ಹೋಳಿಹಬ್ಬದ ಜನಪದ ಹಾಡು ಮತ್ತು ಖಾರ್ವಿ ಚೇತನ ವಾಸುದೇವ ನಾಯ್ಕರು ರಚಿಸಿದ ಹೋಳಿಹಾಡುಗಳಿಗೆ ಜೀವಕಳೆ ತುಂಬಿ ಜನಪ್ರಿಯಗೊಳಿಸಿದ ನಮ್ಮ ಸಮಾಜದ ಹೆಮ್ಮೆಯ ಗಾಯಕ ಮುಕುಂದ ಖಾರ್ವಿಯವರನ್ನು ಹೋಳಿಮನೆ ವೇದಿಕೆಯಲ್ಲಿ ಸರ್ವ ಸಮಾಜ ಭಾಂದವರ ಪರವಾಗಿ ಖಾರ್ವಿ ಆನ್ಲೈನ್ ಪ್ರಸ್ತುತಿಯಲ್ಲಿ ಅರ್ಥಪೂರ್ಣವಾಗಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮುಕುಂದ ಖಾರ್ವಿಯವರು ಮಾತನಾಡಿ ಈ ಸನ್ಮಾನ ತನಗೆ ಅತ್ಯಂತ ಸಂತೋಷ ನೀಡಿದ್ದು , ಸಮಾಜ ಭಾಂದವರ ಸಮಕ್ಷಮದಲ್ಲಿ ತನಗೆ ನೀಡಿದ ಗೌರವ ಅರ್ಥಪೂರ್ಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯಾನಂದ ಖಾರ್ವಿ, ,ಅಖಿಲ ಭಾರತ ಕೊಂಕಣಿ ಖಾರ್ವಿ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ತಾಂಡೇಲ್, ವಿದ್ಯಾರಂಗ ಮಿತ್ರಮಂಡಳಿ ಅಧ್ಯಕ್ಷರಾದ ಗಣೇಶ್ ನಾಯ್ಕ್, ಖಾರ್ವಿ ಆನ್ಲೈನ್ ಸಂಪಾದಕ ಮತ್ತು ಹೋಳಿಮನೆಯ ಸುಧಾಕರ್ ಖಾರ್ವಿ, ಶ್ರೀ ರಾಮ್ ಪ್ರಸನ್ನ ಖಾರ್ವಿ ಕುಮಟಾ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ವೀಣಾ ಶೇಖರ್ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಹೋಳಿಹಬ್ಬದ ಆಚರಣೆಯ ಅಂಗವಾಗಿ ಇಂದು ಸೋಮವಾರ ಹೋಳಿಕಾಮದಹನ ನಡೆದ ಬಳಿಕ ಹೋಳಿಮನೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳು ನಡೆಯಲಿದೆ. ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿಜ್ಞಾಪನೆ.
www.kharvionline.com