾರ್ಗದರ್ಶನ ಮತ್ತು ತಜ್ಞ ಜ್ಯೋತಿಷಿಯವರಿಂದ ಪರಾಮರ್ಶಿಸಲಾಯ್ತು. ಅಂತೆಯೇ ಆರೂಢ ಪ್ರಶ್ನಾವಿಚಾರವು ನೂರು ಪ್ರತಿಶತ ಸತ್ಯ ಎಂಬುವುದಾಗಿ ಅಂದು ಭಾಗಿಯಾದವರು ಕಂಡುಕೊಂಡರು. ನಂಬಿದ ಭಕ್ತರ ಇಷ್ಟಪ್ರದಾಯಿನಿ, ಸಾತ್ವಿಕ ಶಕ್ತಿ ಮಾತೆ ಶ್ರೀ ಚಕ್ರೇಶ್ವರೀ ಈ ಗ್ರಾಮದ ತುತ್ತ ತುದಿ ‘ಕೋಡಿ’ಯಲ್ಲಿ ಇನ್ನೊಂದು ದೇವಿಯ ಜೊತೆಯಲ್ಲಿ ಶತಮಾನಗಳಿಂದ ನೆಲೆನಿಂತಿದ್ದು, ಪ್ರಾಕೃತಿಕ ವಿಕೋಪದ ಕಾರಣ ಜಲದಲ್ಲಿ ಅಂತರ್ಗತವಾಗಿದ್ದು, ಕ್ರಮೇಣ ಭಕ್ತರೋರ್ವರು ಈಗ ನೆಲೆಯಾದ ಸ್ಥಳದಲ್ಲಿ ತಮ್ಮ ಸಮುದಾಯದವರ ಸಹಾಯದಿಂದ ಗುಡಿಯೊಂದನ್ನು ನಿರ್ಮಿಸಿದರು ಎಂಬ ವಿಚಾರ ಗೋಚರಕ್ಕೆ ಬಂತು. ದಾರು ವಿಗ್ರಹ ಭಿನ್ನವಾಗಿರುವುದು, ದೇವರ ವಿಗ್ರಹ ಭಂಗಿಯಲ್ಲಿ ಲೋಪ, ಹೊರ ಆವರಣದಲ್ಲಿ ಪ್ರತಿಷ್ಠಾಪಿಸಿದ ವಿಗ್ರಹದ ನೋಟ ಮತ್ತು ದಿಕ್ಕಿನಲ್ಲಿ ಲೋಪ, ದೇವರಿಗೆ ಆಹಾರ ನೈವೇದ್ಯ ಮುಂತಾದ ಕೆಲವೊಂದು ವಿಚಾರಗಳು ಬೆಳಕಿಗೆ ಬಂದು ಅದರ ಪರಿಹಾರೋಪಾಯವಾಗಿ ಕೆಲವೊಂದು ಪ್ರಾಯಶ್ಚಿತ್ತಾದಿ ಧಾರ್ಮಿಕ ಕಾರ್ಯಗಳು ಸುಮಾರು 1.5 ಲಕ್ಷವೆಚ್ಚದಲ್ಲಿ ಬಹಳ ಶ್ರದ್ಧಾ ಭಕ್ತಿಯಿಂದ ಮಾಡಿಸಿ ಆಗಸ್ಟ್ ತಿಂಗಳ 21 ಮತ್ತು 22ನೇ 2022ರಂದು ಸಂಪನ್ನಗೊಂಡಿತು.
ಆಗಬೇಕಾದ ಕಾರ್ಯಗಳು ಹಲವು, 2023ರ ಫೆಬ್ರವರಿ 24, 25 ರಂದು ದೇಗುಲದ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾದಿ ಕಾರ್ಯಗಳು ನೆರವೇರಬೇಕಾಗಿದೆ.

ಪ್ರಾಯಶ್ಚಿತ್ತಾದಿ ಧಾರ್ಮಿಕ ಕಾರ್ಯಕ್ಕೆ ಖರ್ಚಾದ ಮೊತ್ತ

ಶ್ರೀ ಚಕ್ರೇಶ್ವರಿ ಮಾತೆಯ ಸುಂದರವಾದ ವಿಗ್ರಹದೊಂದಿಗೆ 4 ವಿಗ್ರಹಗಳ ದಾರು ವಿಗ್ರಹ ರಚನೆಗೆ ಗರ್ಭಗುಡಿ ಮತ್ತು ಹೊರ ಆವರಣದ ದೈವದ ಗುಡಿ ಮನಃರಚನೆಗೆ ದೇಗುಲದ ಹೊರ ಆವರಣಕ್ಕೆ ಸ್ಟೀಲ್‌ನ ಗ್ರಿಲ್ ರಚನೆಗೆ ಪುನರ್ ಪ್ರತಿಷ್ಠಾದಿ ಧಾರ್ಮಿಕ ಕಾರ್ಯಕ್ರಮಕ್ಕೆ ಒಟ್ಟು ಹತ್ತು ಲಕ್ಷದ ತೊಂಬತ್ತು ಸಾವಿರ ಖರ್ಚು ವ್ಯಯವಾಗಬಹುದೆಂದು ಅಂದಾಜಿಸಲಾಗಿದೆ. ಇಷ್ಟೊಂದು ಹಣವನ್ನು ನಂಬಿದ ಭಕ್ತ ಸಮುದಾಯದವರು ಹಾಗೂ ನಿಮ್ಮಂತ ಆಸ್ತಿಕ ಮಹಾಶಯರಿಂದ ಕ್ರೋಢೀಕರಿಸಬೇಕು ಎಂದು ಶ್ರೀ ದೇವಿ ಚಕ್ರೇಶ್ವರಿ ಅಮ್ಮನವರ ಪ್ರೇರಣೆ. ತಾವುಗಳು ಈ ನಮ್ಮ ನಿವೇಧನೆಗೆ ಸ್ಪಂದಿಸಿ ಹೆಚ್ಚಿನ ಆರ್ಥಿಕ ಸಹಕಾರವನ್ನು ನೀಡಿ ಶ್ರೀ ತಾಯಿ ಚಕ್ರೇಶ್ವರಿ ಅಮ್ಮನವರು ಹಾಗೂ ಪರಿವಾರ ದೈವವಾದ ಹ್ಯಾಗೂಳಿ, ನಂದಿಕೇಶ್ವರ ಮತ್ತು ಕೋಳೆರಾಯ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗುವರೇ ತಮ್ಮಲ್ಲಿ ವಿನಂತಿಸುತ್ತಿದ್ದೇವೆ.

ಭವದೀಯ ಪ್ರಣಾಮಗಳೊಂದಿಗೆ..
ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನ, ಕೋಡಿ ಕನ್ಯಾಣ

ವಿ.ಸೂ.: ನಮ್ಮ ದೇಗುಲದ ಬ್ಯಾಂಕ್‌ ಖಾತೆಯ
ವಿವರ:- ಶ್ರೀ ಚಕ್ರೇಶ್ವರಿ ಅಮ್ಮನವರ ದೇವಸ್ಥಾನ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಶಾಖೆ ಪಾಂಡೇಶ್ವರ-ಸಾಸ್ತಾನ

ಉಳಿತಾಯ ಖಾತೆ ಸಂಖ್ಯೆ : 520101265959579 IFSC CODE: UBIN0901792

Leave a Reply

Your email address will not be published. Required fields are marked *