ಮಂಕಿ ಕಡಲತೀರದಲ್ಲಿ ಮೀನುಗಾರಿಕೆ ಬಂದರು ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಮೀನುಗಾರಿಕೆ ಸಚಿವ ಶ್ರೀ ಪುರುಷೋತ್ತಮ ರೂಪಾಲ ಅವರೊಂದಿಗೆ ಅವರ ಧರ್ಮ ಪತ್ನಿಯೂ ಸಹ ಅವರೊಟ್ಟಿಗೆ ಪ್ರವಾಸದಲ್ಲಿದ್ದು ಸ್ಥಳೀಯ ಕಾಸರಕೋಡ ಟೊಂಕದ ಮೀನುಗಾರ ಮಹಿಳೆಯರು ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಂಡು ಕೇಂದ್ರ ಸಚಿವರಿಂದ ತಮಗೆ ನ್ಯಾಯ ದೊರಕಿಸಿಕೊಡುವಂತೆ ಪರಿಪರಿಯಾಗಿ ಕೋರಿದ ದ್ರಶ್ಯ ಮತ್ತು ಸಚಿವರ ಧರ್ಮ ಪತ್ನಿ ಸ್ಪಂದಿಸಿದ ರೀತಿ ಸಚಿವರು ಎಲ್ಲರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ ರೀತಿ ಎಲ್ಲರ ಗಮನ ಸೆಳೆಯಿತು. ಮಂಕಿ ಬಂದರು ನಿರ್ಮಾಣದ ಕುರಿತು ಸ್ಥಳೀಯವಾಗಿ ಪರ ಮತ್ತು ವಿರೋಧದ ದ್ವಂದ್ವ ನಿಲುವು ವ್ಯಕ್ತವಾದವು. ಮಂಕಿ ಕಡಲ ತೀರವು ಸಾಂಪ್ರದಾಯಿಕ ಮೀನುಗಾರಿಕೆಯ ತಾಣವಾಗಿದೆ ಇಲ್ಲಿ ಬಂದರು ನಿರ್ಮಾಣದ ಅಗತ್ಯವಿದೇಯೇ ಎನ್ನುವುದು ಹಲವರ ಅಭಿಪ್ರಾಯ ವಾಗಿದೆ.
ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮತ್ತು ಪರ್ಶಿನ ಬೋಟ್ ಮಾಲೀಕರ ಸಂಘದ ವಿವನ್ ಫರ್ನಾಂಡಿಸ್ ನೇತೃತ್ವದ ನಿಯೋಗವು ಇಂದು ಕೇಂದ್ರದ ಮೀನುಗಾರಿಕೆ ಸಚಿವ ಶ್ರೀ ಪುರುಷೋತ್ತಮ ರೂಪಾಲ ಮತ್ತು ಮೀನುಗಾರಿಕೆ ಸಚಿವ ಡಾ. ಎಲ್. ಮುರುಗನ್ ಮತ್ತು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ರವರನ್ನು ಹೊನ್ನಾವರ ಮಂಕಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಮತ್ತು ಮೀನುಗಾರರಿಗೆ ಪರ್ಶಿನ ಟ್ರಾಲರ ಮತ್ತು ಗಿಲ್ನೆಟ್ ಬೋಟುಗಳ ಖರೇದಿ ವ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡಬೇಕು, ಕಾಸರಕೋಡ ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಹಾಗೂ ಅಳಿವೆಯ ಹೂಳೆತ್ತಿಸುವ ಕಾಮಗಾರಿಗೆ ಚಾಲನೆ ನೀಡಬೇಕು. ಮೀನುಗಾರರ ಹಿತರಕ್ಷಣೆ ಮತ್ತು ಮೀನುಗಾರಿಕೆಗೆ ಪೂರಕವಾಗಿ ಕರಾವಳಿ ತೀರಗಳನ್ನು ಮತ್ತು ಸುಂದರ ಪರಿಸರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿಆರ್ ಝೆಡ್ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು ರೇಖಾ ತಾಂಡೇಲ್ ನೇತೃತ್ವದ ಮಹಿಳಾ ಪ್ರಮುಖರ ನಿಯೋಗವು ಮೀನುಗಾರಿಕೆ ಸಚಿವರನ್ನು ಭೇಟಿ ಮಾಡಿ ಕಾಸರಕೋಡ ಟೊಂಕದಲ್ಲಿ ಬಲವಂತದಿಂದ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು.
ಸ್ಥಳೀಯರ ಹೋರಾಟವನ್ನು ಹತ್ತಿಕ್ಕಲು ಮೀನುಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲು ಮಾಡಲಾಗಿದೆ. ಮೀನುಗಾರ ಪ್ರಮುಖರ ಮೇಲೆ ಗುಂಡಾಕಾಯ್ದೆ ಹೇರಿ ದೌರ್ಜನ್ಯ ನಡೆಸುತ್ತಿರುವ ಸ್ಥಳೀಯ ಆಡಳಿತದ ಕ್ರಮವನ್ನು ತಡೆಯಬೇಕು ಎಂದರು. ಕರಾವಳಿ ಮೀನುಗಾರರ ವಿವಿಧ ಸಮಸ್ಯೆಗಳ ಬಗ್ಗೆ ಸಚಿವ ರೊಂದಿಗೆ ಚರ್ಚಿಸಿ ಜಿಲ್ಲೆಯ ಮೀನುಗಾರಿಕೆ ವಲಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮೀನುಗಾರ ಪ್ರಮುಖರು ಸಚಿವರಲ್ಲಿ ಆಗ್ರಹ ಪಡಿಸಿದರು. ನೀಯೋಗದಲ್ಲಿ ಚಂದ್ರಕಾಂತ ಕೊಚರೇಕರ ಡಾ. ಪ್ರಕಾಶ ಮೇಸ್ತ ಕರಾವಳಿ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್,ವಿವನ್ ಫರ್ನಾಂಡಿಸ್, ರೇಖಾ ತಾಂಡೇಲ್, ಪಾರ್ವತಿ ತಾಂಡೇಲ, ಭಾಷ್ಕರ ತಾಂಡೇಲ್, ಚೇತನಾ ತಾಂಡೇಲ್, ರಮೇಶ್ ತಾಂಡೇಲ್, ಕಾರ್ತಿಕ ತಾಂಡೇಲ್, ರಾಘವ, ವೆಂಕಟೇಶ್ ಮೇಸ್ತ ಮುಂತಾದ ಮೀನುಗಾರಪ್ರಮುಖರು ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಮೀನುಗಾರಿಕೆ ಮುಖ್ಯಕಾರ್ಯದರ್ಶಿ ಜತೀಂದ್ರ ಶೋಯಲ. ಮೀನುಗಾರಿಕೆ ನಿರ್ಧೇಶಕ ರಾಜಕುಮಾರ ಹೆಡೆ, ಉಪನಿರ್ದೇಶಕ ಪ್ರತೀಕ ಮತ್ತು ಕೇಂದ್ರದ ವಾರ್ತಾ ಇಲಾಖೆಯ ವಿವಿಧ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಈಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಶಾಸಕ ಸುನೀಲ ನಾಯ್ಕ ಮತ್ತು ಹಲವು ಬಿಜೆಪಿ ಪ್ರಮುಖರ ಅನುಪಸ್ಥಿತಿ ಅನೇಕ ಉಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ವರದಿ: ಚಂದ್ರಕಾಂತ ಕೊಚರೇಕರ