ಖಾರ್ವಿಕೇರಿ ಫ್ರೆಂಡ್ಸ್ ಗ್ರೂಪ್ ನ ಸಾಮಾಜಿಕ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಅಭಿನಂದನೆಗಳು.
ಇಡೀ ಊರಿಗೆ ಊರೇ ಹೋಳಿಹಬ್ಬದ ಸಂಭ್ರಮದಲ್ಲಿ ನಲಿದಾಡುತ್ತಿರುವಾಗ ಖಾರ್ವಿಕೇಳಕೇರಿಯ ಫ್ರೆಂಡ್ಸ್ ಗ್ರೂಪ್ ನ ಯುವಮನಸ್ಸುಗಳು ಒಂದಿಷ್ಟು ಬಡವರ ಮತ್ತು ಅಸಹಾಯಕರ ನೋವಿಗೆ ದ್ವನಿಯಾಗುವ, ಅವರಿಗೆ ಒಂದಿಷ್ಟು ನೆರವು ನೀಡುವ ಕಾಯಕದಲ್ಲಿ ತಮ್ಮನ್ನು ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡಿತ್ತು. ಪರಿಸರದ ಎಂಟು ಬಡ ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಹಾಯಧನ ನೀಡುವ ಮೂಲಕ ಹೋಳಿಹಬ್ಬವನ್ನು ವಿಭಿನ್ನವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ಈ ಯುವಕರ ಮಾನವೀಯ ಕಾರ್ಯ ಇತರರಿಗೆ ಮಾದರಿಯಾಗಿದೆ ನಮ್ಮಲ್ಲಿನ ನಕರಾತ್ಮಕ ಚಿಂತನೆಗಳನ್ನು ದೂರೀಕರಿಸಿ ಸಕರಾತ್ಮಕ ಚಿಂತನೆಗಳನ್ನು ಆಳವಡಿಸಿಕೊಳ್ಳುವುದು ಹೋಳಿಹಬ್ಬ ಆಚರಣೆಯ ಮುಖ್ಯ ತಿರುಳಾಗಿದೆ. ಈ ಚಿಂತನೆ ಇಲ್ಲಿ ಅರ್ಥಪೂರ್ಣವಾಗಿ ಅನಾವರಣಗೊಂಡಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕರ್ತರಾಗಿರುವ ಶ್ರೀ ಮಹಾಕಾಳಿ ದೇವಸ್ಥಾನದ ಸಲಹೆಗಾರರಾಗಿರುವ ಅಜಂತ ಖಾರ್ವಿಯವರನ್ನು ಸನ್ಮಾನಿಸಲಾಯಿತು.