ಮಂಕಿ ದೇವರಗದ್ದೆ ಕೊಂಕಣಿ ಖಾರ್ವಿ ಸಮಾಜದಿಂದ ವಿದ್ಯಾನಿಧಿ ಯೋಜನೆ ಕಾರ್ಯಕ್ರಮ

ಹೊನ್ನಾವರ: ಮಂಕಿ ದೇವರಗದ್ದೆ
ಕೊಂಕಣಿ ಖಾರ್ವಿ ಸಮಾಜದ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಮಿತಿ ಆಯೋಜಿಸಿದ್ದ ಸಾಂಸ್ಕ್ರತಿಕ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉದ್ಯಮಿ ದೀಪಕ್ ನಾಯ್ಕ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕೊಂಕಣಿ ಖಾರ್ವಿ ಸಮಾಜ ವಿದ್ಯಾನಿಧಿ ಯೋಜನೆಗೆ ಚಾಲನೆಯನ್ನು ನೀಡಲಾಯಿತು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಉದ್ಯಮಿ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದೀಪಕ್ ನಾಯ್ಕ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರಾರಂಭಿಸಿದ ವಿದ್ಯಾನಿಧಿ ಯೋಜನೆಗೆ ಅಭಿನಂದನೀಯ ಮೆಚ್ಚುಗೆ ವ್ಯಕ್ತಪಡಿಸಿದರು

ಅಧ್ಯಕ್ಷತೆಯನ್ನು ವಹಿಸಿದ್ದಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಸಾರಂಗರವರು ಮಾತನಾಡಿ ಮಂಕಿ ಗ್ರಾಮದ ವಿದ್ಯಾರ್ಥಿಗಳು ಪ್ರತಿಭಾವಂತರು ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಪ್ರಾರಂಭಿಸಿದ ವಿದ್ಯಾನಿಧಿ ಯೋಜನೆಗೆ ಅಭಿನಂದನೆಯನ್ನು ವ್ಯಕ್ತಪಡಿಸಿದರು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಅಧಿಕಾರೇತರ ಸದಸ್ಯ ಸುರೇಶ್ ಖಾರ್ವಿ ಮಾತನಾಡಿ ಕೊಂಕಣಿ ಸಮಾಜ ಬಾಂಧವರು ಸಾಹಸಿಗರು ಕ್ರೀಡಾಪಟುಗಳು ಹಾಗೂ ಮನೋರಂಜನಾ ಪ್ರಿಯರು ಶಿಕ್ಷಣಕ್ಕೆ ಕ್ರೀಡಾ ಚುಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಸಂಘಟನೆಯನ್ನು ಸ್ಥಾಪಿಸಲಾಗಿದೆ ಎಂದರು.

ವೇದಿಕೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಮೇಸ್ತ ಅಖಿಲ ಭಾರತ ಕೊಂಕಣಿ ಮಹಾಸಭಾದ ನಿರ್ದೇಶಕ ತಿಮ್ಮಪ್ಪ ಖಾರ್ವಿ ಭಟ್ಕಳ ಮಂಕಿ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಮಂಜುನಾಥ ಮೊತ್ಯಾ ಖಾರ್ವಿ, ಮೀನುಗಾರರ ಸಹಕಾರಿ ಸಂಘದ ಮಂಕಿ ಅಧ್ಯಕ್ಷ ಉಮೇಶ್ ಖಾರ್ವಿ, ಪತ್ರಕರ್ತ ವೆಂಕಟೇಶ ಮೇಸ್ತ, ತಾಲೂಕ ಕೊಂಕಣಿ ಖಾರ್ವಿ ಸಮಾಜದ ಪ್ರಧಾನ ಕಾರ್ಯದರ್ಶಿ ಕೇಶವ ತಾಂಡೇಲ್ , ಸಾಂಪ್ರದಾಯಿಕ ನಾಡದೋಣಿ ಸಂಘದ ಅಧ್ಯಕ್ಷ ಅಣ್ಣಪ್ಪ ಖಾರ್ವಿ, ಕೊಂಕಣಿ ಖಾರ್ವಿ ಸಮಾಜ ಮಂಕಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ ಖಾರ್ವಿ ಮುಂತಾದವರು ಉಪಸ್ಥಿತಿ ಇದ್ದರೂ

ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಗ್ರಾಮಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಕಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊಂಕಣಿ ಖಾರ್ವಿ ಸಮಾಜ ಭಾಂದವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ ಮೀನುಗಾರಿಕೆ ವೃತ್ತಿಯನ್ನು ನಂಬಿ ಬದುಕು ನಡೆಸುತ್ತಿರುವ ಖಾರ್ವಿ ಮೀನುಗಾರರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾನಿಧಿ ಯೋಜನೆಯನ್ನು ಆರಂಭಿಸಲಾಗಿದ್ದು ಭಟ್ಕಳದ ಮಾಜಿ ಶಾಸಕ ಶ್ರೀ ಮಂಕಾಳ ವೈದ್ಯರವರು ವಿದ್ಯಾನಿಧಿ ಯೋಜನೆಗೆ ಒಂದು ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಯನ್ನು ನೀಡುವುದಾಗಿ ಭರವಸೆಯನ್ನು ನೀಡಿದರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಈ ವಿದ್ಯಾನಿಧಿ ಯೋಜನೆಗೆ ಧನಸಹಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೊಂಕಣಿ ಖಾರ್ವಿ ಸಮಾಜದ ಪ್ರತಿ ಕಾರ್ಯಕ್ರಮದಲ್ಲೂ ತಮ್ಮ ವೈಯಕ್ತಿಕ ಪಲಾಪೇಕ್ಷೆ ಇಲ್ಲದೆ ಸಮಾಜದ ಉನ್ನತಿಗಾಗಿ ಹಾಗೂ ಸಮಾಜದ ಸೇವೆಗಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಸಲ್ಲಿಸಿರುವ ಗೋವಿಂದ ಖಾರ್ವಿ, ಕೃಷ್ಣ ಖಾರ್ವಿ, ರವಿ ಖಾರ್ವಿ ಇವರಿಗೆ ” ಕೊಂಕಣಿ ಖಾರ್ವಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿ “ಯಿಂದ ಸನ್ಮಾನಿಸಲಾಯಿತು

ವರದಿ: ರಾಘವೇಂದ್ರ ಖಾರ್ವಿ
kharvionline ಮಂಕಿ ಪ್ರತಿನಿಧಿ

Leave a Reply

Your email address will not be published. Required fields are marked *