ಸನ್ಮಾನ ಸಮಾರಂಭ

ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಮುಖವಾಗಿ ವಿಜೃಂಭಿಸುವ ಹೋಳಿ ಜನಪದ ಹಾಡುಗಳಿಗೆ ಭವ್ಯ ಇತಿಹಾಸವಿದ್ದು, ತಲೆತಲಾಂತರದಿಂದ ಬಂದ ಹೋಳಿಹಾಡುಗಳ ಜೊತೆಗೆ ದಿವಂಗತ ವಾಸುದೇವ ನಾಯ್ಕರಿಂದ ರಚಿಸಲ್ಪಟ್ಟ ಹೋಳಿಹಾಡುಗಳು ವಿಜೃಂಭಿಸುತ್ತದೆ. ಸತ್ವಭರಿತ ಮತ್ತು ಅರ್ಥಗರ್ಭಿತ ಸಾಹಿತ್ಯಗಳನ್ನೊಳಗೊಂಡ ಈ ಹೋಳಿಹಾಡುಗಳಿಗೆ ಪರಿಪಕ್ವತೆಯ ಜೀವ ತುಂಬಿದವರು ನಮ್ಮ ಸಮಾಜದ ಹೆಮ್ಮೆಯ ಗಾಯಕ ಮುಕುಂದ ಖಾರ್ವಿ.ಅವರ ಕಂಚಿನ ಕಂಠದಲ್ಲಿ ಎಲ್ಲೆಡೆ ಮಾರ್ಧನಿಸುವ ಹೋಳಿಹಬ್ಬದ ಹಾಡುಗಳು ಸವಿಸೊಬಗಿನ ರಸಾಯನವಾಗಿ ಅನಾವರಣಗೊಳ್ಳುತ್ತದೆ.ಹಲವು ವರ್ಷಗಳಿಂದ ಹೋಳಿಹಾಡುಗಳಿಗೆ ತಮ್ಮ ಕಂಠಸಿರಿಯಿಂದ ಜೀವ ತುಂಬಿ ಜನಪ್ರಿಯಗೊಳಿಸಿದ ಮುಕುಂದ ಖಾರ್ವಿಯವರಿಗೆ ಖಾರ್ವಿ ಆನ್ಲೈನ್ ವತಿಯಿಂದ ಹೋಳಿಮನೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸುವ ಕಾರ್ಯಕ್ರಮವಿದೆ.
,
ತನ್ನ ಕಂಠಸಿರಿಯಿಂದ ಹೋಳಿಹಬ್ಬದ ಜನಪದ ಹಾಡುಗಳಿಗೆ ಜೀವ ತುಂಬಿದ ಮುಕುಂದ ಖಾರ್ವಿಯವರ ಅವಿರತ ಸೇವೆಗಾಗಿ ಸಲ್ಲಲ್ಪಡುವ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಸಮಾಜ ಭಾಂದವರೆಲ್ಲರೂ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.

www.kharvionline.com

Leave a Reply

Your email address will not be published. Required fields are marked *